Monday, November 9, 2026
Monday, November 9, 2026

Klive Special Article ಬೆಳಕಿನ ಹಬ್ಬ. ಲೇ: ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ

Date:

Klive Special Article ದೀಪಾವಳಿ ಹಬ್ಬ ಬಹಳ ದೊಡ್ಡ ಸಂದೇಶವನ್ನೇ
ಕೊಡುತ್ತದೆ. ದೀಪಾವಳಿ ಎಂದರೆ ಕತ್ತಲನ್ನು ಸರಿಸಿ
ಬೆಳಕನ್ನು ಹರಿಸುವ ಹಬ್ಬ. ದುಷ್ಟ ಶಕ್ತಿಗಳನ್ನು ಸಂಹರಿಸಿ
ಒಳ್ಳೆಯದನ್ನು ತರುವ ಬೆಳಕಿನ ಹಬ್ಬ.
ನರಕಾಸುರನೆಂಬ ಅಜ್ಞಾನವನ್ನು ಓಡಿಸಿ ನಮಗೆ
ಸುಜ್ಞಾನವೆಂಬ ಬೆಳಕನ್ನು ತಂದು ಕೊಡುವ ಹಬ್ಬ.
ಹಿಂಸಾಚಾರ ಹೆಚ್ಚಾದಾಗಲೆಲ್ಲಾ ವಿಷ್ಣುವು ಒಂದೊಂದು ಅವತಾರವೆತ್ತಿ ಅದನ್ನು ಮೆಟ್ಟಿ ಹಾಕಿದ್ದಾನೆ.ರಾಕ್ಷಸರನ್ನು ಸಂಹಾರಮಾಡಿದ್ದಾನೆ. ಜಗತ್ತು ಕತ್ತಲಲ್ಲಿ ಇದ್ದಾಗಲೆಲ್ಲ ಬೆಳಕುನೀಡಿದ್ದಾನೆ. ಕತ್ತಲನ್ನು ಕಳೆದು ಬೆಳಕು ತರುವುದೇ ದೀಪಾವಳಿಯ ಉದ್ದೇಶ. ನರಕಚತುರ್ದಶಿ ಎಂದರೆ ವಿಷ್ಣುವು ನರಕಾಸುರನೆಂಬೊ ರಾಕ್ಷಸನನ್ನು ಸಂಹರಿಸಿದ ದಿನ. ತ್ರಯೋದಶಿಯಂದು ನೀರು ತುಂಬುವ ಹಬ್ಬ. ಮಾರನೆಯ ದಿನ ನರಕತುರ್ದ‌‌ಶಿ .ಇಂದು ಅಮಾವಾಸ್ಯೆ.
ಮಂಗಳವಾರದ ದಿನ(ನಾಳೆ)ಬಲಿ ಪಾಡ್ಯಮಿ ಹಬ್ಬ. ಈ ದೀಪಾವಳಿ ಹಬ್ಬದಲ್ಲಿ ಧನ,ಧಾನ್ಯಲಕ್ಷ್ಮಿ ಪೂಜೆಯನ್ನು ಮಾಡುತ್ತಾರೆ. ಈ ಭೂಮಿಯಲ್ಲಿ ಸಂತರು,ಯತಿಗಳು, ಶರಣರು ಮತ್ತು ಹರಿದಾಸರುಗಳು ಧರ್ಮದ ರಕ್ಷಣೆಮತ್ತು ಮನುಕುಲದ ಉದ್ಧಾರಕ್ಕಾಗಿ ಅವತಾರ ಮಾಡಿದ್ದಾರೆ.
ಹೆಚ್ಚಿನ ಜನರಲ್ಲಿ ಸತ್ಯಪಾಲನೆ ಧರ್ಮವನ್ನು ಬಿಟ್ಟು ಅಧರ್ಮಾಚರಣೆಯಿಂದ ಈ ಕಲಿಯುಗದಲ್ಲಿ ಅರಾಜಕತೆ ಎದ್ದುಕಾಣುತ್ತಿದೆ. ಕಾಲಕಾಲಕ್ಕೆ ಮಳೆ ಬೆಳೆಯಾಗುತ್ತಿಲ್ಲ ,ರೋಗರುಜಿನಾದಿಗಳು ಹೆಚ್ಚುತ್ತಲೇ ಇವೆ. ಭಗವಂತನು ಭಕ್ತಿಗೆ ಒಲಿದೇ ಒಲಿಯುತ್ತಾನೆ. ಭಗವಂತನಲ್ಲಿ ನಿಶ್ಚಲವಾದ ಭಕ್ತಿಯನ್ನು ಮಾಡಿದರೆ ರೋಗ,ರುಜಿನ,ಕಷ್ಟಕಾರ್ಪಣ್ಯಗಳಿಂದ ರಕ್ಷಣೆ ಪಡೆಯಬಹುದು. ಆದ್ದರಿಂದ ಈ ದೀಪಾವಳಿ ಹಬ್ಬದಂದು ನಾವೂಸಹ
ಅಜ್ಞಾನವೆಂಬೋ ಅಂಧಕಾರವನ್ನು ಓಡಿಸಿ ಸುಜ್ಞಾನವೆಂಬೋ ಜ್ಞಾನದ ಬೆಳಕನ್ನು ಅನುಗ್ರಹಿಸುವಂತೆ ಭಗವಂತನಲ್ಲಿ ಪ್ರಾರ್ಥಿಸೋಣ.
ಹಾಗೆಯೇ ಎಲ್ಲರಿಗೂ ಆಯುರಾರೋಗ್ಯ ಐಶ್ವರ್ಯ,ಜ್ಞಾನ ಸಂಪತ್ತು ,ಸಕಲ ಸನ್ಮಂಗಳವನ್ನು ಕರುಣಿಸುವಂತೆ
ಪ್ರಾರ್ಥಿಸೋಣ.
ಎಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗೃಹಲಕ್ಷ್ಮಿಯ ಬಲ, ಸ್ವಾವಲಂಬನೆಯ ಫಲ- ಡಿ.ಕೆ.ಶಿವಕುಮಾರ್

ಚಕ್ಕುಲಿ, ನಿಪ್ಪಟ್ಟು ಸೇರಿದಂತೆ 20ಕ್ಕೂ ಹೆಚ್ಚು ಬಗೆಯ ತಿನಿಸುಗಳನ್ನು ತಯಾರಿಸಿ ಮಾರಾಟ...

B. Y. Raghavendra ಬೆಳೆ ವಿಮಾ ಕಂಪನಿಗಳು ರೈತರಿಗೆ ಘೋಷಿಸಿದ ವಿಮಾ ಪರಿಹಾರ ಮೊತ್ತ ನೀಡಿ- ಬಿ.ವೈ.ರಾಘವೇಂದ್ರ

B. Y. Raghavendra ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಮುಂಗಾರು...

Kannada Rajyotsava ಕನ್ನಡ ಭಾಷೆಯನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ: ಹೆಚ್.ಸಿ. ಸುರೇಶ್

Kannada Rajyotsava ಅನ್ಯ ಭಾಷೆಗಳ ಪ್ರಭಾವದಿಂದ ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿರುವ...

Kannada Rajyotsava ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ

Kannada Rajyotsava ಕನ್ನಡ ರಾಜ್ಯೋತ್ಸವದ ಅಂಗವಾಗಿ 2026ರ ನವೆಂಬರ್ ತಿಂಗಳು ಪೂರ್ತಿ...