Tuesday, November 17, 2026
Tuesday, November 17, 2026

ನೇರ ಗುತ್ತಿಗೆ ಆಧಾರದಲ್ಲಿ ಬಿಐಇಆರ್ ಟಿ ವಿಶೇಷ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ

Date:

ಶಾಲಾ ಶಿಕ್ಷಣ ಇಲಾಖೆಯು 2026-27ನೇ ಸಾಲಿನ ಸಮನ್ವಯ ಶಿಕ್ಷಣ ಮಧ್ಯವರ್ತನೆಯಡಿಯಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ 7 ತಾಲೂಕುಗಳಲ್ಲಿ ಖಾಲಿಯಿರುವ ಬಿಐಇಆರ್‌ಟಿ ವಿಶೇಷ ಶಿಕ್ಷಕರ ಹುದ್ದೆಗಳಿಗೆ ನೇರ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪ್ರಾಥಮಿಕ ಹಂತ (1 ರಿಂದ2) ತಯಾರಿ ಹಂತ (3 ರಿಂದ 5) – 1 ರಿಂದ 5ನೇ ತರಗತಿಯವರೆಗೆ – ಆರ್.ಸಿ.ಐ. ನಿಂದ ಮಾನ್ಯತೆ ಹೊಂದಿರುವ ಸಂಸ್ಥೆಯಿಂದ ಡಿ.ಇಡಿ. ಪದವಿಯನ್ನು ವಿಶೇಷ ಶಿಕ್ಷಣದಲ್ಲಿ ಹೊಂದಿರಬೇಕು ಹಾಗೂ ಆರ್.ಸಿ.ಐ.ನಿಂದ ಮಾನ್ಯವಾದ ಸಿ.ಆರ್.ಆರ್.ಸಂಖ್ಯೆ ಪಡೆದಿರಬೇಕು. ಅಥವಾ ಡಿಇಡಿ (ವಿಶೇಷ ಶಿಕ್ಷಣ) ಇದಕ್ಕೆ ಸಮಾನವಾದ ಡಿ.ಇಲ್.ಇಡಿ ಪದವಿ ಹೊಂದಿರಬೇಕು. ಇದು ಮಾನ್ಯತೆ ಹೊಂದಿರುವ ಸಂಸ್ಥೆಯಿಂದ ಪಡೆದಿದ್ದು, ಅರ್.ಸಿ.ಐ. ನಿಂದ ಮಾನ್ಯವಾದ ಸಿ.ಆರ್.ಆರ್. ಸಂಖ್ಯೆ ಪಡೆದಿರಬೇಕು. ಅಥವಾ ಸಮನ್ವಯ ಶಿಕ್ಷಣದಲ್ಲಿ ಪರಸ್ಪರ ವಿಕಲತಾ ಕ್ಷೇತ್ರಗಳಲ್ಲಿ 6 ತಿಂಗಳ ಬೋಧನಾ ತರಬೇತಿ ಹೊಂದಿರಬೇಕು.
ಮಾಧ್ಯಮ ಹಂತ (6 ರಿಂದ 8) ಪ್ರೌಢಶಾಲಾ ಹಂತ (9-12) – 6 ರಿಂದ 12ನೇ ತರಗತಿಯವರೆಗೆ ಆರ್.ಸಿ.ಐ. ನಿಂದ ಮಾನ್ಯತೆ ಹೊಂದಿರುವ ಸಂಸ್ಥೆಯಿಂದ ಬಿ.ಇಡಿ. ಪದವಿಯನ್ನು ವಿಶೇಷ ಶಿಕ್ಷಣದಲ್ಲಿ ಹೊಂದಿರಬೇಕು ಹಾಗೂ ಆರ್.ಸಿ.ಐ.ನಿಂದ ಮಾನ್ಯವಾದ ಸಿ.ಆರ್.ಆರ್.ಸಂಖ್ಯೆ ಪಡೆದಿರಬೇಕು. ಅಥವಾ ಬಿಇಡಿ (ವಿಶೇಷ ಶಿಕ್ಷಣ) ಪದವಿ ಹೊಂದಿರಬೇಕು. ಇದು ಮಾನ್ಯತೆ ಹೊಂದಿರುವ ಸಂಸ್ಥೆಯಿಂದ ಪಡೆದಿದ್ದು, ಅರ್.ಸಿ.ಐ. ನಿಂದ ಮಾನ್ಯವಾದ ಸಿ.ಆರ್.ಆರ್. ಸಂಖ್ಯೆ ಪಡೆದಿರಬೇಕು. ಅಥವಾ ಸಮನ್ವಯ ಶಿಕ್ಷಣದಲ್ಲಿ ಪರಸ್ಪರ ವಿಕಲತಾ ಕ್ಷೇತ್ರಗಳಲ್ಲಿ 6 ತಿಂಗಳ ಬೋಧನಾ ತರಬೇತಿ ಹೊಂದಿರಬೇಕು.
ಆಸಕ್ತರು ಉಪನಿರ್ದೇಶಕರು, ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ, ಶಿವಮೊಗ್ಗ ಇಲ್ಲಿಗೆ ಅಗತ್ಯ ಪೂರಕ ದಾಖಲೆಗಳೊಂದಿಗೆ ನ.19 ರೊಳಗಾಗಿ ಸಲ್ಲಿಸುವುದು. ಹಾಗೂ ಅರ್ಜಿಯಲ್ಲಿ ತಮ್ಮ ಮೊಬೈಲ್ ಸಂಖ್ಯೆನ್ನು ಕಡ್ಡಾಯವಾಗಿ ನಮೂದಿಸುವಂತೆ ಶಾಲಾ ಶಿಕ್ಷಣ ಇಲಾಖೆ ತಿಳಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimul ಸಹಕಾರಿ ರತ್ನ ಪ್ರಶಸ್ತಿ – ನನ್ನ ಜೀವನದ ಸ್ಮರಣೀಯ ಗೌರವ- ವಿದ್ಯಾಧರ್.

Shimul ನನ್ನ ಸಹಕಾರ ಕ್ಷೇತ್ರದ ಸೇವೆ ಮತ್ತು ಕಾರ್ಯವನ್ನು ಗುರುತಿಸಿ ಪ್ರತಿಷ್ಠಿತ...

Shivamogga News ಶಿವಮೊಗ್ಗದಲ್ಲಿ ಬಿಗಿಭದ್ರತೆಯಿಂದ ಗೆಜೆಟೆಡ್ ಪ್ರೊಬೆಷನರ್ಸ್ ಪೂರ್ವಭಾವಿ ಪರೀಕ್ಷೆ ಆರಂಭ.

Shivamogga News ಶಿವಮೊಗ್ಗ ನಗರದಲ್ಲಿ ಇಂದು ಗೆಜೆಟೆಡ್ ಪ್ರೊಬೇಷನರ್ಸ್ (ಗ್ರೂಪ್...

Rotary Shivamogga ಮಕ್ಕಳನ್ನು ಸುಸಂಸ್ಕೃತರನ್ನಾಗಿಸಿ,ಜೀವನ ಕೌಶಲವನ್ನು ಕಲಿಸುವುದು ಅವಶ್ಯ- ಕೆ.ಬಿ.ರವಿಶಂಕರ್.

Rotary Shivamogga ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವುದರ ಜೊತೆಗೆ ಅವರಲ್ಲಿ ಆತ್ಮವಿಶ್ವಾಸ,...