Shivamogga Rangayana ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಲೇಖಕ ಬೋಳುವಾರು ಮೊಹಮ್ಮದ್ ಕುಂಞ ಅವರ ಮಹತ್ವಾಕಾಂಕ್ಷೆಯ ಬೃಹತ್ ಕಾದಂಬರಿ ‘ಸ್ವಾತಂತ್ರ‍್ಯದ ಓಟ’ ಈಗ ನಾಟಕವಾಗಿ ರೂಪಾಂತರಗೊAಡಿದ್ದು, ಶಿವಮೊಗ್ಗ ರಂಗಾಯಣವು ರಂಗಕ್ಕೆ ತರುತ್ತಿದೆ ಎಂದು ಶಿವಮೊಗ್ಗ ರಂಗಾಯಣದ ನಿರ್ದೇಶಕರಾದ ಪ್ರಸನ್ನ ಡಿ ಸಾಗರ ತಿಳಿಸಿದರು.
ರಂಗಾಯಣ ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿ, ಏ.25 ಮತ್ತು 26 ರಂದು ‘ಸ್ವಾತಂತ್ರö್ಯದ ಓಟ’ ನಾಟಕವನ್ನು ರಂಗಾಯಣವು ನಗರದ ಕುವೆಂಪು ರಂಗಮAದಿರದಲ್ಲಿ ಪ್ರದರ್ಶಿಸಲಿದೆ ಎಂದರು.
ಸರ್ಕಾರದ ವಿಶೇಷ ಅನುದಾನ: 2025 ರ ಬಜೆಟ್ ಘೋಷಣೆಯಂತೆ, ಈ ಕಾದಂಬರಿಯ ರಂಗರೂಪಕ್ಕೆ ಕರ್ನಾಟಕ ಸರ್ಕಾರವು ರೂ. 1 ಕೋಟಿ ವಿಶೇಷ ಅನುದಾನವನ್ನು ನೀಡಿದೆ. ಇದರ ಜವಾಬ್ದಾರಿಯನ್ನು ಶಿವಮೊಗ್ಗ ರಂಗಾಯಣಕ್ಕೆ ವಹಿಸಲಾಗಿದ್ದು, 8 ಜನರ ಹಿರಿಯ ಸಲಹಾ ಸಮಿತಿಯ ಮಾರ್ಗದರ್ಶನದಲ್ಲಿ ಈ ಯೋಜನೆ ಸಾಕಾರಗೊಂಡಿದೆ.
ಮಂಜುನಾಥ್ ಎಲ್. ಬಡೇದಹಳ್ಳಿಯವರು ಕಾದಂಬರಿಯ ಆಯ್ದ ಭಾಗಗಳನ್ನು ತೆಗೆದುಕೊಂಡು ರಂಗ ರೂಪಕ್ಕೆ ತಂದಿದ್ದು, ಖ್ಯಾತ ನಿರ್ದೇಶಕ ಶ್ರೀ ನಟರಾಜ್ ಹೊನ್ನವಳ್ಳಿ ನಿರ್ದೇಶಿಸಿದ್ದಾರೆ.
ಕರ್ನಾಟಕದ ವಿವಿಧ ಭಾಗಗಳಿಂದ ಆಯ್ಕೆಯಾದ 22 ಪ್ರತಿಭಾವಂತ ಕಲಾವಿದರು ಈ ನಾಟಕದಲ್ಲಿ ಅಭಿನಯಿಸುತ್ತಿದ್ದಾರೆ. ನಾಟಕದ ಗುಣಮಟ್ಟವನ್ನು ಹೆಚ್ಚಿಸಲು ನುರಿತ ತಾಂತ್ರಿಕ ತಂಡ ಕಾರ್ಯನಿರ್ವಹಿಸುತ್ತಿದ್ದು, ಸಲ್ಮಾ ದಂಡಿನ್ ಸಹನಿರ್ದೇಶನ, ರಾಘವ ಕಮ್ಮಾರ ಸಂಗೀತ ನೀಡಿದ್ದಾರೆ.
ಡಾ. ಸಹನಾ ಪಿಂಜಾರ ವಸ್ತç ವಿನ್ಯಾಸ ಮಾಡಿದ್ದು, ಮಧುಸೂದನ್ ಬಿ.ಆರ್., ರಮೇಶ್ ಎಸ್. ಮೈಸೂರು, ಶಂಕರ ಬೆಳ್ಳಕಟ್ಟೆ ರಂಗ ಸಜ್ಜಿಕೆ, ಮಂಜು ನಾರಾಯಣ ಬೆಳಕು, ಅಕ್ಷರ ವೇಣುಗೋಪಾಲ್ ಧ್ವನಿ ವಿನ್ಯಾಸ ಮಾಡಿದ್ದಾರೆ.
ಪ್ರದರ್ಶನದ ಸಮಯ: ಈ ಬಹುನಿರೀಕ್ಷಿತ ನಾಟಕದ ಮೊದಲ ಪ್ರದರ್ಶನವು ಇದೇ ಏಪ್ರಿಲ್ 25 ಮತ್ತು 26 ರ ಶನಿವಾರ ಹಾಗೂ ಭಾನುವಾರಗಳಂದು ಶಿವಮೊಗ್ಗದ ಕುವೆಂಪು ರಂಗಮAದಿರದಲ್ಲಿ ನಡೆಯಲಿದೆ. ಸಾಹಿತ್ಯ ಮತ್ತು ರಂಗಭೂಮಿ ಆಸಕ್ತರು ಈ ಅಪರೂಪದ ರಂಗ ಪ್ರಯೋಗಕ್ಕೆ ಸಾಕ್ಷಿಯಾಗಬೇಕೆಂದು ಕೋರಿದ ಅವರು ಏ. 28 ರ ನಂತರ ರಾಜ್ಯ ಬೇರೆ ಬೇರೆ ಭಾಗಗಳಲ್ಲಿಪ್ರದರ್ಶನ ಕಾಣಲಿದೆ. ನಾಟಕದ ಅವಧಿ ಸುಮಾರು 3 ಗಂಟೆಯಾಗಿದ್ದು, ಪ್ರವೇಶಕ್ಕೆ ರೂ.30 ದರ ನಿಗದಿಗೊಳಿಸಲಾಗಿದೆ ಎಂದು ತಿಳಿಸಿದರು.
ಕಥೆಯ ಸಾರಾಂಶ:
ಸಿಖ್ ಹೆಣ್ಣುಮಕ್ಕಳಿಗೆ ಸಹಾಯ ಮಾಡಲು ಪಾಕಿಸ್ತಾನದ ಗಡಿ ದಾಟಿ ಭಾರತಕ್ಕೆ ಬರುವ ಮುಸ್ಲಿಂ ಯುವಕ ಚಾಂದ್ ಅಲಿ, ಅನಿವಾರ್ಯ ಕಾರಣಗಳಿಂದಾಗಿ ತನ್ನ ಮಾತೃಭೂಮಿಗೆ ಮರಳಲಾಗದೆ ಭಾರತದಲ್ಲೇ ಉಳಿಯಬೇಕಾಗುತ್ತದೆ. ಕಳೆದ 50 ವರ್ಷಗಳಿಂದ ಅವನು ಅನುಭವಿಸುವ ಸಂತೋಷ, ನೋವು, ಹತಾಶೆ ಮತ್ತು ಸಂಕಟಗಳೇ ಈ ನಾಟಕದ ಜೀವಾಳ.
ಚಾಂದ್ ಅಲಿಯ ಪಾತ್ರವು ಕೇವಲ ವ್ಯಕ್ತಿಯೊಬ್ಬನ ಕಥೆಯಾಗದೆ, ದೇಶದಲ್ಲಿ ನಡೆಯುತ್ತಿರುವ ರಾಜಕೀಯ ಮತ್ತು ಸಾಮಾಜಿಕ ಸ್ಥಿತ್ಯಂತರಗಳಿಗೆ ಸಾಕ್ಷಿ ಪ್ರಜ್ಞೆಯಾಗಿ ನಿಲ್ಲುತ್ತದೆ. ತನ್ನ ಹುಟ್ಟಿನ ಮೂಲದ ಬಗ್ಗೆ ಹಂಚಿಕೊಳ್ಳಲಾಗದ ಮೌನ ಮತ್ತು ಅವನ ಬದುಕನ್ನು ಕಾಡುವ ಅಭದ್ರತೆಯ ಭಾವನೆ ನೋಡುಗರನ್ನು ಚಿಂತನೆಗೆ ಹಚ್ಚುತ್ತದೆ.
Shivamogga Rangayana ದೇಶ ವಿಭಜನೆ ಎಂಬುದು ಕೇವಲ ನಕ್ಷೆಯ ಮೇಲಿನ ಗೆರೆಯಲ್ಲ, ಅದು ಜನರ ಬದುಕಿನಲ್ಲಿ ಸೃಷ್ಟಿಸಿದ ಮಹಾನರಕ ಎಂಬುದನ್ನು ನಾಟಕವು ಬಿಂಬಿಸುತ್ತದೆ. “ದೇಶ ವಿಭಜನೆಯಾದ ತಕ್ಷಣವೇ ಮಾನವೀಯತೆ ಮರೆತು ದ್ವೇಷದ ಕಿಚ್ಚಿನಲ್ಲಿ ಎರಡು ದೇಶಗಳು ಉರಿಯುತ್ತವೆ” ಎಂಬ ಸಾಲುಗಳು ಅಂದಿನ ಭೀಕರತೆಯನ್ನು ನೆನಪಿಸುತ್ತವೆ. ಆಸ್ತಿ-ಪಾಸ್ತಿ, ನೆಂಟರಿಷ್ಟರನ್ನು ಬಿಟ್ಟು ಜೀವ ಉಳಿಸಿಕೊಳ್ಳಲು ಓಡುತ್ತಿದ್ದ ಜನರ ಅಸಹಾಯಕತೆ ಇಲ್ಲಿ ‘ಓಟ’ವಾಗಿ ಸಾಕಾರಗೊಂಡಿದೆ ಎಂದರು.
ನಟರಾಜ್ ಹೊನ್ನವಳ್ಳಿ ಮಾತನಾಡಿ, ಸ್ವಾತಂತ್ರ‍್ಯದ ಓಟ” ನಾಟಕವು ಪ್ರಸ್ತುತ ಸಾಮಾಜಿಕ ಹಾಗೂ ರಾಜಕೀಯ ಸಂಘರ್ಷಗಳಿಗೆ ಕನ್ನಡಿ ಹಿಡಿಯುವ ಮೂಲಕ ಗಮನ ಸೆಳೆಯುತ್ತಿದೆ. ದೇಶ ವಿಭಜನೆಯ ಸಂದರ್ಭದಲ್ಲಿ ಅನಿವಾರ್ಯವಾಗಿ ಸಿಲುಕಿಕೊಳ್ಳುವ ಸಾಮಾನ್ಯ ಜನರ ಬವಣೆ ಮತ್ತು ಅಸ್ಮಿತೆಯ ಹುಡುಕಾಟವನ್ನು ಈ ನಾಟಕ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದೆ.
ಬೋಳುವಾರರ ಮಾನವೀಯ ಆದರ್ಶದ ಶೋಧ ಇಲ್ಲಿ ಎದ್ದು ಕಾಣುತ್ತದೆ. ಪಾಕಿಸ್ತಾನ ಜನ್ಮಭೂಮಿಯಾದರೂ, ಹಿಂದೂಸ್ತಾನವು ಕರ್ಮಭೂಮಿಯಾಗಿ ಹೇಗೆ ಬದಲಾಗುತ್ತದೆ ಎಂಬುದನ್ನು ನಾಟಕವು ಭಾವನಾತ್ಮಕವಾಗಿ ಚಿತ್ರಿಸಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಶಿವಮೊಗ್ಗ ರಂಗಾಯಣದ ಆಡಳಿತಾಧಿಕಾರಿ ಶೈಲಜಾ ಎ ಸಿ ಹಾಜರಿದ್ದರು.
Shivamogga Rangayana ಏಪ್ರಿಲ್ 25 & 26 ರಂದು “ಸ್ವಾತಂತ್ರ್ಯದ ಓಟ” , ಶಿವಮೊಗ್ಗದ ರಂಗಾಯಣದಲ್ಲಿ ನಾಟಕ ಪ್ರದರ್ಶನ
Date:
