ಚಕ್ಕುಲಿ, ನಿಪ್ಪಟ್ಟು ಸೇರಿದಂತೆ 20ಕ್ಕೂ ಹೆಚ್ಚು ಬಗೆಯ ತಿನಿಸುಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಸ್ವಂತ ಪರಿಶ್ರಮದಿಂದ ಬದುಕು ಕಟ್ಟಿಕೊಂಡಿರುವ ಈ ಮಹಿಳೆಯ ಯಶಸ್ಸಿನ ಹಿಂದೆ ಗೃಹಲಕ್ಷ್ಮಿ ಯೋಜನೆ ಬೆನ್ನೆಲುಬಾಗಿದೆ. ಯೋಜನೆಯಿಂದ ದೊರೆತ ಹಣವನ್ನು ಸದ್ಬಳಕೆ ಮಾಡಿಕೊಂಡು ತಮ್ಮ ವ್ಯಾಪಾರವನ್ನು ವಿಸ್ತರಿಸಲು, ಆದಾಯ ಹೆಚ್ಚಿಸಿಕೊಳ್ಳಲು ಹಾಗೂ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದಾರೆ. ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಸಮೂಹ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಮಹಿಳೆಯರ ಕೈಗೆ ಆರ್ಥಿಕ ಶಕ್ತಿಯನ್ನು ನೀಡಿ, ಅವರ ಕನಸುಗಳಿಗೆ ಬಂಡವಾಳವಾಗಿ, ಸ್ವಂತ ಪರಿಶ್ರಮದ ಮೇಲೆ ನಿಲ್ಲುವ ಧೈರ್ಯ ತುಂಬಬೇಕು ಎಂಬ ಆಶಯದೊಂದಿಗೆ ಜಾರಿಗೆ ತಂದ ಗೃಹಲಕ್ಷ್ಮಿ ಯೋಜನೆ ಇಂತಹ ಬದುಕುಗಳಲ್ಲಿ ಸಾರ್ಥಕತೆಯನ್ನು ಕಂಡುಕೊಳ್ಳುತ್ತಿದೆ. ಒಬ್ಬ ಮಹಿಳೆಯ ಸ್ವಾವಲಂಬನೆಯ ಪಯಣಕ್ಕೆ ಸಿಕ್ಕ ಈ ಬಲ, ಗೃಹಲಕ್ಷ್ಮಿ ಯೋಜನೆಯಿಂದ ಬದುಕಿನಲ್ಲಿ ಹೊಸ ದಾರಿ ಕಂಡುಕೊಳ್ಳುತ್ತಿರುವ ಅಸಂಖ್ಯಾತ ಮಹಿಳೆಯರ ಆಶಯ ಮತ್ತು ಆತ್ಮವಿಶ್ವಾಸಕ್ಕೆ ಸಾಕ್ಷಿಯಾಗಿದೆ ಎಂದು ಮುಖ್ಯಮಂತ್ರಿಗಳು ನುಡಿದರು.
ವಿಶೇಷವೆಂದರೆ ಮಹಿಳೆಯರಲ್ಲಿ ಕೆಲವರು ತಾವು ತಂದ ಚಕ್ಕುಲಿಯನ್ನ
ಸೀಎಂ ಶಿವಕುಮಾರ್ ಅವರಿಗೆ ಸವಿಯಲು ನೀಡಿದರು.
