ಆ.14 ರಂದು ಮಧ್ಯರಾತ್ರಿ ಸುಮಾರು 1 ರಿಂದ 2 ಗಂಟೆಯೊಳಗೆ ಶಿವಮೊಗ್ಗ ಬೈಪಾಸ್ ರಸ್ತೆಯ ನಂದನ್ ಕಾಲೇಜ್ ಬಳಿ ಫುಟ್‌ಪಾತ್ ಮೇಲೆ ಸುಮಾರು 50-55 ವರ್ಷ ವಯಸ್ಸಿನ ಗಂಡಸಿಗೆ ಯಾವುದೋ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತ ಪಟ್ಟಿದ್ದು, ಶವವನ್ನು ಮೆಗ್ಗಾನ್ ಆಸ್ಪತೆಯ ಶವಾಗಾರದಲ್ಲಿರಿಸಲಾಗಿದೆ. ಈ ಮೃತ ವ್ಯಕ್ತಿಯ ಹೆಸರು, ವಿಳಾಸ ಅಥವಾ ವಾರಸುದಾರರ ಬಗ್ಗೆ ಸುಳಿವು ಇರುವುದಿಲ್ಲ.
ಮೃತ ಗಂಡಸಿನ ಚಹರೆ; 5.5ಅಡಿ ಎತ್ತರ, ತೆಳುವಾದ ಮೈಕಟ್ಟು, ಕೋಲು ಮುಖ, ಗೋಧಿ ಮೈಬಣ್ಣ, ಹೊಂದಿದ್ದು, ಬಲಗೈನಲ್ಲಿ ರೂಪ ಎಂಬ ಹಚ್ಚೆ ಗುರುತು ಇರುತ್ತದೆ. ಮೈಮೇಲೆ ಕಪ್ಪು ಬಣ್ಣದ ಟೀ ಶರ್ಟ್ ಹಾಗೂ ಕಪ್ಪು ಪ್ಯಾಂಟ್ ಧರಿಸಿದ್ದು, ಕೊರಳಲ್ಲಿ ಕಂದು ಬಣ್ಣದ ಮಣಿಹಾರವಿರುತ್ತದೆ.
ಈ ಮೃತ ವ್ಯಕ್ತಿಯ ವಾರಸುದಾರರು ಪತ್ತೆಯಾದಲ್ಲಿ ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆ, ಸಂಚಾರ ವೃತ್ತ ಅಥವಾ ಪೊಲೀಸ್ ಕಂಟ್ರೋಲ್ ರೂಂ ನಂ.: 112 ಅಥವಾ ದೂ.ಸಂ.: 08182-261417/ 261408/ 9480803345/ 9480803309 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಶಿವಮೊಗ್ಗ ಸಂಚಾರಿ ವೃತ್ತ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ತಿಳಿಸಿರುತ್ತಾರೆ.
ವಾಹನಕ್ಕೆ ಢಿಕ್ಕಿ ಹೊಡೆದು ಸತ್ತಿರುವ ಅಪರಿಚಿತ ವ್ಯಕ್ತಿಯ ಶವ ಪತ್ತೆ:ಶಿವಮೊಗ್ಗ ಸಂಚಾರ ಪೊಲೀಸ್ ಪ್ರಕಟಣೆ.
Date:
