Monday, August 3, 2026
Monday, August 3, 2026

S.N. Chennasappa ಪೆಹಲ್ಗಾಮ್ ದುರಂತ. ಹುತಾತ್ಮ ಮಂಜುನಾಥ್ ಅವರನ್ನ ಸ್ಮರಿಸಿ, ಪ್ರಣಾಮ ಸಲ್ಲಿಸಿದ ಶಾಸಕ‌ ಚೆನ್ನಿ

Date:

S.N. Chennasappa ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿ ನಡೆದು ಇಂದಿಗೆ ಭರ್ತಿ ಒಂದು ವರ್ಷ ಸಂದಿದೆ. ಈ ಕರಾಳ ದಿನದಂದು ದೇಶಕ್ಕಾಗಿ ಮತ್ತು ಉಗ್ರರ ಅಟ್ಟಹಾಸಕ್ಕೆ ಬಲಿಯಾದ ಎಲ್ಲಾ ಅಮಾಯಕ ಚೇತನಗಳಿಗೆ ಭಕ್ತಿಪೂರ್ವಕ ಪ್ರಣಾಮಗಳನ್ನು ಸಲ್ಲಿಸುತ್ತೇನೆ ಎಂದು ಶಾಸಕರಾದ ಎಸ್.ಎನ್.ಚೆನ್ನಬಸಪ್ಪನವರು ಹೇಳಿದ್ದಾರೆ.

ಶಿವಮೊಗ್ಗದ ವೀರ ಪುತ್ರ ಮಂಜುನಾಥ್ ಅವರಿಗೆ ನಮನ:
ಈ ದುರಂತದಲ್ಲಿ ನಾವು ನಮ್ಮ ಶಿವಮೊಗ್ಗದ ಹೆಮ್ಮೆಯ ಪುತ್ರ ಶ್ರೀ ಮಂಜುನಾಥ್ ಅವರನ್ನು ಕಳೆದುಕೊಂಡೆವು. ಅವರ ಅಗಲಿಕೆಯ ನೋವು ಇಂದಿಗೂ ಮಾಸಿಲ್ಲ. ಮಗನ ಶೈಕ್ಷಣಿಕ ಸಾಧನೆಯನ್ನು ಸಂಭ್ರಮಿಸಲು ಪ್ರವಾಸಕ್ಕೆ ತೆರಳಿದ್ದ ಮಂಜುನಾಥ್ ಅವರು ಉಗ್ರರ ಗುಂಡಿಗೆ ಬಲಿಯಾದದ್ದು ಕೇವಲ ಒಂದು ಕುಟುಂಬದ ನಷ್ಟವಲ್ಲ, ಅದು ಇಡೀ ಶಿವಮೊಗ್ಗಕ್ಕೆ ಆದ ನಷ್ಟ. ಅವರ ಸರಳತೆ ಮತ್ತು ಮೃದು ಸ್ವಭಾವ ಇಂದಿಗೂ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿದೆ. ಮಂಜುನಾಥ್ ಅವರ ಕುಟುಂಬದ ಜೊತೆಗೆ ನಾವೆಲ್ಲರೂ ಸದಾ ಇರುತ್ತೇವೆ ಎಂಬ ಭರವಸೆಯನ್ನು ಈ ಮೂಲಕ ನೀಡಲು ಬಯಸುತ್ತೇನೆ ಎಂದಿದ್ದಾರೆ

ಕೇಂದ್ರ ಸರ್ಕಾರದ ‘ಆಪರೇಷನ್ ಸಿಂಧೂರ ಎಂಬ ದಿಟ್ಟ ನಡೆಗೆ ಅಭಿನಂದನೆ:
ಕಳೆದ ಒಂದು ವರ್ಷದಲ್ಲಿ ಕೇಂದ್ರದ ಶ್ರೀ ನರೇಂದ್ರ ಮೋದಿ ಅವರ ಸರ್ಕಾರವು ಭಯೋತ್ಪಾದನೆಯ ವಿರುದ್ಧ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳು ಶ್ಲಾಘನೀಯ.

  • ದಾಳಿಯ ನಂತರ ಉಗ್ರರ ಅಡಗುತಾಣಗಳನ್ನು ಧ್ವಂಸಗೊಳಿಸಿದ ಭಾರತೀಯ ಸೇನೆಯ ಶೌರ್ಯಕ್ಕೆ ನಮನಗಳು.
  • ಕಾಶ್ಮೀರದಲ್ಲಿ ಭಯೋತ್ಪಾದನೆಯ ಬೇರುಗಳನ್ನು ಕಿತ್ತೆಸೆಯಲು ಮೋದಿಯವರ ಸರ್ಕಾರ ತೋರಿದ ರಾಜಕೀಯ ಇಚ್ಛಾಶಕ್ತಿ ಅಭೂತಪೂರ್ವ.
  • “ಸೇಡಿನ ಕ್ರಮಕ್ಕಿಂತ ಹೆಚ್ಚಾಗಿ, ಭಯೋತ್ಪಾದನೆಗೆ ಶಾಶ್ವತ ಅಂತ್ಯ ಹಾಡಬೇಕು” ಎಂಬ ಪ್ರಧಾನಿಯವರ ಗುರಿಯು ಇಂದು ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಿದೆ.

S.N. Chennasappa ಅಂದು ಉಗ್ರರು ತೋರಿದ ಹೇಡಿತನಕ್ಕೆ ಇಂದು ಭಾರತದ ಸೈನಿಕರು ಅಷ್ಟೇ ತೀವ್ರವಾಗಿ ಉತ್ತರಿಸುತ್ತಿದ್ದಾರೆ. ಮಂಜುನಾಥ್ ಅವರಂತಹ ಅಮಾಯಕರ ರಕ್ತ ವ್ಯರ್ಥವಾಗಲು ಈ ಸರ್ಕಾರ ಬಿಡುವುದಿಲ್ಲ ಎಂಬ ನಂಬಿಕೆ ಜನಮಾನಸದಲ್ಲಿ ಅಡಕವಾಗಿದೆ. ದೇಶದ ಭದ್ರತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...