Sunday, August 23, 2026
Sunday, August 23, 2026

ಸಾಗರ ತಾಲ್ಲೂಕಿನಲ್ಲಿ ವೃಕ್ಷಲಕ್ಷ ಆಂದೋಲನ ಸಂಘಟನೆಯಿಂದ ಸಾಮಾಜಿಕ ಅರಣ್ಯಗಳ ಸಂರಕ್ಷಣಾ ಅಭಿಯಾನ

Date:

ಸಾಗರ ತಾಲೂಕಿನ ಶಿರವಂತೆ ಬಳಿ ಗೋಳಗೋಡ ವನದಲ್ಲಿ ನಡೆದ ಅಧ್ಯಯನ- ಸಮೀಕ್ಷೆ. ವೃಕ್ಷ ಲಕ್ಷ ಆಂದೋಲನ ಸಂಘಟನೆ ಆಶ್ರಯದಲ್ಲಿ ಸಾಮಾಜಿಕ ಅರಣ್ಯಗಳ ಸಂರಕ್ಷಣಾ ಅಭಿಯಾನವನ್ನು ಪ್ರಾರಂಭಿಸಲಾಗಿದೆ.

ರಾಜ್ಯದಲ್ಲಿ ವಿಶೇಷವಾಗಿ ಪಶ್ಚಿಮ ಘಟ್ಟದಲ್ಲಿ ಕಳೆದ 35 ವರ್ಷಗಳಲ್ಲಿ ಸಾವಿರಾರು ಸಾಮಾಜಿಕ ಅರಣ್ಯವನಗಳನ್ನು ಸರ್ಕಾರದಿಂದ ನರ‍್ಮಿಸಲಾಗಿದೆ. ಹತ್ತಾರು ಸಾವಿರ ಎಕರೆ ವ್ಯಾಪ್ತಿ ಹೊಂದಿರುವ ಈ ವನಗಳ ಸಂರಕ್ಷಣೆಗೆ ಜಾಗೃತಿ ಅಭಿಯಾನ ಶುರು ಮಾಡಲಾಗಿದೆ. ಇಂಥ ರಚನಾತ್ಮಕ, ಹಸಿರು ಸಂರಕ್ಷಣಾ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ಜೀವವೈವಿಧ್ಯ ಮಂಡಳಿಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಕರೆ ನೀಡಿದರು.

ಅವರು ಮಂಗಳವಾರರಂದು ಸಾಗರ ತಾಲ್ಲೂಕು ಶಿರವಂತೆ ಬಳಿ ಸಾಮಾಜಿಕ ಅರಣ್ಯ ವನದಲ್ಲಿ ನಡೆದ ಸಾಮಾಜಿಕ ಅರಣ್ಯ ಸಂರಕ್ಷಣಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಗರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ರವಿ ಅರಣ್ಯಗಳು ಮಲೆನಾಡಿನ ನದಿ ಕಣಿವೆಗಳ ಹಸಿರು ಹೆಚ್ಚಿಸಲು ಕಾರಣವಾಗಿದೆ ವನ ಸಂರಕ್ಷಣಾ ಅಭಿಯಾನದಲ್ಲಿ ಪಂಚಾಯತರಾಜ್ ಇಲಾಖೆ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಸಾಗರ ಆರ್.ಎಫ್. ಓ. ರಾಘವೇಂದ್ರ ಅವರು ಶಿವಮೊಗ್ಗಾ ಜಿಲ್ಲೆಯಲ್ಲಿ 264 ಸಾಮಾಜಿಕ ಅರಣ್ಯ ವನಗಳಿವೆ ಇವುಗಳ ವ್ಯಾಪ್ತಿ 330ಹೇಕ್ಟೇರ್ ಎಂದು ಮಾಹಿತಿ ನೀಡಿದರು.

ವೃಕ್ಷ ಲಕ್ಷ ಆಂದೋಲನದ ಆನೆಗೋಳಿ ಸುಬ್ಬರಾವ್ ಸ್ವಾಗತ ಮಾಡಿ, “ಈ ವನಗಳ ಸಸ್ಯ ಪುನಶ್ಚೇತನ ಚೆನ್ನಾಗಿ ಕಂಡು ಬಂದಿದೆ. ಇಲ್ಲಿ ನೈಸರ್ಗಿಕ ಕಾಡು ಬೆಳೆಯಲು ರೈತರ ಸಹಭಾಗಿತ್ವ ಅತ್ಯವಶ್ಯ” ಎಂದರು. ಜೀವವೈವಿಧ್ಯ ಮಂಡಳಿ ತಜ್ಞ ಉಪ ಸಮಿತಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ ಸಾಮಾಜಿಕ ಅರಣ್ಯ ವನಗಳ ಪರಿಸ್ಥಿತಿ ಬಗ್ಗೆ ವಿಶೇಷ ಅಧ್ಯಯನ ಅತ್ಯವಶ್ಯ ಎಂದರು.

ಸೊರಬದ ಹೊಳೆಮರೂರಿನ ಸಾಮಾಜಿಕ ಅರಣ್ಯ ಸಂರಕ್ಷಣೆಗೆ ರೈತ ಮುಖಂಡ ಗಂಗಾಧರ ಗೌಡ ಅವರ ತಂಡ ಮುಂದಾಗಿದೆ” ಎಂದರು.

ಇನ್ನು 15 ದಿನಗಳ ಕಾಲ ಮಲೆನಾಡಿನ ಹಳ್ಳಿಗಳಲ್ಲಿ ಈ ಅಭಿಯಾನ ನಡೆಸಲಿದ್ದೇವೆ, ಸಾಮಾಜಿಕ ಅರಣ್ಯ ಜಾಗೃತಿ ಜಾಥಾ 7-8 ಜುಲೈದಂದು ಆನಂದಪುರ, ಬಟ್ಟೆಮಲ್ಲಪ್ಪ, ಆಯನೂರು, ಮಂಡಗದ್ದೆ, ತೀರ್ಥಹಳ್ಳಿ, ಹುಂಚಗಳಿಗೆ ಭೇಟಿ
ನೀಡಲಿದೆ. ಜಿಲ್ಲಾಧಿಕಾರಿ ZP ಸಿಇಒ ಅವರನ್ನು ಭೇಟಿ ಮಾಡಲಿದೆ ಎಂದು ವೃಕ್ಷ ಲಕ್ಷ ಆಂದೋಲನದ ಪ್ರಮುಖ ಕೆ.ವೆಂಕಟೇಶ ತಿಳಿಸಿದರು.

ತ್ರಿಪುರಾಂತಕ ದೇವಾಲಯದ ಅದ್ಯಕ್ಷ ಉಮೇಶ್ ಅಧ್ಯಕ್ಷತೆ ವಹಿಸಿದ್ದರು.

ಅರಣ್ಯ ಇಲಾಖೆ ಅದಿಕಾರಿಗಳಾದ ಪ್ರಭಾಕರ್, ಅಣ್ಣಪ್ಪ, ಸ್ಥಳೀಯ ಪ್ರಮುಖ ಪರಿಸರ ಕಾರ್ಯಕರ್ತರಾದ ಅರುಣ ಖಂಡಿಕಾ, ವೆಂಕಟೇಶ ಖಂಡಿಕಾ, ಗೀಜಗಾರು ಲಕ್ಷ್ಮೀನಾರಾಯಣ, ಕೆಸವಿನಮನೆ ಮಂಜುನಾಥ್, ಹೂಗೊಪ್ಪಲು ವಿಶ್ವೇಶ್ವರ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D.K. Shivakumar 500 ಕೆಪಿಎಸ್ ಶಾಲೆಗಳನ್ನ ಸಮಗ್ರ ಉನ್ನತೀಕರಿಸುವ “ಶಿಕ್ಷಣ ಕ್ರಾಂತಿ-2030″ಯೋಜನೆಗೆ ಹೆಜ್ಜೆಯಿಟ್ಟಿದ್ದೇವೆ,- ಡಿ.ಕೆ.ಶಿವಕುಮಾರ್.

D.K. Shivakumar ನಮ್ಮ ಹಳ್ಳಿಯ ಮಣ್ಣಿನ ಪ್ರತಿಭೆಗಳು ವಿಶ್ವದಂಗಳದಲ್ಲಿ ರಾರಾಜಿಸಬೇಕು, ಅವರಿಗೆ ಅತ್ಯುನ್ನತ...

B.Y. Raghavendra “ಸರ್ಕಾರಿ ಶಾಲೆಗೆ ನೀವು ಸಲ್ಲಿಸಿರುವ ಅಪಾರಸೇವೆಗೆ ದೊರೆತ ಅರ್ಹ ಗೌರವ”- ಬಿ.ವೈ.ರಾಘವೇಂದ್ರ.

B.Y. Raghavendra ಕೇಂದ್ರ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಕಟಿಸಿರುವ...

Shivamogga News ಹರಕೆರೆ ರಿಂಗ್ ರಸ್ತೆಯಲ್ಲಿ ದರೋಡೆ ಮಾಡಿದ್ದ ಖದೀಮರು ಈಗ ‘ಅಂದರ್’.

Shivamogga News ಹರಕೆರೆ ರಿಂಗ್‌ರೋಡ್‌ನಲ್ಲಿ ಸಾರ್ವಜನಿಕರನ್ನು ಬೆದರಿಸಿ, ಹಲ್ಲೆ ನಡೆಸಿ ಹಣ...

D. Devaraj Arasu ದೇವರಾಜ ಅರಸು ಅವರಿಗೆ ನಮ್ಮರೈತರು ಚಿರ ಋಣಿಯಾಗಿರಬೇಕು – ಬಿ.ಆರ್.ಜಯಂತ್.

D. Devaraj Arasu  1974ರ ಭೂ ಸುಧಾರಣಾ ಕಾಯ್ದೆಗೆ ಐತಿಹಾಸಿಕ ಮಹತ್ವವಿದ್ದು,...