ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಗಸ್ಟ್ 14ರಂದು ಶಿವಮೊಗ್ಗ ನಗರದಲ್ಲಿ ಆಯೋಜಿಸಲಾಗಿರುವ “ಸ್ವದೇಶಿ ಮಂತ್ರ – 2026” ವಿಶೇಷ ದೇಶಭಕ್ತಿ ಕಾರ್ಯಕ್ರಮದ ಪೂರ್ವಭಾವಿ ಸಭೆ ಇಂದು ಸರ್ಕಾರಿ ನೌಕರರ ಭವನ, ಶಿವಮೊಗ್ಗದಲ್ಲಿ ನಡೆಯಿತು.
ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆ, ಉದ್ದೇಶ, ಸಿದ್ಧತೆಗಳು, ವಿವಿಧ ಸಂಘ-ಸಂಸ್ಥೆಗಳ ಸಮನ್ವಯ ಹಾಗೂ ಸಾರ್ವಜನಿಕರ ಭಾಗವಹಿಸುವಿಕೆ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು.
ಬಳ್ಳೇಕೆರೆ ಸಂತೋಷ್ ಅವರು ಕಾರ್ಯಕ್ರಮದ ಆಶಯ ಹಾಗೂ ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತು ಮಾತನಾಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ. ಎಸ್. ಷಡಾಕ್ಷರಿಯವರು “ಸ್ವದೇಶಿ ಮಂತ್ರ – 2026” ಕಾರ್ಯಕ್ರಮದ ಸಂಪೂರ್ಣ ರೂಪುರೇಷೆ, ಉದ್ದೇಶ ಹಾಗೂ ಕಾರ್ಯಕ್ರಮದ ಮೂಲಕ ಸಮಾಜದಲ್ಲಿ ದೇಶಭಕ್ತಿ ಮತ್ತು ಸ್ವದೇಶಿ ಚಿಂತನೆ ಮೂಡಿಸುವ ಆಶಯದ ಕುರಿತು ವಿವರಿಸಿದರು.
ಸಮನ್ವಯ ಕಾಶಿ ಅವರು ಕಾರ್ಯಕ್ರಮದ ಸಂಘಟನೆ, ವಿವಿಧ ತಂಡಗಳ ಸಮನ್ವಯ ಹಾಗೂ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸುವ ಕುರಿತು ಮಾತನಾಡಿದರು.
ಚೇಂಬರ್ ಆಫ್ ಕಾಮರ್ಸ್ನ ಗೋಪಿನಾಥ್ ಅವರು ಯುವಶಕ್ತಿಯೇ ದೇಶದ ಭವಿಷ್ಯವಾಗಿದ್ದು, ಯುವಕರಲ್ಲಿ ದೇಶಭಕ್ತಿ, ಸ್ವದೇಶಿ ಉತ್ಪನ್ನಗಳ ಬಳಕೆ ಹಾಗೂ ರಾಷ್ಟ್ರ ನಿರ್ಮಾಣದ ಜವಾಬ್ದಾರಿಯ ಅರಿವು ಮೂಡಿಸುವ ಅಗತ್ಯವನ್ನು ತಿಳಿಸಿದರು.
ಶಾಹುಲ್ ಅಮಿತ್ ಅವರು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಶಿಸ್ತು, ಜವಾಬ್ದಾರಿ ಹಾಗೂ ರಾಷ್ಟ್ರದ ಬಗ್ಗೆ ಹೆಮ್ಮೆ ಮೂಡಿಸುವಲ್ಲಿ ಇಂತಹ ಕಾರ್ಯಕ್ರಮಗಳ ಮಹತ್ವವನ್ನು ವಿವರಿಸಿದರು.
ವಕೀಲರ ಸಂಘದ ಅಧ್ಯಕ್ಷರಾದ ರಾಘವೇಂದ್ರ ಸ್ವಾಮಿ ಅವರು ವಿವಿಧ ಕಾರ್ಯಕ್ರಮಗಳ ಮೂಲಕ ದೇಶದ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ, ಈ ಸಂದೇಶವನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.
ಯುವರಾಜ್ ಕೆ. ಹಾಗೂ ಶ್ರೀಪಾಲ್ ಅವರು ಕಾರ್ಯಕ್ರಮದ ಯಶಸ್ಸಿಗೆ ಅಗತ್ಯವಾದ ಸಲಹೆ-ಸಹಕಾರ ನೀಡುವ ಕುರಿತು ಮಾತನಾಡಿದರು.
ಯೋಗ ಕೇಂದ್ರ ಅಧ್ಯಕ್ಷರಾದ ರುದ್ರಾರಾಧ್ಯರು ಅವರು ಕಾರ್ಯಕ್ರಮದ ನಂತರವೂ ನಮ್ಮ ಜವಾಬ್ದಾರಿ ಮುಂದುವರಿಯಬೇಕು. ಕಾರ್ಯಕ್ರಮ ನಡೆಯುವ ಸ್ಥಳವನ್ನು ಸ್ವಚ್ಛಗೊಳಿಸಿ, “ಸ್ವಚ್ಛ ಶಿವಮೊಗ್ಗ – ಜವಾಬ್ದಾರಿಯುತ ನಾಗರಿಕರು” ಎಂಬ ಸಂದೇಶದೊಂದಿಗೆ ಸ್ಥಳವನ್ನು ಸ್ವಚ್ಛಗೊಳಿಸಿ ತೆರಳೋಣ ಎಂದು ಕರೆ ನೀಡಿದರು.
ರೋಟರಿ ಅಧ್ಯಕ್ಷರಾದ ರಾಘವೇಂದ್ರ ಕಾಮತ್ ಅವರು ವಿವಿಧ ಸಂಘ-ಸಂಸ್ಥೆಗಳು, ಯುವಕರು ಹಾಗೂ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಯಶಸ್ವಿಗೊಳಿಸುವ ಕುರಿತು ಮಾತನಾಡಿದರು.
ಸ್ಟೇಡಿಯಂ ಮಂಜುನಾಥ್ ಅವರು ಕಾರ್ಯಕ್ರಮದ ಪೂರ್ವ ಸಿದ್ಧತೆ ಹಾಗೂ ಅಗತ್ಯ ವ್ಯವಸ್ಥೆಗಳ ಕುರಿತು ಸಲಹೆ ನೀಡಿದರು.
ಆರ್. ಮೋಹನ್ ಕುಮಾರ್ ಅವರು ಕಾರ್ಯಕ್ರಮದ ಪೂರ್ವ ಸಿದ್ಧತೆಗಳು ಹಾಗೂ ವಿವಿಧ ಜವಾಬ್ದಾರಿಗಳ ಕುರಿತು ಮಾಹಿತಿ ನೀಡಿ, ಸಭೆಗೆ ವಂದನಾರ್ಪಣೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಶ್ರೀ ಗೋಪಿನಾಥ್, ರಾಜ್ಯಾಧ್ಯಕ್ಷರಾದ ಸಿ. ಎಸ್. ಷಡಾಕ್ಷರಿ, ಬಳ್ಳೇಕೆರೆ ಸಂತೋಷ್, ಆರ್. ಮೋಹನ್ ಕುಮಾರ್, ಸಮನ್ವಯ ಕಾಶಿ, ಶಾಹುಲ್ ಅಮಿತ್, ವಕೀಲರ ಸಂಘದ ಅಧ್ಯಕ್ಷರಾದ ರಾಘವೇಂದ್ರ ಸ್ವಾಮಿ, ಯುವರಾಜ್ ಕೆ., ವಕೀಲರಾದ ಶ್ರೀಪಾಲ್, ಯೋಗ ಕೇಂದ್ರದ ಅಧ್ಯಕ್ಷರಾದ ರುದ್ರಾರಾಧ್ಯರು, ರೋಟರಿ ಅಧ್ಯಕ್ಷರಾದ ರಾಘವೇಂದ್ರ ಕಾಮತ್, ಸ್ಟೇಡಿಯಂ ಮಂಜುನಾಥ್, ಸತೀಶ್ ಶೆಟ್ರು ಹಾಗೂ ಹರ್ಷಾ ಕಾಮತ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಗಣ್ಯರು ಉಪಸ್ಥಿತರಿದ್ದರು.
