Gopala Krishna Beluru ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ಸ್ಥಗಿತಗೊಂಡ ಆತಂಕದಿಂದಾಗಿ ಜಿಲ್ಲೆಯಲ್ಲಿ ತೀವ್ರಗೊಂಡ ರಾಜಕೀಯ ವಾಕ್ಸಮರವು ಬಿಜೆಪ ಮತ್ತು ಕಾಂಗ್ರೆಸ್ ನಾಯಕರ ನಡುವೆ ಚಿನಕುರುಳಿ ಎಬ್ಬಿಸಿದೆ
ಹುಬ್ಬಳ್ಳಿ, ಬೆಳಗಾವಿಯಲ್ಲಿ ವಿಮಾನ ಹಾರಾಟವಿದ್ದರೆ ಶಿವಮೊಗ್ಗಕ್ಕೆ ಏಕೆ ತೊಂದರೆ ಎಂದು ಕೇಂದ್ರಕ್ಕೆ ಬೇಳೂರು ನೇರವಾಗಿ ಶಿವಮೊಗ್ಗ ಸಂಸದರಿಗೆ ಪ್ರಶ್ನೆಯ ಬಾಣ ಬಿಟ್ಟಿದ್ದಾರೆ.
ವಿಮಾನ ನಿಲ್ದಾಣದ ವಿಚಾರದಲ್ಲಿ ಸಂಸದರು ಜವಾಬ್ದಾರಿಯಿಂದ ನುಣುಚಿಕೊಂಡು ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆಂದು ಆರೋಪಿಸಿ
ಸಂಸದ ಬಿ.ವೈ. ರಾಘವೇಂದ್ರ ವಿರುದ್ಧ ಸಾಗರದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಮೋದಿ ಉದ್ಘಾಟಿಸಿದ ನಿಲ್ದಾಣಕ್ಕೆ ಕನಿಷ್ಠ ಎರಡು ವಿಮಾನ ಬಿಡಲು ಸಂಸದರಿಗೆ ಸಾಧ್ಯವಾಗುತ್ತಿಲ್ಲವೇ ಎಂದು ಬೇಳೂರು ವ್ಯಂಗ್ಯವಾಡಿದ್ದಾರೆ
ನೈಟ್ ಲ್ಯಾಂಡಿಂಗ್ ವ್ಯವಸ್ಥೆಗೆ ರಾಜ್ಯ ಸರ್ಕಾರದಿಂದ ಈಗಾಗಲೇ ₹10 ಕೋಟಿ ಅನುದಾನ ನೀಡಲಾಗಿದೆ ಎಂದ ಶಾಸಕ ಬೇಳೂರು
ರೈಲು ಸೇವೆ ತಂದಿರುವ ಸಂಸದರು ವಿಮಾನ ನಿಲ್ದಾಣದ ವಿಚಾರದಲ್ಲಿ ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲ
ವಿಡಂಬಿಸಿದ್ದಾರೆ
Gopala Krishna Beluru ಶಿವಮೊಗ್ಗ ಏರ್‌ಪೋರ್ಟ್ ಅನ್ನು ಖಾಸಗಿಯವರಿಗೆ ಅಥವಾ ಅಂಬಾನಿಗೆ ವಹಿಸುವ ಹುನ್ನಾರ ನಡೆದಿದೆಯೇ ?
ವಿಮಾನ ಸೇವೆ ಒದಗಿಸಲು ಸಾಧ್ಯವಾಗದಿದ್ದರೆ ನಿಲ್ದಾಣದ ಜಾಗವನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುವಂತೆ ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ ಸಂಸದರಿಗೆ ಸವಾಲು ಹಾಕಿರುವ ರೀತಿ ಕುಟುಕಿದ್ದಾರೆ.
ರಾಜ್ಯ ಸರ್ಕಾರದ ಮೇಲೆ ಆರೋಪಿಸುವುದನ್ನು ಬಿಟ್ಟು ಕೇಂದ್ರ ವಿಮಾನಯಾನ ಸಚಿವರ ಬಳಿ ನಿಯೋಗ ಕೊಂಡೊಯ್ಯಲು ಸಂಸದರಿಗೆ ಆಹ್ವಾನ ನೀಡುತ್ತೇನೆ
ಕೇಂದ್ರ ಸಚಿವರ ಭೇಟಿಗೆ ತಾವು ಹಾಗೂ ರಾಜ್ಯದ ಸಚಿವರು ಸಂಸದರೊಂದಿಗೆ ಬರಲು ಸಿದ್ಧ ಎಂದು ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ
