ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕು ವ್ಯಾಪ್ತಿಯ ಸ್ಥಿರಾಸ್ತಿಗಳಿಗೆ ಸಂಬಧಿಸಿದಂತೆ 2026-27ನೇ ಸಾಲಿನ ಮಾರ್ಗಸೂಚಿ ಮಾರುಕಟ್ಟೆ ದರ ಪಟ್ಟಿಯನ್ನು ಪರಿಷ್ಕರಿಸುವ ನಿಟ್ಟಿನಲ್ಲಿ ತಾತ್ಕಾಲಿಕ ಪರಿಷ್ಕೃತ ಮಾರ್ಗಸೂಚಿ ದರಪಟ್ಟಿಯನ್ನು ಪ್ರಕಟಿಸಲಾಗಿದೆ.
ದಿನಾಂಕ: 03/11/2026 ರಂದು ಮಾನ್ಯ ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ಹಾಗೂ ಅಧ್ಯಕ್ಷರು, ಕೇಂದ್ರ ಮೌಲ್ಯಮಾಪನ ಸಮಿತಿ, ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಸೂಚನೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ. ಇದರನ್ವಯ ದಿನಾಂಕ: 13/11/2026 ರಂದು ನಡೆದ ಶಿಕಾರಿಪುರ ತಾಲ್ಲೂಕು ಮೌಲ್ಯ ಮಾಪನ ಉಪ ಸಮಿತಿಯ ಸಭೆಯಲ್ಲಿ ತೀರ್ಮಾನಿಸಿ, ಸಭಾ ನಡವಳಿಕೆಯಂತೆ ತಾತ್ಕಾಲಿಕ ಪರಿಷ್ಕೃತ ಮಾರ್ಗಸೂಚಿ ದರಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಈ ತಾತ್ಕಾಲಿಕ ಪರಿಷ್ಕೃತ ಮಾರ್ಗಸೂಚಿ ದರಪಟ್ಟಿಯನ್ನು ಶಿಕಾರಿಪುರ ತಾಲ್ಲೂಕಿನ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ದಿನಾಂಕ: 13/11/2026 ರಂದು ಪ್ರಕಟಿಸಲಾಗಿದೆ.
ಈ ಪರಿಷ್ಕೃತ ಮಾರ್ಗಸೂಚಿ ದರಪಟ್ಟಿಯಲ್ಲಿ ಬಿಟ್ಟುಹೋಗಿರುವ ಪ್ರದೇಶ, ರಸ್ತೆ ಹಾಗೂ ಬಡಾವಣೆಗಳ ಕುರಿತಾದ ಮಾಹಿತಿ ಹಾಗೂ ಪರಿಷ್ಕೃತ ಮಾರ್ಗಸೂಚಿ ದರಪಟ್ಟಿಯ ಕುರಿತು ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆಸಕ್ತರು ಈ ಕುರಿತಾದ ಲಿಖಿತ ಅಹವಾಲುಗಳನ್ನು ದಿನಾಂಕ: 28/11/2026 ರವರೆಗೆ (15 ದಿನಗಳ ಕಾಲಾವಕಾಶ) ಕಚೇರಿ ವೇಳೆಯಲ್ಲಿ ಉಪನೋಂದಣಾಧಿಕಾರಿಗಳ ಕಚೇರಿ, ಶಿಕಾರಿಪುರ ಇವರಿಗೆ ಸಲ್ಲಿಸಬಹುದಾಗಿದೆ ಎಂದು ಸದಸ್ಯ ಕಾರ್ಯದರ್ಶಿಗಳು, ಮೌಲ್ಯ ಮಾಪನ ಉಪ ಸಮಿತಿ ಹಾಗೂ ಉಪ ನೋಂದಣಾಧಿಕಾರಿಗಳು, ಶಿಕಾರಿಪುರ ಇವರು ತಿಳಿಸಿದ್ದಾರೆ.
ಶಿಕಾರಿಪುರ ತಾಲ್ಲೂಕಿನ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿ ಪರಿಷ್ಕರಣೆ ಪ್ರಕಟ. ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ
Date:
