B.Y. Vijayendra ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಕು. ಶ್ರೇಯಾ ಎನ್. ಗೌಡ ಅವರು ಈ ಸಾಲಿನ ಯುಪಿಎಸ್‍ಸಿ ಎನ್‍ಡಿಎ ಪರೀಕ್ಷೆಯ ಮಹಿಳಾ ವಿಭಾಗದಲ್ಲಿ ದೇಶಕ್ಕೇ ‘ಪ್ರಥಮ ರ್‍ಯಾಂಕ್’ (AIR 1) ಪಡೆದು ರಾಷ್ಟ್ರಮಟ್ಟದಲ್ಲಿ ಕರುನಾಡಿನ ಕೀರ್ತಿಪತಾಕೆಯನ್ನು ಹಾರಿಸಿರುವ ಅವರಿಗೆ ಹಾರ್ದಿಕ ಅಭಿನಂದನೆಗಳು.
ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ಭದ್ರಾವತಿ ಶ್ರೇಯಾ ಗೌಡ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದು ನಾಡಿಗೆ ಹೆಮ್ಮೆ ಮೂಡಿಸುವ ಸಂಗತಿಯಾಗಿದೆ.
ಭದ್ರಾವತಿಯ ಒಂದು ನಿವೃತ್ತ ಕಾರ್ಮಿಕ ಕುಟುಂಬದಿಂದ ಬಂದು, 8ನೇ ತರಗತಿಯಿಂದಲೇ ಸೈನ್ಯ ಸೇರುವ ದೃಢ ಕನಸು ಕಂಡು, ಆ ನಿಟ್ಟಿನಲ್ಲಿ ಸತತ ಪರಿಶ್ರಮ ಪಟ್ಟು, ಮೊದಲ ಪ್ರಯತ್ನದಲ್ಲೇ ಈ ಸಾಧನೆ ಮಾಡಿರುವುದು ನಾಡಿನ ಯುವಜನತೆಗೆ ಹಾಗೂ ವಿಶೇಷವಾಗಿ ನಾಡಿನ ಹೆಣ್ಣುಮಕ್ಕಳಿಗೆ ಆದರ್ಶಪ್ರಾಯವಾಗಿದೆ. ಈ ಸಂದರ್ಭದಲ್ಲಿ ಪುತ್ರಿಯ ಸಾಧನೆಗೆ ಬೆನ್ನೆಲುಬಾಗಿ ನಿಂತ ಅವರ ಹೆತ್ತವರಿಗೂ ನನ್ನ ಅಭಿನಂದನೆಗಳು.
B.Y. Vijayendra ಅವರ ಕಠಿಣ ಪರಿಶ್ರಮ ಮತ್ತು ದೇಶಸೇವೆಯ ಸಂಕಲ್ಪಕ್ಕೆ ನನ್ನ ಅಭಿಮಾನಪೂರ್ವಕ ಅಭಿನಂದನೆಗಳು ಮತ್ತು ಅವರ ಮುಂದಿನ ಸಾಧನೆಗಳಿಗೆ ಕೂಡ ಯಶಸ್ಸಿನ ಶುಭ ಹಾರೈಕೆಗಳು ಎಂದು ಬಿ.ವೈ.ವಿಜಯೇಂದ್ರ ಅಭಿನಂದಿಸಿದ್ದಾರೆ.
