Sunday, October 18, 2026
Sunday, October 18, 2026

ನಮ್ಮ ಪ್ರತಿಭೆಗಳು ವಿದೇಶ ಖ್ಯಾತಿ ಜೊತೆ ಸ್ವದೇಶ ಪ್ರಗತಿಗೂ ಶ್ರಮಿಸಬೇಕು-ಪ್ರಧಾನಿ

Date:

ಪ್ರಧಾನಿ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪಡೆದ ಪುಟಾಣಿ ವೀರರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶಿ ಆಂದೋಲನದ ಮಹತ್ವವನ್ನು ತಿಳಿಸಿದರು.

“ಸರ್ಕಾರ ರೂಪಿಸುವ ಪ್ರತಿ ಯೋಜನೆಯ ಕೇಂದ್ರಬಿಂದು ಯುವ ಜನರೇ ಆಗಿರುತ್ತಾರೆ. ಇದರ ಪ್ರಯೋಜನ ಪಡೆಯುವ ಯುವ ಪ್ರತಿಭೆಗಳು ದೇಶಿ ಆಂದೋಲನವನ್ನು ಬೆಂಬಲಿಸಬೇಕು ಎಂದು ಸಲಹೆ ನರೇಂದ್ರ ಮೋದಿ ಅವರು ಸಲಹೆ ನೀಡಿದರು.

ಪುರಸ್ಕಾರ ವಿಜೇತ ಬಾಲಪ್ರತಿಭೆಗಳನ್ನು ತೆಗೆ ಆನ್ಲೈನ್ ಮೂಲಕ ಸಂವಾದ ನಡೆಸಿದ ಪ್ರಧಾನಿ ಅವರು, ಹಲವು ಉಪಯುಕ್ತ ಕಿವಿಮಾತುಗಳನ್ನು ಹೇಳಿದ್ದಾರೆ. ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ಹೊಲೋಗ್ರಾಮ್ ಪ್ರತಿಭೆ ಅನಾವರಣಗೊಳಿಸಿದ ಕುರಿತು ಕೇಳಿದ ಪ್ರಶ್ನೆಗೆ, ಸೊಗಸಾದ ಉತ್ತರ ನೀಡಿದರು. ” ನೇತಾಜಿ ಅವರಿಂದ ಈ ದೇಶ ಬಹುದೊಡ್ಡ ಸ್ಪೂರ್ತಿಯನ್ನು ಪಡೆದಿದೆ. ಅದಕ್ಕೆ ಪ್ರತಿಯಾಗಿ ಅವರನ್ನು ಸ್ಮರಿಸುವಂತೆದ್ದೇನಾದರೂ ಮಾಡಬೇಕಾದದ್ದು ನಮ್ಮ ಕರ್ತವ್ಯ. ಬಾಲ ಪ್ರತಿಭೆಗಳಾದ ನೀವು ದೇಶಪ್ರೇಮದ ಪಾಠವನ್ನು ನೇತಾಜಿ ಯಿಂದ ಕಲಿಯಬೇಕು. ದೇಶ ಮೊದಲು ಎಂಬ ಸಿದ್ಧಾಂತವನ್ನು ಅಳವಡಿಸಿಕೊಳ್ಳಿ ಎಂದು ಪ್ರಧಾನಿ ಅವರು ತಿಳಿಸಿದ್ದಾರೆ.

ಬಾಲ ಪುರಸ್ಕಾರ ವಿಜೇತರಿಗೆ ಬ್ಲಾಕ್ ಚೈನ್ ತಂತ್ರಜ್ಞಾನ ಬಳಸಿ ಪ್ರಧಾನಿ ಮೋದಿ, ಡಿಜಿಟಲ್ ಪ್ರಶಸ್ತಿ ಪತ್ರಗಳನ್ನು ನೀಡಿದರು. ಜಾಗತಿಕ ಮಟ್ಟದಲ್ಲಿ ಭಾರತದ ಯುವ ಪ್ರತಿಭೆಗಳು ದೊಡ್ಡ ಹೆಸರು ಮಾಡಿವೆ. ಪ್ರತಿಷ್ಠಿತ ಕಂಪನಿಗಳ ಸಿಇಒ ಗಳು ಭಾರತೀಯರು ಎನ್ನುವುದು ಹೆಮ್ಮೆಯ ವಿಷಯ. ಆದರೆ ಈ ಕೀರ್ತಿ ಹೊರದೇಶಗಳಿಗೆ ಮಾತ್ರ ಸೀಮಿತವಾಗಿರಬಾರದು. ಇಲ್ಲಿ ಬೆಳೆಯುವ ಪ್ರತಿಭೆಗಳು ಇಲ್ಲಿಯೇ ನಿಂತು, ಏನನ್ನಾದರೂ ಸಾಧಿಸಬೇಕು. ಆ ಮೂಲಕ ದೇಶಿ ಆಂದೋಲನಕ್ಕೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.

14 ಬಾಲಕಿಯರು ಸೇರಿದಂತೆ 29 ಮಕ್ಕಳಿಗೆ ರಾಷ್ಟ್ರೀಯ ಬಾಲ ಪುರಸ್ಕಾರ ನೀಡಲಾಯಿತು. ನಾವಿನ್ಯತೆ, ಪಾಂಡಿತ್ಯಪೂರ್ಣ ಸಾಧನೆಗಳು, ಕ್ರೀಡೆ, ಸಮಾಜ ಸೇವೆ ಮತ್ತು ಶೌರ್ಯ, ಕಲೆ-ಸಂಸ್ಕೃತಿ ಸೇರಿ ಆರು ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆಗೆ ಪುರಸ್ಕಾರ ನೀಡಲಾಯಿತು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

World Mental Health Day ಶಿವಮೊಗ್ಗದಲ್ಲಿ ವಿಶ್ವ ಮಾನಸಿಕ ದಿನಾಚರಣೆ ಜಾಗೃತಿ ಜಾಥಾ

World Mental Health Day ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ...

Mysuru Dasara ದಸರಾ ಪುಸ್ತಕ ಮೇಳ: ಪುಸ್ತಕಗಳ ವೀಕ್ಷಿಸಿದ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ

Mysuru Dasara ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ರ ಉದ್ಘಾಟನೆಮಾಡಿದ...

Mysuru Dasara ಮೈಸೂರು ದಸರಾ ವಿದ್ಯುತ್ ದೀಪಾಲಂಕಾರಕ್ಕೆ ಸಚಿವ ಜಾರ್ಜ್ ಚಾಲನೆ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ವಿದ್ಯುತ್‌ ದೀಪಾಲಂಕಾರಕ್ಕೆ...