Tuesday, August 25, 2026
Tuesday, August 25, 2026

ಶಿವಮೊಗ್ಗ ಜಿಲ್ಲಾ ಪ್ರಗತಿಪರ ರೈತ/ರೈತ ಮಹಿಳೆ ಪ್ರಶಸ್ತಿಗೆ ಅರ್ಜಿ ಆಹ್ವಾನ

Date:

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಪ್ರತಿ ವರ್ಷದಂತೆ ಈ ವರ್ಷವೂ ಪ್ರಗತಿಪರ ರೈತ/ರೈತ ಮಹಿಳೆ ಪ್ರಶಸ್ತಿಯನ್ನು ಕೃಷಿ ಮತ್ತು ತೋಟಗಾರಿಕಾ ಮೇಳ-2026 ರಲ್ಲಿ ನೀಡಿ ಸನ್ಮಾನಿಸಲು ತೀರ್ಮಾನಿಸಿದ್ದು, ವಿಶ್ವವಿದ್ಯಾಲಯದ ವ್ಯಾಪ್ತಿಯ ಆರು ಜಿಲ್ಲೆಗಳಾದ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಉಡುಪಿ, ದಕ್ಷಿಣಕನ್ನಡ ಜಿಲ್ಲೆಗಳ ಪ್ರಗತಿಪರ ರೈತ/ರೈತ ಮಹಿಳೆಯರು ಅರ್ಜಿ ಆಹ್ವಾನಿಲಾಗಿದೆ.
ಅರ್ಜಿಸಲ್ಲಿಸಿದ ರೈತ/ರೈತ ಮಹಿಳೆಯರಲ್ಲಿ ಪ್ರತಿ ಜಿಲ್ಲೆಯಿಂದ ಒಬ್ಬ ರೈತ ಮತ್ತು ಒಬ್ಬ ರೈತಮಹಿಳೆಯನ್ನು ಆಯ್ಕೆಮಾಡಿ, ಪ್ರಶಸ್ತಿ ಪುರಸ್ಕಾರ ಮಾಡಲಾಗುವುದು, ಈ ಪ್ರಶಸ್ತಿಯನ್ನು ಕೃಷಿ ಮತ್ತು ತೋಟಗಾರಿಕಾ ಮೇಳದಲ್ಲಿ ಪ್ರದಾನ ಮಾಡಲಾಗುವುದು.
ಆಸಕ್ತ ಪ್ರಗತಿಪರ ರೈತ ಮತ್ತು ರೈತ ಮಹಿಳೆಯರು ಆಯಾ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಛೇರಿ ಅಥವಾ ಕೃಷಿ ವಿಜ್ಞಾನಕೇಂದ್ರಗಳು ಅಥವಾ ವಿಸ್ತರಣಾ ಶಿಕ್ಷಣ ಘಟಕಗಳಲ್ಲಿ ಅರ್ಜಿ ಪಡೆಯಬಹುದು ಅಥವಾ https://www.uahs.edu.in/ ನಲ್ಲಿ ಲಭ್ಯವಿರುವ ಅರ್ಜಿ ತೆಗೆದುಕೊಂಡು ಭರ್ತಿಮಾಡಿ, ಭರ್ತಿ ಮಾಡಿದ ಅರ್ಜಿಯನ್ನು ದಿನಾಂಕ:10/09/2026 ರ ಒಳಗೆ ತಲುಪುವಂತೆ ಆಯಾ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಛೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂ. ಸಂಖ್ಯೆಗಳಾದ ಶಿವಮೊಗ್ಗ- 94808 38976, ದಾವಣಗೆರೆ 94808 38209, ಚಿಕ್ಕಮಗಳೂರು 94808 38203, ಉಡುಪಿ 94808 38202, ಚಿತ್ರದುರ್ಗ 94808 38201, ದಕ್ಷಿಣಕನ್ನಡ 87947 06468 ಗಳನ್ನು ಸಂಪರ್ಕಿಸುವಂತೆ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಬೈಂದೂರು ರೈಲ್ವೇ ನಿಲ್ದಾಣ ಅಭಿವೃದ್ಧಿಗೆ ₹86 ಕೋಟಿ ಪ್ರಸ್ತಾವನೆ: ಸಂಸದ ಬಿ.ವೈ.ರಾಘವೇಂದ್ರ ಭೇಟಿ

B.Y. Raghavendra ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂಕಾಂಬಿಕಾ ರೋಡ್ ಬೈಂದೂರು...

S.N. Channabasappa ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ...