Saturday, October 10, 2026
Saturday, October 10, 2026

Rotary Club Shivamogga ಆಹಾರ & ಜೀವನಶೈಲಿಯಲ್ಲಿ ಸರಳ ಬದಲಾವಣೆಯಿಂದ ಡಯಾಬಿಟಿಸ್ ನಿಯಂತ್ರಣ ಸಾಧ್ಯ- ಡಾ.ಬಿ.ಪ್ರೀತಂ

Date:

Rotary Club Shivamogga ಜೀವನಶೈಲಿಯಲ್ಲಿ ಸರಳ ಬದಲಾವಣೆ ಮಾಡಿಕೊಳ್ಳುವುದರಿಂದ ಔಷಧವಿಲ್ಲದೆ ಸಹ ಡಯಾಬಿಟಿಸ್ ನಿಯಂತ್ರಣ ಸಾಧ್ಯ ಎಂದು ಡಾ. ಪ್ರೀತಮ್ ಬಿ. ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ರಿವರ್‌ಸೈಡ್ ಭವನದಲ್ಲಿ ಆರೋಗ್ಯದ ಮಹತ್ವ ಬಿಂಬಿಸುವ ಡಯಾಬಿಟಿಸ್ ರಿವರ್ಸಲ್ ವಿಷಯ ಕುರಿತು ಮಾತನಾಡಿ, ರೋಗ ಬಂದ ಮೇಲೆ ಮಾತ್ರ ಚಿಕಿತ್ಸೆ ಪಡೆಯುವುದಕ್ಕಿಂತ ಆರೋಗ್ಯ ಶಿಸ್ತಿನಿಂದಲೇ ಪರಿಹಾರ ಹುಡುಕಬೇಕು ಎಂದು ತಿಳಿಸಿದರು.

ಆಹಾರವೇ ಔಷದಿ ಕುರಿತ ವೈಜ್ಞಾನಿಕ ದೃಷ್ಟಿಕೋನವನ್ನು ಅತ್ಯಂತ ಸರಳವಾಗಿ ವಿವರಿಸಿದರು. ಪಿಪಿಟಿ ಪ್ರಸ್ತುತಿ, ಜೀವನದ ಉದಾಹರಣೆಗಳು, ಆರೋಗ್ಯದ ಮೂಲ ತತ್ವಗಳ ಬಗ್ಗೆ ಮಾಹಿತಿ ನೀಡಿದರು.
ರೋಟರಿ ಕ್ಲಬ್ ಶಿವಮೊಗ್ಗ ರಿವರ್‌ಸೈಡ್ ಅಧ್ಯಕ್ಷ ಕೆ.ಎಸ್. ವಿಶ್ವನಾಥ ನಾಯಕ ಮಾತನಾಡಿ, ಆರೋಗ್ಯವೇ ಬದುಕಿನ ಮೂಲ ಎನ್ನುವುದರನ್ನು ಅರಿತುಕೊಳ್ಳಬೇಕು. ಆಹಾರ ಮತ್ತು ಜೀವನಶೈಲಿಯ ಶಿಸ್ತಿನ ಕುರಿತು ಸರಳವಾಗಿ ಅನುಸರಿಸಬೇಕು ಎಂದರು.

ಸಹಾಯಕ ಗವರ್ನರ್ ಕೆ.ಪಿ.ಶೆಟ್ಟಿ ಅವರು ಉತ್ತುಂಗ ಪತ್ರಿಕೆಯನ್ನು ಬಿಡುಗಡೆ ಮಾಡಿ ಕ್ಲಬ್‌ನ ಚಟುವಟಿಕೆಗಳ ಮೆಚ್ಚುಗೆ ವ್ಯಕ್ತಪಡಿಸಿದರು. ವಲಯ ಸೇನಾನಿ ಎಸ್.ಪಿ.ಶಂಕರ್ ಅವರು ಸೇವೆಯೊಂದಿಗೆ ಆರೋಗ್ಯದ ಚಟುವಟಿಕೆಗಳು ಕುರಿತು ಮಾತನಾಡಿದರು.

Rotary Club Shivamogga ರೋಟರಿ ಕ್ಲಬ್ ಶಿವಮೊಗ್ಗ ರಿವರ್‌ಸೈಡ್ ಕಾರ್ಯದರ್ಶಿ ನಿತಿನ್ ಯಾದವ್ , ನಿಕಟಪೂರ್ವ ಅಧ್ಯಕ್ಷ ಎಂ.ಆರ್.ಬಸವರಾಜ್, ಇನ್ನರ್ ವೀಲ್ ಕ್ಲಬ್‌ನ ಅಧ್ಯಕ್ಷೆ ಶೀಲಾ ಸುರೇಶ್, ಕಾರ್ಯದರ್ಶಿ ರೂಪಾ ರವಿ, ಮಾಜಿ ಅಧ್ಯಕ್ಷರಾದ ಎಂ.ಪಿ.ಆನಂದಮೂರ್ತಿ, ಜಗನ್ನಾಥ್, ಎಂ.ನಾಗರಾಜ್, ಡಾ. ಎಚ್.ಎಲ್.ಮಹೇಂದ್ರ, ಸಿ.ಎನ್.ಮಲ್ಲೇಶ್, ಎಂ.ಆರ್.ಬಸವರಾಜ್, ಉದಯಕುಮಾರ್, ಯೋಗ ಕೇಂದ್ರದ ನಿತ್ಯ ಭಾಗಿಯಾಗುವ ಸದಸ್ಯರು, ಮತ್ತು ರೋಟರಿ ಕುಟುಂಬದ ಎಲ್ಲಾ ಸದಸ್ಯರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...