Thursday, July 23, 2026
Thursday, July 23, 2026

Shimoga News ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆಮೂತ್ರ ತಪಾಸಣೆ, ಬಿ.ಪಿ. ಕಿಡ್ನಿ, ಮಧುಮೇಹ ಪತ್ತೆ ಉಚಿತ ತಪಾಸಣೆ ಮಾಡಲಾಗುವುದು- ಡಾ.ಚಂದ್ರಶೇಖರ್.

Date:

Shimoga News ಶಿವಮೊಗ್ಗದ ತೃಪ್ತಿ ಹೆಲ್ತ್ ಕೇರ್ ಆಶ್ರಯದಲ್ಲಿ ಭಾವಸಾರ ವಿಜನ್ ಇಂಡಿಯ ವೈಭವ್ ಸೀನಿಯರ್ ಸಿಟಿಜನ್ ಸಮಾಜದವರಿಗೆ ಉಚಿತ ಮೂತ್ರ ರೋಗ, ಮೂತ್ರಕೋಶ ತಪಾಸಣೆ ಮತ್ತು ಮಾಹಿತಿ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮೂತ್ರ ರೋಗ ತಜ್ಞ ಡಾ| ಚಂದ್ರ ಶೇಖರ್ ಅವರು, ಆರೋ ಗ್ಯವೇ ಭಾಗ್ಯ, ಆರೋಗ್ಯವಿಲ್ಲದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಆದ್ದರಿಂದ ಪ್ರತಿಯೊಬ್ಬರು ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕು ಎಂದರು.

Shimoga News ಶಿವಮೊಗ್ಗದ ದುರ್ಗೀಗುಡಿ ಯಲ್ಲಿರುವ ನಮ್ಮ ಸೆಂಟರ್‌ನಲ್ಲಿ ಆರ್ಥಿಕವಾಗಿ ಸಂಕಷ್ಠದಲ್ಲಿರುವವರಿಗೆ ಮತ್ತು ಹಲವಾರು ಸಂಘ ಸಂಸ್ಥೆಗಳಿಗೆ ಉಚಿತವಾಗಿ ಮೂತ್ರ ರೋಗ, ಬಿ.ಪಿ. ಕಿಡ್ನಿ, ಮಧುಮೇಹ ಮತ್ತಿತರ ತಪಾಸಣೆಗಳನ್ನು ನಡೆಸಲಾಗುತ್ತಿದ್ದು, ರೋಗಿಗಳು ಇದರ ಸದುಪಯೋಗ ಪಡೆಯಲು ತಿಳಿಸಿದರು. ತಪಾಸಣೆಯಲ್ಲಿ 26ಕ್ಕೂ ಹೆಚ್ಚು ಜನರು ಇದರ ಪ್ರಯೋಜನ ಪಡೆದರು.

ಆಸ್ಪತ್ರೆ ಪ್ರಾರಂಭವಾದಾಗಿನಿಂದ ಇದುವರೆಗೆ 2224ಕ್ಕೂ ಹೆಚ್ಚು ಜನರು ಇದರ ಪ್ರಯೋಜನ ಪಡೆದರು. ಹೆಲ್ತ್ ಕೇರ್‌ನ ರಜಿನಿ, -ಸುಶ್ಮಾ, ರಕ್ಷಿತಾ ಅವರು ಕಾರ್ಯಕ್ರಮ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ಕುವೆಂಪು ವಿವಿಯ ಸ್ನಾತಕೋತ್ತರ ಡಿಪ್ಲೊಮಾ ಪ್ರವೇಶಾತಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Kuvempu University ಕುವೆಂಪು ವಿಶ್ವವಿದ್ಯಾಲಯವು 2026-27ನೇ ಸಾಲಿನ ವಿವಿಧ ಸ್ನಾತಕೋತ್ತರ ಪದವಿ,...

Dr. G. Parameshwara ಎಸ್ ಐ ಆರ್ ಪ್ರಕ್ರಿಯೆ: ಜನರಿಗೆ ತೊಂದರೆಯಾಗದಂತೆ ಕ್ರಮ- ಡಾ.ಜಿ.ಪರಮೇಶ್ವರ

Dr. G. Parameshwara ಕೇಂದ್ರ ಸರ್ಕಾರದ ಎಸ್‌ಐಆರ್‌ ಪ್ರಕ್ರಿಯೆಗೆ ಅಗತ್ಯ...