Klive Special Aerticle ದಾವಣಗೆರೆಯ ಸಮೀಪದ ಆನಗೋಡಿನಿಂದ ಸುಮಾರು 3 ಕಿ.ಮೀ ಅಂತರದಲ್ಲಿರುವ ಚಿಕ್ಕ ಹಳ್ಳಿ ತುಂಬಿಗೆರೆ. ಸುಮಾರು 100-150 ಮನೆಗಳಿರುವ ಈ ಚಿಕ್ಕಹಳ್ಳಿಯ ಸಮೀಪ ಶಾಸ್ತ್ರಿಹಳ್ಳಿ ಎಂಬ ಇನ್ನೊಂದು ಪುಟ್ಟ ಹಳ್ಳಿಯಿದ್ದು ಅಲ್ಲಿ ಅಭಯಾಶ್ರಮ ಎಂಬ ವೃದ್ಧಾಶ್ರಮವೊಂದಿದೆ. ತುಂಬಿಗೆರೆಯ ವಿಶೇಷವೇನೆಂದರೆ ಸುಮಾರು ಇಸ್ವಿ ಸನ್ 1830ರ ಆಸುಪಾಸಿನಲ್ಲಿ ಶ್ರೀ ಬ್ರಹ್ಮಾನಂದರು ಎಂಬ ಸಂತರೊಬ್ಬರು ಇದ್ದರು. ಅವರು ಕಾಶಿಯಿಂದ ತಮ್ಮ ತಲೆಯ ಮೇಲೆ ಹೊತ್ತು ತಂದು ಪ್ರತಿಷ್ಠಾಪಿಸಿದ ವಿಶ್ವನಾಥ ಲಿಂಗವು ಇಲ್ಲಿದೆ. ಇಂದು ಈ ಅಂಕಣದಲ್ಲಿ ನಾನು ತಿಳಿಸಲು ಹೊರಟಿರುವ ಒಬ್ಬ ಅದ್ಭುತ ಸಾಧಕರು ಅವರೇ ತುಂಬಿಗೆರೆಯ ಶ್ರೀ ಬ್ರಹ್ಮಾನಂದರು.
ಚಿದಂಬರಪ್ಪ ಮತ್ತು ಸಾವಿತ್ರಮ್ಮ ದಂಪತಿಗಳಿಗೆ ಮುರಗೋಡು ಚಿದಂಬರನ ವರಪ್ರಸಾದವಾಗಿ ಹುಟ್ಟಿದವರು ಇವರು. ಇವರ ಪೂರ್ವಾಶ್ರಮದ ಹೆಸರು ಚನ್ನಪ್ಪಯ್ಯ. ಚನ್ನಪ್ಪಯ್ಯನವರ ತಂದೆ ಚಿದಂಬರಪ್ಪನವರು ಒಮ್ಮೆ ಅಣಜಿ ವಿರೂಪಾಕ್ಷಜೋಯಿಸರೊಟ್ಟಿಗೆ ಮುರಗೋಡು ಯಾತ್ರಗೆಂದು ಹೋದಾಗ ಒಂದುವಾರವಾದರೂ ಚಿದಂಬರನ ದರ್ಶನವಾಗುವುದಿಲ್ಲ. ಆಗ ಬಹಳ ನೋವಿನಿಂದ ನಾಳೆ ಚಿದಂಬರನ ದರ್ಶನವಾಗದಿದ್ದರೆ ಗ್ರಾಮ ಪ್ರದಕ್ಷಿಣೆ ಮಾಡಿ ಹಿಂತಿರುಗೋಣ ಎಂದು ಮಾತನಾಡಿಕೊಂಡು ಮಲಗುತ್ತಾರೆ. ಬೆಳಗ್ಗೆ ಇನ್ನೇನು ಹೊರಡಲುನುವಾದಾಗ ಚಿದಂಬರನ ಅಪ್ಪಣೆಯಂತೆ ಜನಸಂದಣಿಯಲ್ಲಿ ಒಬ್ಬ ವ್ಯಕ್ತಿಬಂದು ವಿರೂಪಾಕ್ಷ ಜೋಯಿಸರು ಬರಬೇಕು ಚಿದಂಬರನ ದರ್ಶನಕ್ಕೆ ಎಂದಾಗ ಸುಮಾರು 15-20 ವಿರೂಪಾಕ್ಷ ಜೋಯಿಸರು ಬಂದು ಚಿದಂಬರನ ಮುಂದೆ ನಿಲ್ಲುತ್ತಾರೆ ಆದರೆ ಚಿತ್ರದುರ್ಗ ಮೂಲದವರು ಎಂದಾಗ ಇವರು ಹೋಗಿ ಚಿದಂಬರ ಸ್ವಾಮಿಗಳಿಗೆ ನಮಸ್ಕಾರ ಮಾಡಿದಾಗ “ಏನು ಜೋಯಿಸರೇ ಚಿದಂಬರನ ಮೇಲೆ ಇಷ್ಟೊಂದು ಆಗ್ರಹವೇ ? ಗ್ರಾಮ ಪ್ರದಕ್ಷಿಣೆ ಮಾಡಿ ಹೋಗಬೇಕೆಂದಿದ್ದಿರಾ ?, ಇನ್ನೂ ಒಂದು ವಾರಗಳ ಕಾಲ ಇಲ್ಲಿ ಉಳಿಯಬೇಕು”ಎಂದು ಆಜ್ಞಾಪಿಸುತ್ತಾರೆ. ಅದರಂತೆ ಒಂದುವಾರದ ತರುವಾಯ ಚಿದಂಬರ ಸ್ವಾಮಿಗಳು ಪೂರ್ಣಫಲವನ್ನು ನೀಡಿ ಜೋಯಿಸರೇ ಇದು ನಿಮಗೆ, ನಂತರ ಚಿದಂಬರಪ್ಪನವರಿಗೆ ನೀಡಿ ಇದು ನಿಮಗೆ. ಒಬ್ಬ ಮಗನು ಹುಟ್ಟುತ್ತಾನೆ ಮುಂದೆ ಅವನಿಂದ ಉತ್ತಮ ಗತಿಯುಂಟಾಗುವುದು, ಹಾಗು ಜೋಯಿಸರ ಕಡೆಗೆ ತಿರುಗಿ ಜೋಯಿಸರೇ ನಿಮಗೆ ಒಬ್ಬಳು ಮಗಳಾಗುತ್ತಾಳೆ ಅವಳನ್ನು ಯಾರ ಮನೆಗೆ ವಿವಾಹ ಮಾಡಿಕೊಡುವಿರೋ ಆ ಮನೆಯಲ್ಲಿ ಚಿದಂಬರನ ಅವತಾರವಾಗುತ್ತದೆ ಎಂದರು. ಅದರಂತೆ ಮುಂದೆ ಜೋಯಿಸರ ಮಗಳಿಗೆ ಚಿದಂಬರಮ್ಮ ಎಂದು ಹೆಸರಿಟ್ಟು, ಅವರನ್ನು ವಿವಾಹ ಮಾಡಿಕೊಂಡ ಮನೆಯಲ್ಲಿ ಸದ್ಗುರು ಶ್ರೀ ಶಂಕರಲಿಂಗ ಭಗವಾನರ ಅವತಾರವಾಗುತ್ತದೆ.
Klive Special Aerticle ಇಲ್ಲಿ ಚಿದಂಬರಪ್ಪನವರು ಆಗ ಇನ್ನೂ ದಾವಣಗೆರೆಯ ಸಮೀಪದ ಹೊನ್ನೂರು ಎಂಬ ಗ್ರಾಮದಲ್ಲಿದ್ದರು. ಅಲ್ಲಿಯೇ ಚನ್ನಪ್ಪಯ್ಯನವರ ಜನನವಾಯಿತು. ಆಗ ಚನ್ನಪ್ಪಯ್ಯನವರಿಗೆ ಅವರ 8ನೇ ವಯಸ್ಸಿನಲ್ಲಿ ಬ್ರಹ್ಮೋಪದೇಶವಾಯಿತು.ನಂತರ ತ್ರಿಕಾಲ ಸಂಧ್ಯಾವಂದನೆಯನ್ನೂ, ಇಂದ್ರಾಕ್ಷಿಸ್ತೋತ್ರ, ದೇವತಾರ್ಚನೆ ಎಲ್ಲವನ್ನೂ ಕಲಿತು, ನಂತರ ಕುಮಾರವ್ಯಾಸನ ಗದುಗಿನ ಭಾರತದ ವಾಚನ ವ್ಯಾಖ್ಯಾನಗಳನ್ನೂ ಚನ್ನಪ್ಪಯ್ಯ ಕಲಿತರು. ಇದೇ ಸಂದರ್ಭದಲ್ಲಿ ಅವರಿಗೆ ಮುರಿಗೆಪ್ಪನವರ ಪರಿಚಯವಾಗುತ್ತದೆ. ಮುರಿಗೆಪ್ಪನವರೂ ಇವರಂಥದ್ದೇ ಸ್ವಭಾವದವರಾದ್ದರಿಂದ ಬಹಳ ಬೇಗ ಸ್ನೇಹಿತರಾಗುತ್ತಾರೆ. ನಂತರ ಚನ್ನಪ್ಪಯ್ಯನವರದು ಬಹಳ ಶಿಸ್ತು ಮತ್ತು ಮುಂದೆ ಅವರಿಗೆ ವಿವಾಹವಾಗುತ್ತದೆ ಆದರೆ ಅವರ ಮೊದಲ ಮಡದಿ ತಿಮ್ಮಮ್ಮ ಬಹಳ ಬೇಗ ಸ್ವರ್ಗಸ್ತರಾಗುತ್ತಾರೆ.ತದನಂತರ ಅವರು ಅಪುತ್ರವತಿಯಾಗಿ ಮರಣಹೊಂದಿದ ಕಾರಣದಿಂದಾಗಿ ಅವರ ತಂಗಿ ವೆಂಕಟಲಕ್ಷ್ಮಮ್ಮನವರನ್ನು ಮದುವೆಯಾದರು. ಆಮೇಲೆ ಸುಮಾರು ನಲವತ್ತನೇ ವಯಸ್ಸಿನಲ್ಲಿದ್ದಾಗ ಅವರಿಗೆ ಪತ್ನಿವಿಯೋಗವಾಗುತ್ತದೆ. ಆ ಸಂದರ್ಭದಲ್ಲಿ ಚನ್ನಪ್ಪಯ್ಯನವರು ಅತ್ಯಂತ ವ್ಯಾಕುಲರಾಗಿ, ದುಃಖಿತರಾಗಿಬಿಡುತ್ತಾರೆ. ಆಗ ಅವರ ಮಾವ ಕೃಷ್ಣಪ್ಪನವರು ತುಂಬಿಗೆರೆಗೆ ಕರೆದರೂ ಸಹಾ ಅವರು ಬರಲು ಒಪ್ಪುವುದಿಲ್ಲ. ನಂತರ ಅವರ ಸ್ನೇಹಿತರಾದ ಮುರುಗೆಪ್ಪನವರು ಕಾರ್ಯ ನಿಮಿತ್ತ ಹೊನ್ನೂರಿಗೆ ಬರುತ್ತಾರೆ. ಇವರ ಯೋಗ ಕ್ಷೇಮ ವಿಚಾರಿಸಿ ಇವರ ಪರಿಸ್ಥಿತಿಯನ್ನು ಅರಿತು ಅವರು “ಕೈವಲ್ಯ ಕಲ್ಪವಲ್ಲರಿ”ಎಂಬ ಪುಸ್ತಕವನ್ನು ಇವರಿಗೆ ನೀಡುತ್ತಾರೆ. ಅದರಿಂದ ಪುಳಕಿತರಾದ ಚನ್ನಪ್ಪನವರು ಸಂಸಾರ ಜಂಜಾಟದಿಂದ ದೂರಾಗಲು ಕಾಶಿಗೆ ಪ್ರಯಾಣ ಬೆಳೆಸುತ್ತಾರೆ. ಅಲ್ಲಿ ಕಾಶಿ ಸಂಸ್ಥಾನದ ರಾಜಗುರುಗಳಾದ ಶ್ರೀ ವಿಶ್ವನಾಥೇಂದ್ರ ಸರಸ್ವತಿ ಎಂಬುವವರಲ್ಲಿ ಉಳಿದುಕೊಂಡು ಮರು ದಿನ ಮಣಿಕರ್ಣಿಕಾ ಘಾಟಿನಲ್ಲಿ ಸ್ನಾನಕ್ಕೆಂದು ಬಂದಾಗ ಅಲ್ಲಿ ಧ್ಯಾನಸ್ಥರಾಗಿದ್ದವರೊಬ್ಬರನ್ನು ಕಂಡು ಆಕರ್ಷಿತರಾಗುತ್ತಾರೆ. ಅಲ್ಲಿದ್ದ ಕೆಲವರನ್ನು ಇವರ ಬಗ್ಗೆ ವಿಚಾರಿಸಲು “ನಾವೂ ಸುಮಾರು ವರ್ಷಗಳಿಂದ ನೋಡುತ್ತಿದ್ದೇವೆ ಆದರೆ ಅವರು ಆ ಜಾಗದಿಂದ ಎದ್ದಿಲ್ಲ”ಎಂದು ಉತ್ತರಿಸಿದಾಗ, ಉದ್ದ ಬೆಳೆದ ಜಟಾ-ಗಡ್ಡಗಳು, ನೀರಡಿಕೆ ಹಸಿವೆಯ ಆಯಾಸಗಳಿಲ್ಲದೇ ಕುಳಿತಿರುವ ಬ್ರಹ್ಮಾನುಸಂಧಾನಿ ಚನ್ನಪ್ಪಯ್ಯನವರನ್ನು ಅಲ್ಲಿಯೇ ಕೂಡಿಸಿಬಿಟ್ಟಿತು.
ಒಂದುವಾರ ಪರ್ಯಂತ ಊಟತಿಂಡಿ ನಿದ್ರೆಗಳ ಪರಿವೆಯಿಲ್ಲದೇ ಇವರು ಅವರ ಮುಂದೆ ಕುಳಿತಿದ್ದಾರೆ ಕಾರಣ ಇಷ್ಟೇ ಊಟ ಉಪಾಹಾರಗಳಿಗೆ ಹೋದರೆ ಆ ಸಂದರ್ಭದಲ್ಲಿ ಬಹಿರ್ಮುಖರಾದರೆ ನಂತರ ಅದು ಎಷ್ಟು ಕಾಲ ಬಹಿರ್ಮುಖತೆಯಿದೆಯೋ ಒಂದುವೇಳೆ ಕೂಡಲೇ ಅಂತರ್ಮುಖರಾದರೆ ಅವರಿಂದ ಉಪದೇಶ ಪಡೆದು ಮುಕ್ತಿ ಹೊಂದುವ ಭಾಗ್ಯ ಕೈತಪ್ಪುವುದಲ್ಲ ಎಂದು ಕುಳಿತುಬಿಟ್ಟರು. ನಂತರ ಏಳನೇ ದಿವಸ ಅಲ್ಲಿದ್ದ ಅವಧೂತರು ಕಣ್ತೆರೆದು ನೋಡಿದಾಗ ಅವರಿಗೆ ನಮಸ್ಕರಿಸುತ್ತಾರೆ. ಆ ಅವಧೂತರು ಬೇರೆ ಯಾರೂ ಅಲ್ಲ ಸಾಕ್ಷಾತ್ ದತ್ತಾತ್ರೆಯರಿಂದ ಅನುಗ್ರಹಪಡೆದವರಾದ ಶ್ರೀಗಣೇಶಾವಧೂತರಾಗಿದ್ದರು. ಎದ್ದವರೇ ಇವರನ್ನು ನೋಡಿ “ಎಲೋ ! ಯಾರು ನೀನು ?”ಎಂದರು ಇವರು “ಸಂಸಾರದಲ್ಲಿ ಬೇಸರಗೊಂಡು ಮುಕ್ತಿಗಾಗಿ ತಮ್ಮತ್ತ ಬಂದಿದ್ದೇನೆಂದರು. “ಎಲೋ ನೀನು ಪಾಪಿ, ಇಲ್ಲಿಂದ ಹೊರಟುಹೋಗು” ಎಂದರು ಆದರೆ ಚನ್ನಪ್ಪಯ್ಯನವರು ಕದಲಲಿಲ್ಲ, ಆಗ ಅವರ ದಂಡದಿಂದ ಇವರ ತಲೆಗೆ ಜೋರಾಗಿ ಹೊಡೆದರು, ಗಾಯವಾಗಿ ರಕ್ತ ಚಿಮ್ಮುತ್ತದೆ, ಆದರೆ ಅವರ ಕಾಲುಗಳನ್ನು ಇವರು ಗಟ್ಟಿಯಾಗಿ ಹಿಡಿದಾಗ, ಗಣೇಶಾವಧೂತರು ಒಂದು ಬಟ್ಟಲು ತರಲು ಹೇಳಿ ಅದರಲ್ಲಿ ಮಲವಿಸರ್ಜಿಸಿ ಅದನ್ನು ತಿನ್ನು ಅದೇ ನಿನಗೆ ಉಪದೇಶ ಎಂದಾಗ ಚನ್ನಪ್ಪಯ್ಯನವರು “ವರ್ಷಾನುಗಟ್ಟಲೇ ಧ್ಯಾನಸ್ಥನಾಗಿರುವ ಈ ಅವಧೂತರು ಮಲವು ಅಸಹ್ಯ ಹೇಗಾಗುತ್ತದೆಂದು ತಿಳಿದು ಸ್ವೀಕರಿಸಲು ಹೋದಾಗ ಗಣೇಶಾವಧೂತರು ಇವರನ್ನು ತಡೆಯುತ್ತಾರೆ. ಹಾಗೂ ಇವರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ನಿಜವಾದ ಆತ್ಮವಿದ್ಯಾ ಜಿಜ್ಞಾಸುವೋ ಅಲ್ಲವೋ ಎಂದು ತಿಳಿದು, ನಂತರ ಇವರಿಗೆ ಸನ್ಯಾಸ ನೀಡಲು ಮುಂದಾಗುತ್ತಾರೆ.
ನಂತರ ಇವರನ್ನು ಕುರಿತು ಗಣೇಶಾವಧೂತರು ಹೇಳುತ್ತಾರೆ “ನೀನು ಬಹಳ ಪುಣ್ಯಶಾಲಿ, ನನ್ನನ್ನು ಇದುವರೆಗೆ ಯಾರೂ ಕೂಡಾ ಬ್ರಹ್ಮವಿಚಾರಕ್ಕೆ, ಕಾಡಿರಲಿಲ್ಲ, ನಾನು ನೇರವಾಗಿ ಸಾಕ್ಷಾತ್ ದತ್ತಾತ್ರೇಯರಿಂದ ನೇರ ಅನುಗ್ರಹೀತನಾಗಿ ಇಲ್ಲಿಗೆ ಬಂದೆ, ಯಾವಾಗ ಬಂದೆ ತಿಳಿಯದು, ಆದರೆ ಈಗ ಎಚ್ಚರವಾದಾಗ ನಿನ್ನಂತಹ ಜಿಜ್ಞಾಸುವಿನ ಭೆಟ್ಟಿಯಾಗಿದೆ”(ವಾಚಕರು ಇಲ್ಲಿ ಗಮನಿಸಬೇಕು, ದತ್ತಾತ್ರೇಯರು ಕೃತಯುಗದ ಸಂದರ್ಭದಲ್ಲಿ ಪ್ರಕಟವಾದವರು, ಅತ್ರಿ ಅನಸೂಯರ ಪುತ್ರರಾಗಿ, ಅವರ ಶಿಷ್ಯ ಕಾರ್ತವೀರ್ಯಾರ್ಜುನ ದತ್ತನ ಅನುಗ್ರಹದಿಂದ ಸಹಸ್ರಬಾಹುಗಳಿದ್ದವು ಎಂದು ಪುರಾಣದಲ್ಲಿ ಉಲ್ಲೇಖವಿದೆ. ಕಲಿಯುಗದಲ್ಲಿ ರೇಣುಕಾ-ಜಮದಗ್ನಿಯರಿಗೆ ಮುಳುವಾಗಿ ಪರಶುರಾಮರಿಂದ ಹತರಾಗುತ್ತಾರೆ ) ಇಂಥ ಸದ್ಗುರುಗಳ ಕೃಪೆ ಯಾರಿಗೆ ತಾನೇ ಆಗಲು ಸಾಧ್ಯ, ಚನ್ನಪ್ಪಯ್ಯನವರು ಚಿದಂಬರ ಸ್ವಾಮಿಗಳ ಅನುಗ್ರಹದಿಂದ ಜನಿಸಿದವರು, ಈ ಲೋಕೋದ್ಧಾರಕ್ಕಾಗಿಯೇ ಅಲ್ಲವೇ ಮಹಾಪುರುಷರ ಜನನವಾಗುವುದು. ಹಾಗೇ ಗಣೇಶಾವಧೂತರಿಂದ ಅನುಗ್ರಹೀತರಾದ ಚನ್ನಪ್ಪಯ್ಯನವರ ಮುಂದಿನ ಜೀವನ ಚಿತ್ರಣ ಮತ್ತಷ್ಟು ಕುತೂಹಲಕಾರಿಯಾಗಿದೆ.
Klive Special Aerticle ಚಿನ್ನಕ್ಕಿಂತಲೂ ಚೆನ್ನ, ಚನ್ನಪ್ಪಯ್ಯ ಅವಧೂತರು ಲೇ: ಪ್ರಸಾದ್ ಶ್ರೀವತ್ಸ, ದಾವಣಗೆರೆ
Date:
