Friday, September 11, 2026
Friday, September 11, 2026

ಶಿವಮೊಗ್ಗ ಕರವೇ ವತಿಯಿಂದ ವೈಶಿಷ್ಟ್ಯಪೂರ್ಣ ಸ್ವಾತಂತ್ರ್ಯೋವ ಆಚರಣೆ

Date:

ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಕಡೆ ವತಿಯಿಂದ ರಾಮಣ್ಣ ರಾಗಿಗುಡ್ಡ ಅವರ ನೇತೃತ್ವದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ರಾಗಿ ಗುಡ್ಡದಲ್ಲಿ ಹಮ್ಮಿಕೊಳ್ಳಲಾಯತು. ಈ ಕಾರ್ಯಕ್ರಮಕ್ಕೆ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಹಿರೇಮಠ ಬಿಳಕಿ ಇವರು ಆಗಮಿಸಿದ್ದರು ಈ ಕಾರ್ಯಕ್ರಮವನ್ನು ಉದ್ದೇಶಿಸಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಬಗ್ಗೆ ಹಿತನುಡಿಗಳನ್ನು ಹೇಳಿದರು. ಹಾಗೂ ಧ್ವಜಾರೋಹಣ ಖ್ಯಾತ ಉದ್ಯಮಿಗಳು ಆದಂತಹ ಜ್ಯೋತಿಪ್ರಕಾಶ್ ಅವರು ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಅಂಗವಿಕಲ ಮತ್ತು ವಿಕಲಚೇತನರಿಗೆ ವಿಶೇಷವಾದ ಕಿಟ್ ಕೊಡುವುದರ ಮುಖಾಂತರ ಅವರಿಗೆ ಸನ್ಮಾನಿಸಲಾಯಿತು. ಹಾಗೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಕೀಲರಾದಂತಹ ಅನಿಲ್ ಕುಮಾರ್ ಮತ್ತು ಸಾಹಿತಿಗಳು ಪತ್ರಕರ್ತರು ಗಾರಾ, ಶ್ರೀನಿವಾಸ್,ಚಲನಚಿತ್ರ ನಟ ರಘು ಮಲ್ನಾಡ್, ಕರವೇ ಕಾವಲು ಪಡೆಯ ಜಿಲ್ಲಾಧ್ಯಕ್ಷರಾದ ಶಿವಕುಮಾರ್ ಎಸ್, ಬಿ,ಪ್ರಧಾನ ಕಾರ್ಯದರ್ಶಿಯಾದ ಕೆಬಿ ಉಮೇಶ್, ಉಪಾಧ್ಯಕ್ಷರಾದ ರಮೇಶಣ್ಣ ಮಲ್ಲಿಗೆನಹಳ್ಳಿ,ಪತ್ರಿಕಾ ಸಂಚಾಲಕರಾದ ಎನ್, ಮಾಲತೇಶ್, ರಾಮು, ಕರವೇ ಮಹಿಳಾ ಘಟಕದ ಅಧ್ಯಕ್ಷರಾದ ಶಾರದಾ ಶ್ರೀಧರ್ಮೂರ್ತಿ, ಉಪಾಧ್ಯಕ್ಷರಾದ ಅನ್ನಪೂರ್ಣ ಕೃಷ್ಣವೇಣಿ ಹಾಗೂ ಕರವೇ ಕಾವಲುಪಡೆಯ ಹೊಸದುರ್ಗ ಅಧ್ಯಕ್ಷರಾದ ವೀಣಾ ಮತ್ತು ಅವರ ಪದಾಧಿಕಾರಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಚರಣೆ ಮಾಡಲಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S. N. Channabasappa ಶಿವಮೊಗ್ಗದ ವಿವಿಧ ಬಡಾವಣೆಗಳಲ್ಲಿ ಶಾಸಕ ” ಚೆನ್ನಿ” ಅವರಿಂದ ಕಾಮಗಾರಿಗಳಿಗೆ ಭೂಮಿ ಪೂಜೆ

S. N. Channabasappa ಶಿವಮೊಗ್ಗ ನಗರದ ಪ್ರತಿಯೊಂದು ವಾರ್ಡ್ ಹಾಗೂ ಬಡಾವಣೆಗಳಲ್ಲಿ...

Chamber of commerce Shivamogga “ಬೆಂಗಳೂರಿನಾಚೆ ಕೈಗಾರಿಕಾ ಅಭಿವೃದ್ಧಿ” ಗಾಗಿ ಶಿವಮೊಗ್ಗ ನಗರವನ್ನ ಸೇರ್ಪಡಿಸಿ- ಎಸ್.ರುದ್ರೇಗೌಡ

Chamber of commerce Shivamogga ಬೆಂಗಳೂರಿನಾಚೆಗಿನ ಕೈಗಾರಿಕೆಗಳ ಅಭಿವೃದ್ಧಿಗಾಗಿ ಶಿವಮೊಗ್ಗ ನಗರ...