Wednesday, August 26, 2026
Wednesday, August 26, 2026

ಎಸ್ಐಆರ್ ಕುರಿತಂತೆ ಮತದಾರರು ತಾರ್ಕಿಕ ವ್ಯತ್ಯಾಸಗಳಿಗೆ ಉತ್ತರ ಸಲ್ಲಿಸಲು ಕಾಲಾವಧಿ ವಿಸ್ತರಣೆ ಮತ್ತು ಕೆಲವು ಮುಖ್ಯ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳಿಂದ ಚುನಾವಣಾ ಆಯೋಗಕ್ಕೆ ಮನವಿ ಪತ್ರ

Date:

ಕರ್ನಾಟಕದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಮಾನ್ಯ ಮುಖ್ಯಮಂತ್ರಿ ಶ್ರೀ ಡಿ ಕೆ ಶಿವಕುಮಾರ್ ಅವರು ಭಾರತದ ಮುಖ್ಯ ಚುನಾವಣಾ ಆಯುಕ್ತರಾದ ಶ್ರೀ ಜ್ಞಾನೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.

SIR ಕುರಿತಂತೆ ಗಂಭೀರ ಕಳವಳ ವ್ಯಕ್ತಪಡಿಸಿದ್ದು, ASDDO ಅಡಿಯಲ್ಲಿ ಗುರುತಿಸಲಾದ 1.08 ಕೋಟಿಗೂ ಹೆಚ್ಚು ಮತದಾರರು ಮತ್ತು ಸುಮಾರು 43 ಲಕ್ಷ ಮತದಾರರು ತಾರ್ಕಿಕ ವ್ಯತ್ಯಾಸಗಳಿಗಾಗಿ ನೋಟಿಸ್‌ಗಳನ್ನು ಎದುರಿಸುತ್ತಿದ್ದಾರೆ.

ಮಾನ್ಯ ಮುಖ್ಯಮಂತ್ರಿಗಳು ಭಾರತದ ಮುಖ್ಯ ಚುನಾವಣಾ ಆಯುಕ್ತರನ್ನು ಈ ಕೆಳಗಿನಂತೆ ವಿನಂತಿಸಿದ್ದಾರೆ:

  1. ಹಕ್ಕುಗಳು ಮತ್ತು ಆಕ್ಷೇಪಣೆಗಳ ಸಲ್ಲಿಸುವಿಕೆ ಅವಧಿಯನ್ನು ವಿಸ್ತರಿಸಬೇಕು, ಇದರಿಂದಾಗಿ ಕರಡು ಪಟ್ಟಿಯಿಂದ ಹೊರಗುಳಿದ ನಿಜವಾದ ಮತದಾರರು ಹಕ್ಕುಗಳನ್ನು ಸಲ್ಲಿಸಲು ಸಾಕಷ್ಟು ಸಮಯ ನೀಡಿದಂತಾಗುತ್ತದೆ.
  2. ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಸಭೆಗಳು ಮತ್ತು ನಗರ ಪ್ರದೇಶಗಳಲ್ಲಿ ವಾರ್ಡ್ ಸಮಿತಿ ಸಭೆಗಳು ಸೇರಿದಂತೆ ನಿಗದಿತ ಕಾರ್ಯವಿಧಾನವನ್ನು ಸಾಕಷ್ಟು ಪ್ರಚಾರದೊಂದಿಗೆ ಸಂಪೂರ್ಣವಾಗಿ ಕಾರ್ಯಗತಗೊಳಿಸಲು ಮುಖ್ಯ ಚುನಾವಣಾಧಿಕಾರಿಗಳಿಗೆ (CEO) ಗೆ ನಿರ್ದೇಶಿಸಬೇಕು.
  3. ತಾರ್ಕಿಕ ವ್ಯತ್ಯಾಸಗಳು ಮತ್ತು 2002 ರ ಪಟ್ಟಿಗೆ ಲಿಂಕ್ ಇಲ್ಲದಿರುವಿಕೆಗಾಗಿ ನೋಟಿಸ್‌ಗಳನ್ನು ಎದುರಿಸುತ್ತಿರುವ ಮತದಾರರಿಗೆ ನೀಡಲಾದ ಸಮಯವನ್ನು ವಿಸ್ತರಿಸಬೇಕು, ಪ್ರತಿಯೊಬ್ಬ ಮತದಾರರಿಗೂ ಪ್ರತಿಕ್ರಿಯಿಸಲು ಮತ್ತು ದಾಖಲೆಗಳನ್ನು ಒದಗಿಸಲು ಕನಿಷ್ಠ 3-4 ವಾರಗಳ ಕಾಲಾವಕಾಶ ನೀಡಬೇಕಾಗುತ್ತದೆ.4. ಅಗತ್ಯವಿದ್ದಲ್ಲಿ ERO ಗಳ ಸಂಖ್ಯೆಯನ್ನು ಮತ್ತು ಹೆಚ್ಚಿಸಬೇಕು. ಅಪಾರ ಪ್ರಮಾಣದ ಹಕ್ಕುಗಳು, ಆಕ್ಷೇಪಣೆಗಳು ಮತ್ತು ಅರ್ಜಿಗಳನ್ನು ನಿರ್ವಹಿಸಲು ಮತ್ತು ದೋಷಗಳು ಹಾಗೂ ಅರ್ಹ ಮತದಾರರ ಹೊರಗಿಡುವಿಕೆಗಳನ್ನು ತಡೆಯಲು DEO ಗಳು ಸಮರ್ಪಕವಾಗಿ ಕ್ರಮ ವಹಿಸಬೇಕು.

ಗ್ರಾಮ ಸಭೆ ಮತ್ತು ವಾರ್ಡ್ ಸಮಿತಿ ಸಭೆಗಳಿಗೆ ಸ್ಥಳೀಯ ಆಡಳಿತವನ್ನು ಸಜ್ಜುಗೊಳಿಸುವುದು, ವ್ಯಾಪಕ ಸಾರ್ವಜನಿಕ ಸಂಪರ್ಕವನ್ನು ಕೈಗೊಳ್ಳುವುದು ಮತ್ತು ಪ್ರಕ್ರಿಯೆಯು ಪರಿಣಾಮಕಾರಿಯಾಗಿ ಪೂರ್ಣಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಸಮನ್ವಯ ಮತ್ತು ವ್ಯವಸ್ಥಾಪನಾ ಬೆಂಬಲವನ್ನು ಒದಗಿಸುವುದು ಸೇರಿದಂತೆ ಚುನಾವಣಾ ಆಯೋಗಕ್ಕೆ ಎಲ್ಲಾ ಸಂಭಾವ್ಯ ಸಹಾಯವನ್ನು ನೀಡಲು ಕರ್ನಾಟಕ ಸರ್ಕಾರ ಸಿದ್ಧವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Club Shimoga ಇಂಟರಾಕ್ಟ್ ಕ್ಲಬ್ ಗಳು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನಕ್ಕೆ ಅತ್ಯುತ್ತಮ ವೇದಿಕೆ: ಸುಮತಿ ಜಿ.ಕುಮಾರಸ್ವಾಮಿ

Rotary Club Shimoga ಇಂಟರಾಕ್ಟ್ ಕ್ಲಬ್‌ಗಳು ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲಿಯೇ ಸಾರ್ವಜನಿಕ...

S.N. Channabasappa ಮನುಷ್ಯ ಜೀವನದ ಭಾಗ.ಆ ಸಾಂಸ್ಕೃತಿಕ ಸೊಬಗು ಜೀವನದಲ್ಲಿ ಅಡಕವಾಗಿರಬೇಕು- ಎಸ್.ಎನ್.ಚನ್ನಬಸಪ್ಪ

S.N. Channabasappa ಮಾರ್ನಾಮಿಬೈಲು ಎನ್ನುವುದು ಒಂದು ಇತಿಹಾಸ ಪ್ರಸಿದ್ದತೆ ಪಡೆದಿದೆ, ನಗರದ...

B.Y. Raghavendra ಬೈಂದೂರು ರೈಲ್ವೇ ನಿಲ್ದಾಣ ಅಭಿವೃದ್ಧಿಗೆ ₹86 ಕೋಟಿ ಪ್ರಸ್ತಾವನೆ: ಸಂಸದ ಬಿ.ವೈ.ರಾಘವೇಂದ್ರ ಭೇಟಿ

B.Y. Raghavendra ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂಕಾಂಬಿಕಾ ರೋಡ್ ಬೈಂದೂರು...