Sunday, August 23, 2026
Sunday, August 23, 2026

Zee Kannada ಮಾರ್ಚ್ 17 ರಂದು ಜೀ ಕನ್ನಡ ವಾಹಿನಿಯಿಂದ ಶಿವಮೊಗ್ಗದಲ್ಲಿ ಡಾನ್ಸ್ ಕರ್ನಾಟಕ ಡಾನ್ಸ್ ಗೆ ಆಡಿಷನ್

Date:

Zee Kannada ತನ್ನ ವಿಭಿನ್ನ ರಿಯಾಲಿಟಿ ಶೋಗಳ ಮೂಲಕ ಕರುನಾಡನ್ನ ರಂಜಿಸುತ್ತ ಬಂದಿರುವ ಜೀ ಕನ್ನಡ ವಾಹಿನಿಯು, ಈಗ ತನ್ನ ಹಿಟ್ ರಿಯಾಲಿಟಿ ಶೋಗಳಾದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮತ್ತು ಕಾಮಿಡಿ ಕಿಲಾಡಿಗಳನ್ನ ಮತ್ತೆ ತೆರೆಗೆ ತರಲು ತಯಾರಿ ನಡೆಸಿದೆ. 7 ಸೀಸನ್‌ಗಳನ್ನ ಯಶಸ್ವಿಯಾಗಿ ಪೂರೈಸಿರುವ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್ ಈಗ ತನ್ನ 8 ನೇ ಆವೃತ್ತಿಯೊಂದಿಗೆ ಮತ್ತೆ ಕರುನಾಡನ್ನ ಕುಣಿಸಲು ತಯಾರಾಗಿದೆ.ಈಗಾಗಲೇ ಸಾಕಷ್ಟು ಯುವ ನೃತ್ಯ ನಿರ್ದೇಶಕರನ್ನ ಸ್ಯಾಂಡಲ್ ವುಡ್ಡಿಗೆ ನೀಡಿರುವ ಈ ರಿಯಾಲಿಟಿ ಶೋ ಮತ್ತಷ್ಟು ನೃತ್ಯ ನಿರ್ದೇಶಕರನ್ನ ಹುಟ್ಟು ಹಾಕುವ ಕೆಲಸವನ್ನ ಈ ಆವೃತ್ತಿಯಲ್ಲಿ ಮತ್ತೆ ಮಾಡಲಿದೆ.
ಇದರ ಜೊತೆಜೊತೆಗೆ ಸತತ 4 ಹಿಟ್ ಸೀಸನ್ನುಗಳನ್ನ ಕೊಟ್ಟಿರುವ ಕರುನಾಡಿನ ನೆಚ್ಚಿನ ರಿಯಾಲಿಟಿ ಶೋಗಳಲ್ಲಿ ಒಂದಾದ ಕಾಮಿಡಿ ಕಿಲಾಡಿಗಳು ಈಗಾಗಲೇ ಸಾಕಷ್ಟು ಕಾಮಿಡಿ ಕಲಾವಿದರನ್ನ ಕರುನಾಡಿಗೆ ನೀಡಿರುವುದು ಈಗ ಇತಿಹಾಸ.ವೇದಿಕೆಗಾಗಿ ಕಾಯುತ್ತಿರುವ ಅದೆಷ್ಟೋ ಹಾಸ್ಯ ನಟನಟಿಯರ ಕನಸನ್ನ ನನಸು ಮಾಡುತ್ತಿರುವ ಈ ರಿಯಾಲಿಟಿ ಶೋ ಈ ಬಾರಿ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಎಂಬ ಹೊಸ ರೂಪದಲ್ಲಿ ಕರುನಾಡಿನ ಮುಂದೆ ಬರಲಿದೆ. ಈ ಹಂತದಲ್ಲಿ ಇದಕ್ಕೆ
ಪೂರ್ವಬಾವಿ ತಯಾರಿ ಎಂಬಂತೆ ಆಡಿಷನ್ ಪ್ರಕ್ರಿಯೇ ಕರುನಾಡಿನಾದ್ಯಂತ ಶುರುವಾಗಿದೆ.

Zee Kannada ಇದೇ ಮಾರ್ಚ್ 17 ರಂದು ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ರವರೆಗೆ ಬಸವೇಶ್ವರ ವಿದ್ಯಾಸಂಸ್ಥೆ,ಹಳೆ ತಾಲ್ಲೂಕು ಆಫೀಸ್ ರೋಡ್,ವೀರಶೈವ ಕಲ್ಯಾಣ ಮಂಟಪ ಹತ್ತಿರ,ಶಿವಮೊಗ್ಗ.ಇಲ್ಲಿ ಆಡಿಷನ್ ನಡೆಯಲಿದೆ.
ಆಡಿಷನಲ್ಲಿ ಭಾಗವಹಿಸಲು ಇಚ್ಚಿಸುವವರು ಅಡ್ರಸ್ ಪ್ರೂಪ್ ಜೆರಾಕ್ಸ್ ಜೊತೆ ಎರಡು ಪಾಸ್ ಪೋರ್ಟ್ ಸೈಜ್ ಪೋಟೊದೊಂದಿಗೆ ಆಡಿಷನ್ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದ್ದು,ಜೀ ಕನ್ನಡ ವಾಹಿನಿಯು ಈ ಆಡಿಷನ್ಗೆ ಯಾವುದೇ ಶುಲ್ಕು ವಿಧಿಸಿರುವುದಿಲ್ಲವೆಂದು ಸ್ಪಷ್ಟ ಪಡಿಸಿದೆ ಹಾಗು ವಾಹಿನಿಯ ಹೆಸರಲ್ಲಿ ಹಣ ಕೇಳುವವರ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ತಿಳಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Karnataka Nataka Academy 2026-27 ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ‌ ಪ್ರಶಸ್ತಿ‌ ಘೋಷಣೆ

Karnataka Nataka Academy ಕರ್ನಾಟಕ ನಾಟಕ ಅಕಾಡೆಮಿಯ 2026-27ನೇ ಸಾಲಿನ ಜೀವಮಾನ...

Paripurna Educational Charitable Trust ನಿತ್ಯ ದೇಹಕ್ಕೆ ಅಗತ್ಯವಿರುವಷ್ಟು ನೀರು ಸೇವಿಸಿ. ಸದೃಢ ಆರೋಗ್ಯ ಸಾಧಿಸಿ- ಸತೀಶ್ ಚಂದ್ರ

ಮಕ್ಕಳು ಪ್ರತಿ ದಿನ ದೇಹಕ್ಕೆ ಅಗತ್ಯ ಇರುವಷ್ಟು ನೀರು ಕುಡಿಯಬೇಕು. ಅಗತ್ಯವಿರುವಷ್ಟು...