Friday, August 7, 2026
Friday, August 7, 2026

Sahyadri Narayana Hospital ಆಗಸ್ಟ್ 10. ಹರಕೆರೆಯ ಎನ್. ಹೆಚ್ .ಆಸ್ಪತ್ರೆಯಲ್ಲಿ ಮೂಳೆ ಸಾಂದ್ರತೆ ಉಚಿತ ತಪಾಸಣಾ ಶಿಬಿರ

Date:

Sahyadri Narayana Hospital ಶಿವಮೊಗ್ಗ ನಗರದ ಹರಕೆರೆಯ ಎನ್.ಟಿ. ರಸ್ತೆಯಲ್ಲಿರುವ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಇದೇ ಆಗಸ್ಟ್ 10, 2026ರ ಸೋಮವಾರದಂದು ‘ಉಚಿತ ಮೂಳೆ ಸಾಂದ್ರತಾ ಪರೀಕ್ಷೆ’ (Free BMD Test) ಶಿಬಿರವನ್ನು ಹಮ್ಮಿಕೊಂಡಿದೆ.

ಈ ಶಿಬಿರದಲ್ಲಿ, ಉಚಿತ ಮೂಳೆ ತಪಾಸಣೆಯ ಜೊತೆಗೆ ತಜ್ಞ ವೈದ್ಯರೊಂದಿಗೆ ಉಚಿತ ಸಮಾಲೋಚನೆ ಪಡೆಯುವ ಅವಕಾಶವನ್ನೂ ಕಲ್ಪಿಸಲಾಗಿದೆ. ಅಂದು ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 01:00 ಗಂಟೆಯವರೆಗೆ ಆಸ್ಪತ್ರೆಯ ಆವರಣದಲ್ಲಿ ಈ ತಪಾಸಣೆಗಳು ನಡೆಯಲಿವೆ.

ಯಾರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬಹುದು?

ಈ ಕೆಳಗಿನ ಆರೋಗ್ಯ ಸಮಸ್ಯೆಗಳು ಅಥವಾ ಲಕ್ಷಣಗಳನ್ನು ಹೊಂದಿರುವವರು ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ:

Sahyadri Narayana Hospital ದೀರ್ಘ ಕಾಲದ ಮಂಡಿ ಮತ್ತು ಸೊಂಟ ನೋವಿನಿಂದ ಬಳಲುತ್ತಿರುವವರು.
ಮೆಟ್ಟಿಲುಗಳನ್ನು ಹತ್ತಲು ಮತ್ತು ಇಳಿಯಲು ಕಷ್ಟಪಡುತ್ತಿರುವವರು.
ಮೂಳೆಗಳ ಕಾರ್ಯಕ್ಷಮತೆ ಕ್ಷಿಣಿಸಿರುವ ಅನುಭವ ಹೊಂದಿರುವವರು.
ಋತುಚಕ್ರ ನಿಂತ ಕಾರಣ ಮೂಳೆ ಸವೆತದ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರು.
ವಯೋಸಹಜವಾಗಿ ಮೂಳೆ ಸವೆತಕ್ಕೆ ತುತ್ತಾಗಿರುವ ಪುರುಷರು ಹಾಗೂ ಮಹಿಳೆಯರು.

ಗಮನಿಸಿ: ಈ ಉಚಿತ ಶಿಬಿರದಲ್ಲಿ ಮೊದಲು ಬಂದ 100 ಜನರಿಗೆ ಮಾತ್ರ ಮೊದಲ ಆದ್ಯತೆ ನೀಡಲಾಗುತ್ತದೆ.
ಆಸಕ್ತರು ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ ಆಸ್ಪತ್ರೆಯ ಸಹಾಯವಾಣಿ ಸಂಖ್ಯೆ 95139 15370 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

DC Shivamogga ಹೋಂ ಸ್ಟೇ, ಹೊಟೆಲ್ & ರೆಸಾರ್ಟ್ಗಳಲ್ಲಿ ಮಾಹಿತಿ ಫಲಕ ಅಳವಡಿಕೆ ಕಡ್ಡಾಯ. ಪ್ರಭುಲಿಂಗ ಕವಳಿಕಟ್ಟಿ.

DC Shivamogga ಜಿಲ್ಲೆಯಲ್ಲಿರುವ ಎಲ್ಲಾ ಹೋಂಸ್ಟೇ, ಹೋಟೇಲ್, ರೆಸಾರ್ಟ್ ಹಾಗೂ ಇತರೆ ವಸತಿ...

Car Accident ಸಿಗಂದೂರಿಗೆ ಹೊರಟ ಪ್ರವಾಸಿಗರ ಕಾರು ಚೋರಡಿ ಸೇತುವೆ ಬಳಿ ಪಲ್ಟಿ: ಆರು ಮಂದಿಗೆ ಗಾಯ.

Car Accident  ಶಿವಮೊಗ್ಗ ಜಿಲ್ಲೆಯ ಚೋರಡಿ ಬ್ರಿಡ್ಜ್ ಸಮೀಪ ಈ ಭೀಕರ...