Wednesday, July 1, 2026
Wednesday, July 1, 2026

ಧರೆಗುರುಳಿದ ಜಲಸ್ಥಾವರ, ಜನರ ಕುತೂಹಲ ತಣಿಸಿದ ದೃಶ್ಯ

Date:

ಶಿವಮೊಗ್ಗ ನಗರದ ಎಂಆರ್‌ಎಸ್‌ ವೃತ್ತದಲ್ಲಿದ್ದ ಹಳೆಯ ವಾಟರ್‌ ಟ್ಯಾಂಕ್‌ ಅನ್ನು ಇಂದು ಮಧ್ಯಾಹ್ನ ಕೆಡವಲಾಯಿತು. ಈ ವಾಟರ್‌ ಟ್ಯಾಂಕ್‌ನಿಂದಾಗಿ ಈ ಸರ್ಕಲ್‌ ಡಬಲ್‌ ಟ್ಯಾಂಕ್‌ ಎಂದೇ ಪ್ರಖ್ಯಾತವಾಗಿತ್ತು.
ದಶಕಗಳ ಹಿಂದೆ ನಿರ್ಮಿಸಲಾಗಿದ್ದ ಈ ನೀರಿನ ಟ್ಯಾಂಕ್‌ ಬಳಕೆಗೆ ಯೋಗ್ಯವಿರಲಿಲ್ಲ ಮತ್ತು ಹಳೆಯದಾಗಿದ್ದರಿಂದ ನೀರು ಸೋರಿಕೆಯಾಗುತ್ತಿತ್ತು. ಆದ್ದರಿಂದ, ಸಾರ್ವಜನಿಕರ ಹಿತದೃಷ್ಟಿಯಿಂದ ಇಲ್ಲಿಂದ ಸ್ವಲ್ಪ ದೂರದಲ್ಲಿ ಈಚೆಗೆ ಹೊಸ ಟ್ಯಾಂಕ್‌ ನಿರ್ಮಿಸಲಾಗಿತ್ತು. ಹಳೆಯ ಟ್ಯಾಂಕ್‌ ದುರ್ಬಲಗೊಂಡಿದ್ದರಿಂದ ಅದನ್ನು ಕೆಡವಲು ಅಧಿಕಾರಿಗಳು ನಿರ್ಧರಿಸಿದ್ದರು.
ಇಂದು ಮಧ್ಯಾಹ್ನ ಜೆಸಿಬಿ ಹಾಗೂ ಆಧುನಿಕ ತಂತ್ರಜ್ಞಾನ ಬಳಸಿ ಹಳೆಯ ಟ್ಯಾಂಕ್‌ ಅನ್ನು ಕೆಡವಲಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಲ್‌ನಲ್ಲಿ ಕೆಲವು ಹೊತ್ತು ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಸರ್ಕಲ್‌ನ ಸುತ್ತಲೂ ನಿಂತು ನೂರಾರು ಜನರು ಟ್ಯಾಂಕ್‌ ಉರುಳುವ ದೃಶ್ಯವನ್ನು ಕುತೂಹಲದಿಂದ ವೀಕ್ಷಿಸಿದರು. ಈ ಕಾರ್ಯಾಚರಣೆಯು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಈಗ ಸಂಚಾರ ಸುಗಮವಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related