Karnataka Sanga ಕನ್ನಡ ಕಾವ್ಯ ಪರಂಪರೆಯಲ್ಲಿ ಕವಿಗೆ ಸಮಾನ ಹೃದಯವುಳ್ಳವರೆಲ್ಲರೂ ಸಹೃದಯರು ಎನ್ನುತ್ತಾರೆ ಎಂದು ಕಮಲಾ ನೆಹರು ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕಿ ಕಿರಣ್ ದೇಸಾಯಿ ಹೇಳಿದರು.
ಶಿವಮೊಗ್ಗ ನಗರದ ಕರ್ನಾಟಕ ಸಂಘದಲ್ಲಿ ಅಭಿವ್ಯಕ್ತಿ ಟ್ರಸ್ಟ್ ವತಿಯಿಂದ ಶಿವಮೊಗ್ಗ ಸಾಹಿತ್ಯ ಹಬ್ಬ ಮೊದಲ ಆವತ್ತಿಯ ಎರಡನೇ ದಿನದ ಐದನೇ ಗೋಷ್ಠಿಯಲ್ಲಿ ಭಾನುವಾರ ಸಾಮಗಾನ (ಜಿಎಸ್‌ಎಸ್-ಕಾವ್ಯ ಸಂವಾದ) ವಿಷಯದ ಕುರಿತು ಸಂವಾದಕಾರರಾಗಿ ಪಾಲ್ಗೊಂಡು ಮಾತನಾಡಿದರು.
ಜಿಎಸ್‌ಎಸ್ ಶತಮಾನೋತ್ಸವದಲ್ಲಿ ನಾವೆಲ್ಲಾ ಹೆಮ್ಮೆಪಡಬೇಕು. ಜಿಎಸ್‌ಎಸ್ ಕನ್ನಡದ ಸಾಂಸ್ಕೃತಿಕ ಪ್ರಜ್ಞೆ, ರಾಯಭಾರಿ. ಬದುಕಿನುದ್ದಕ್ಕೂ ಸಾಹಿತ್ಯದ ಕೀರ್ತಿಯನ್ನು ಉನ್ನತ ಶಿಖರಕ್ಕೆ ಹೊಯ್ದರು ಎಂದರು.
ಕುವೆಂಪು ಅವರ ನೇರ ಶಿಷ್ಯರು ಜಿಎಸ್‌ಎಸ್, ನಿಷ್ಶಬ್ದದಲ್ಲಿ ನಿಮ್ಮನ್ನು ನೆನೆಸುವೆ ಎಂದು ಕುವೆಂಪು ಅವರಿಗೆ ಹೇಳಿದರು. ಕಾವ್ಯ ಓದುವ ಸಂಪ್ರದಾಯ ಮರೆಯುತ್ತಿರುವ ಸಂದರ್ಭದಲ್ಲಿ ಇಂತಹ ಸಾಹಿತ್ಯ ಹಬ್ಬದಲ್ಲಿ ಜಿಎಸ್‌ಎಸ್ ಕಾವ್ಯ ಸಂವಾದ ನಡೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಪೇಸ್ ಪಿಯು ಕಾಲೇಜಿನ ಸಂಸ್ಕೃತ ಉಪನ್ಯಾಸಕಿ ಡಾ. ಮೈತ್ರೇಯಿ ಆದಿತ್ಯಪ್ರಸಾದ್ ಮಾತನಾಡಿ, ಜಿಎಸ್‌ಎಸ್ ಅವರ ಕಾವ್ಯ ದೇಶದ ಭವಿಷ್ಯತ್ತನ್ನು ಒಳಗೊಂಡಿರುತ್ತದೆ. ನೆಲ, ಜಲ ಸೇರಿದಂತೆ ಪಂಚಭೂತಗಳ ಸಂರಕ್ಷಿಸುವ ಹೊಣೆಗಾರಿಕೆಯನ್ನು ನೆನಪಿಸುವ ಕೆಲಸ ಜಿಎಸ್‌ಎಸ್ ಕವನಗಳಲ್ಲಿದೆ ಎಂದರು.
Karnataka Sanga ಪರಿಶ್ರಮಕ್ಕೆ ಮಿಗಿಲಾದದ್ದು ಇಲ್ಲ. ಅಪ್ರತಿಮ ವೀರತ್ವ, ಶೌರ್ಯ, ಸಹನೆ, ಧರ್ಮವನ್ನೆಲ್ಲವನ್ನು ಭಾವನಾತ್ಮಕವಾಗಿಯಷ್ಟೇ ಅಲ್ಲ. ಹೊಣೆಗಾರಿಕೆ ತಿಳಿಸುತ್ತದೆ. ಯುವ ಸಮೂಹಕ್ಕೆ ಭೂತಕಾಲದ ಸಂದೇಶದಿಂದ ವರ್ತಮಾನವನ್ನು ತೋರುವ ಮೂಲಕ ಸಮಷ್ಟಿಯ ಪ್ರಗತಿಯ ಕರ್ತವ್ಯಭಾವಕ್ಕೆ ನಮ್ಮನ್ನೆಲ್ಲ ಅವರ ಕವನ ಕರೆದೊಯ್ಯುತ್ತದೆ. ತನ್ಮೂಲಕ ದೇಶ ನಿರ್ಮಾಣದಲ್ಲಿ ತನ್ನದೇ ಪಾತ್ರವನ್ನು ಜಿಎಸ್‌ಎಸ್‌ನವರ ಕವನ ನಿರ್ವಹಿಸಿದೆ ಎಂದು ಹೇಳಿದರು.
ಹೊಸನಗರದ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕಿ ಮೇದಿನಿ ಕೆಸವಿನಮನೆ, ಕರ್ನಾಟಕ ಪಬ್ಲಿಕ್ ಶಾಲಾ ಶಿಕ್ಷಕ ಡಾ. ಬಸವರಾಜಪ್ಪ, ಹಾಗೂ ಡಾ. ಪ್ರಸಾದ್ ಬಾಪಟ್ ಕಾವ್ಯ ಸಂವಾದಕರಾಗಿ ಪಾಲ್ಗೊಂಡಿದ್ದರು.
Karnataka Sanga ಕವಿ ಜಿಎಸ್ಎಸ್ ಕನ್ನಡದ ಸಾಂಸ್ಕೃತಿಕ ಪ್ರಜ್ಞೆ, ರಾಯಭಾರಿ- ಡಾ.ಕಿರಣ್ ದೇಸಾಯಿ
Date:
