ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2026-27 ನೇ ಸಾಲಿನಲ್ಲಿ ಖ್ಯಾತ ಹಾಕಿ ಆಟಗರರಾದ ಮೇಜರ್ ಧ್ಯಾನ್ ಚಂದ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಪ್ರತಿ ವರ್ಷ ರಾಷ್ಟ್ರೀಯ ಕ್ರೀಡಾ ದಿನವನ್ನು ಆಗಸ್ಟ್ 29 ರಂದು ಆಚರಿಸಲಾಗುತ್ತಿದ್ದು,
“ಖೇಲೇಗಾ ಭಾರತ್, ಜೀತೇಗಾ ಭಾರತ್ ” ಎಂಬ ಧ್ಯೇಯವಾಕ್ಯದೊಂದಿಗೆ ಆ. 28 ರಿಂದ 30 ರವರೆಗೆ 3 ದಿನಗಳ ಕಾಲ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲು ನಿರ್ಧರಿಸಲಾಗಿದೆ.
ಈ ಅಭಿಯಾನದ ಮುಖ್ಯ ಉದ್ದೇಶ “ಏಕ್ ಘಂಟಾ ಖೇಲ್ ಕೆ ಮೈದಾನ್ ಮೇನ್” ಕಾರ್ಯಕ್ರಮದ ಮೂಲಕ ಪ್ರತಿಯೊಬ್ಬ ನಾಗರೀಕರು ಕನಿಷ್ಠ ಒಂದು ಗಂಟೆ ಆಟದ ಮೈದಾನದಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದಾಗಿದೆ. ಈ ಅಭಿಯಾನವನ್ನು ಯಶಸ್ವಿಗೊಳಿಸಲು ರಾಜ್ಯದ ಶಾಲಾ ಕಾಲೇಜುಗಳು, ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಆ. 28 ರಂದು ಬೆಳಿಗ್ಗೆ 6 ಕ್ಕೆ ಯೋಗ ಅರಿವು, ಆ.29 ರಂದು ಬೆಳಿಗ್ಗೆ 7ಕ್ಕೆ ಮ್ಯಾರಾಥಾನ್ (5.ಕೆ) ಹಾಗೂ ಆ. 30 ರಂದು ಬೆಳಿಗ್ಗೆ 7 ರಿಂದ ಸೈಕ್ಲೋಥಾನ್ ಮತ್ತು ಜುಂಬಾ ಸ್ಫರ್ಧೆ ಏರ್ಪಡಿಸಲಾಗಿದೆ.
ಮ್ಯಾರಾಥಾನ್‌ನ ವಿಜೇತರಿಗೆ ನಗದು ಬಹುಮಾನ ಪ್ರಥಮ ರೂ.10000/-, ದ್ವಿತೀಯ ರೂ. 5000/- ಮತ್ತು ತೃತೀಯ ರೂ. 3000/- ಹಾಗೂ ಮೂರು ಜನರಿಗೆ ಸಮಾಧಾನಕರ ಬಹುಮಾನ ರೂ. 1000/- ನೀಡಲಾಗುವುದು. ಜೊತೆಗೆ ಪ್ರಶಸ್ತಿ ಪತ್ರ ಮತ್ತು ಮೆಡಲ್‌ಗಳನ್ನು ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಮೊ. 9845863549/ 8884816287 ಗಳನ್ನು ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಆಗಸ್ಟ್ 28 ರಿಂದ “ಏಕ್ ಘಂಟಾ ಖೇಲ್ ಕೆ ಮೈದಾನ್ ಮೆ” ಅಭಿಯಾನ, ವಿವಿಧ ಸ್ಪರ್ಧೆಗಳ ಆಯೋಜನೆ
Date:
