Monday, September 21, 2026
Monday, September 21, 2026

ವಾಹನಕ್ಕೆ ಢಿಕ್ಕಿ ಹೊಡೆದು ಸತ್ತಿರುವ ಅಪರಿಚಿತ ವ್ಯಕ್ತಿಯ ಶವ ಪತ್ತೆ:ಶಿವಮೊಗ್ಗ ಸಂಚಾರ ಪೊಲೀಸ್ ಪ್ರಕಟಣೆ.

Date:

ಆ.14 ರಂದು ಮಧ್ಯರಾತ್ರಿ ಸುಮಾರು 1 ರಿಂದ 2 ಗಂಟೆಯೊಳಗೆ ಶಿವಮೊಗ್ಗ ಬೈಪಾಸ್ ರಸ್ತೆಯ ನಂದನ್ ಕಾಲೇಜ್ ಬಳಿ ಫುಟ್‌ಪಾತ್ ಮೇಲೆ ಸುಮಾರು 50-55 ವರ್ಷ ವಯಸ್ಸಿನ ಗಂಡಸಿಗೆ ಯಾವುದೋ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತ ಪಟ್ಟಿದ್ದು, ಶವವನ್ನು ಮೆಗ್ಗಾನ್ ಆಸ್ಪತೆಯ ಶವಾಗಾರದಲ್ಲಿರಿಸಲಾಗಿದೆ. ಈ ಮೃತ ವ್ಯಕ್ತಿಯ ಹೆಸರು, ವಿಳಾಸ ಅಥವಾ ವಾರಸುದಾರರ ಬಗ್ಗೆ ಸುಳಿವು ಇರುವುದಿಲ್ಲ.
ಮೃತ ಗಂಡಸಿನ ಚಹರೆ; 5.5ಅಡಿ ಎತ್ತರ, ತೆಳುವಾದ ಮೈಕಟ್ಟು, ಕೋಲು ಮುಖ, ಗೋಧಿ ಮೈಬಣ್ಣ, ಹೊಂದಿದ್ದು, ಬಲಗೈನಲ್ಲಿ ರೂಪ ಎಂಬ ಹಚ್ಚೆ ಗುರುತು ಇರುತ್ತದೆ. ಮೈಮೇಲೆ ಕಪ್ಪು ಬಣ್ಣದ ಟೀ ಶರ್ಟ್ ಹಾಗೂ ಕಪ್ಪು ಪ್ಯಾಂಟ್ ಧರಿಸಿದ್ದು, ಕೊರಳಲ್ಲಿ ಕಂದು ಬಣ್ಣದ ಮಣಿಹಾರವಿರುತ್ತದೆ.
ಈ ಮೃತ ವ್ಯಕ್ತಿಯ ವಾರಸುದಾರರು ಪತ್ತೆಯಾದಲ್ಲಿ ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆ, ಸಂಚಾರ ವೃತ್ತ ಅಥವಾ ಪೊಲೀಸ್ ಕಂಟ್ರೋಲ್ ರೂಂ ನಂ.: 112 ಅಥವಾ ದೂ.ಸಂ.: 08182-261417/ 261408/ 9480803345/ 9480803309 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಶಿವಮೊಗ್ಗ ಸಂಚಾರಿ ವೃತ್ತ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...