Thursday, August 6, 2026
Thursday, August 6, 2026

ಶಿವಮೊಗ್ಗದಲ್ಲಿ ಸ್ಮಾರ್ಟ್ ಸೊಸೆಯಂದಿರು ಚಿತ್ರೀಕರಣ

Date:

ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರ ಆಗಲಿರುವ “ಸ್ಮಾರ್ಟ್ ಸೊಸೆಯಂದಿರು” ಸರಣಿಯ ವಿಶೇಷ ಸಂಚಿಕೆಗಳನ್ನು ಏಪ್ರಿಲ್ 14ರಿಂದ 17ರವರೆಗೆ ಶಿವಮೊಗ್ಗ ಜಿಲ್ಲೆಯ ವಿವಿಧ ಕಡೆಗೆ ಚಿತ್ರೀಕರಣ ನಡೆಸಲಾಯಿತು.

ಸ್ಮಾರ್ಟ್ ಸೊಸೆಯಂದಿರು ಕಾರ್ಯಕ್ರಮವು ಅತ್ತೆ ಮತ್ತು ಸೊಸೆ ನಡುವಿನ ಮಧುರ ಬಾಂಧವ್ಯಗಳನ್ನು ಬೆಸೆಯುವ ಒಂದು ಪ್ರಯತ್ನವಾಗಿ ರೂಪುಗೊಂಡಿದೆ. ಚಂದನ ವಾಹಿನಿಯ ತಂಡ ಮನೆ ಮನೆಗಳಿಗೆ ಭೇಟಿ ನೀಡಿ ಅತ್ತೆ ಮತ್ತು ಸೊಸೆಯಂದಿರ ನಡುವಿನ ಸಂಬಂಧಗಳ ಕುರಿತು ಮಾತುಕತೆ, ಆಟ ಹಾಗೂ ಹಾಡುಗಳೊಂದಿಗೆ ಚಿತ್ರೀಕರಣ ನಡೆಸಿದೆ.

ಸಂಚಿಕೆಯಲ್ಲಿ ಪಾಲ್ಗೊಂಡವರಿಗೆ ಅಭಿನಂದನಾ ಪತ್ರವನ್ನು ನೀಡಲಾಗುತ್ತದೆ ಎಂದು ಕಾರ್ಯಕ್ರಮದ ನಿರ್ಮಾಪಕ ಎಂ.ಜಿ.ಗೋವಿಂದರಾಜು ಮಾಹಿತಿ ನೀಡಿದರು. ಸ್ಮಾರ್ಟ್ ಸೊಸೆಯಂದಿರು ಶಿವಮೊಗ್ಗದ ವಿಶೇಷ ಸಂಚಿಕೆಗಳ ನಿರ್ಮಾಣದಲ್ಲಿ ನಿರೂಪಕರಾಗಿ ರಾಜಶೇಖರ್.ಎಚ್, ಛಾಯಾಗ್ರಾಹಕರಾಗಿ ಎಸ್.ಲೋಕಾಭಿರಾಮನ್ ಮತ್ತು ಮನೋಜ್ ಆರ್, ಧ್ವನಿಗ್ರಹಣದಲ್ಲಿ ಎಂ.ಮಾರಪ್ಪ ಮತ್ತು ಎಂ.ಬಾಲಚಂದ್ರ ಮತ್ತು ಕಾರ್ಯಕ್ರಮದ ಪರಿಕಲ್ಪನೆ ಹಾಗೂ ನಿರ್ಮಾಪಕರಾಗಿ ಎಂ.ಜಿ.ಗೋವಿಂದರಾಜು ಪಾಲ್ಗೊಂಡು ಯಶಸ್ವಿಯಾಗಿ 10 ಸಂಚಿಕೆಗಳನ್ನು ಪೂರೈಸಿದ್ದಾರೆ. ಈ ಸಂಚಿಕೆಗಳು ಶೀಘ್ರದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9.30ಕ್ಕೆ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾಗಲಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Jog Falls ಪ್ರತೀ ಶನಿವಾರ & ಭಾನುವಾರ ರಸ್ತೆ ಸಾರಿಗೆ ನಿಗಮದಿಂದಸಿಗಂದೂರು- ಜೋಗ ಪ್ರವಾಸಿ ಪ್ಯಾಕೇಜ್ ಘೋಷಣೆ.

Jog Falls ಪ್ರಸ್ತುತ ಮಳೆಗಾಲದಲ್ಲಿ ಪ್ರವಾಸಿಗರ ನೆಚ್ಚಿನ ತಾಣವಾಗಿರುವ ವಿಶ್ವವಿಖ್ಯಾತ ಜೋಗ್‌ಫಾಲ್ಸ್...

Shivamogga News ಥಣ್ಣಗಾಗುತ್ತಿರುವ ಸಚಿವಾಕಾಂಕ್ಷಿತನ..…ಶಿವಕೌಶಲ

Shivamogga News ರಾಜಕೀಯದಲ್ಲಿ ಸ್ಥಿರತೆ ಯಾವತ್ತಿಗೂ ನಿರೀಕ್ಷಿಸಲಾಗದು ಎಂಬ ಮುತ್ಸದ್ದಿಗಳ ಮಾತಿದೆ....