Thursday, April 9, 2026
Thursday, April 9, 2026

ಓಮಿಕ್ರಾನ್ ಜಾಗ್ರತೆಯಾಗಿರಿ

Date:

ಜಗತ್ತಿನಾದ್ಯಂತ ವೇಗವಾಗಿ ಹಬ್ಬುತ್ತಿರುವಂತಹ ಕೋವಿಡ್ ರೂಪಾಂತರಿ ವೈರಸ್ ಓಮಿಕ್ರಾನ್ ಪ್ರಕರಣ ಭಾರತದಲ್ಲಿ 113 ಕ್ಕೆ ಏರಿಕೆಯಾಗಿದೆ.

ದೇಶದ ಹಲವು ರಾಜ್ಯಗಳ ದೆಹಲಿಯಲ್ಲಿ 10, ಮಹಾರಾಷ್ಟ್ರದಲ್ಲಿ 8, ಕೇರಳ ಮತ್ತು ಗುಜರಾತಿನಲ್ಲಿ ತಲಾ ಇಬ್ಬರಿಗೆ ಸೋಂಕು ದೃಡಪಟ್ಟಿದೆ. ಕರ್ನಾಟಕ ಸೇರಿದಂತೆ 11 ರಾಜ್ಯಗಳಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ113 ಕ್ಕೆ ಏರಿಕೆಯಾಗಿದೆ.

ನೂತನ ರೂಪಾಂತರಿ ತಳಿಯು ‘ಡೆಲ್ಟಾ’ ರೂಪಾಂತರಿಗಿಂತ ನಾಲ್ಕು ಪಟ್ಟು ಹೆಚ್ಚು ವೇಗವಾಗಿ ಹಬ್ಬುತ್ತಿದೆ. ಈ ವೈರಾಣುವು ದೇಶದಲ್ಲಿ ಮೂರನೇ ಅಲೆಗೆ ಕಾರಣವಾಗ ಬಹುದು ಎಂಬ ಆತಂಕವನ್ನು ತಜ್ಞರು ತಿಳಿಸಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಪರೀಕ್ಷೆ, ಜಿನೋಮ್ ಸೀಕ್ವೆನ್ಸಿಂಗ್ ಹೆಚ್ಚಿಸುವಂತೆ ಸೂಚನೆ ನೀಡಿದೆ. ಅನಗತ್ಯವಾಗಿ ಪ್ರವಾಸವನ್ನು ಕೈಗೊಳ್ಳದಂತೆ ಜನರಲ್ಲಿ ಮನವಿ ಮಾಡಿದೆ.

“ಸಾಮುದಾಯಿಕವಾಗಿ ಪ್ರಸರಣ ವೇಗದಲ್ಲಿ 2ನೇ ಅಲೆಯನ್ನು ಸೃಷ್ಟಿಸಿದ್ದ ಡೆಲ್ಟಾ ರೂಪಾಂತರಿಯನ್ನು ಓಮಿಕ್ರಾನ್ ಹಿಂದಿಕ್ಕಲಿದೆ. ಹಲೋ ಬೇಗನೆ ದೇಶದಲ್ಲಿ ಮೂರನೇ ಕೊರೋನಾ ಅಲೆ ಏಳುವ ಸಾಧ್ಯತೆಯಿದೆ” ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ತಿಳಿಸಿದ್ದಾರೆ.

“ವೈರಾಣು ನಮ್ಮ ದೇಶಕ್ಕೆ ಎಷ್ಟು ಹಾನಿ ಉಂಟುಮಾಡಬಲ್ಲದು ಎನ್ನುವುದನ್ನು ಮಾತ್ರವೇ ಗಮನಿಸಿ ಸಮಾಧಾನ ಪಟ್ಟುಕೊಳ್ಳಬಾರದು. ಬದಲಿಗೆ ದೇಶದ ರೋಗ ನಿರೋಧಕತೆಗೆ ಚಳ್ಳೆಹಣ್ಣು ತಿನ್ನಿಸುವ ಸಾಮರ್ಥ್ಯ ಪಡೆದಿರುವ ಓಮಿಕ್ರಾನ್ ಬಗ್ಗೆ ಜಾಗೃಕತೆ ಹೆಚ್ಚಾಗಿರಬೇಕು. ವಿವಿಧ ದೇಶಗಳಲ್ಲಿ ಓಮಿಕ್ರಾನ್ ಬಾಧಿತರ ಪ್ರಮಾಣ ಹೆಚ್ಚಾಗುತ್ತಾ ಹೋದಂತೆ, ಸಮಾಜದಲ್ಲಿ ಭಯ ಹೆಚ್ಚಲಿದೆ. ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ಏರಿಕೆಯಾಗಿ, ಆರೋಗ್ಯ ವ್ಯವಸ್ಥೆಯ ತೀವ್ರ ಒತ್ತಡಕ್ಕೆ ಸಿಲುಕಲಿದೆ” ಇಂದು ಡಾ.ಮೈಕೆಲ್ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

2nd PUC Exam Result 2026 ಪಿಯು (ವಿಜ್ಞಾನ ) ಪರೀಕ್ಷೆ: ಶಿವಮೊಗ್ಗದ ಮಹೀನ್ ಖಾನುಂ ಗೆ600/596 ಸಾಧನೆಯ ಗರಿ.

2nd PUC Exam Result 2026 ರಾಜ್ಯದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ...

Pace PU College Shivamogga ಶಿವಮೊಗ್ಗ ಪೇಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಡಿಸ್ಟಿಂಕ್ಷನ್ ಸುಗ್ಗಿ.

Pace PU College Shivamogga 2025-26ನೇ ಸಾಲಿನ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆ-1ಕ್ಕೆ...

CM Siddharamaiah ಚುನಾವಣಾ ಆಯೋಗವು ಗ್ಯಾರಂಟಿ ಯೋಜನೆಗಳ ಲೆಕ್ಕ ಕೇಳಿ ನಮ್ಮನ್ನ ಬೆದರಿಸಲು ಹೊರಟಿದೆ- ಸಿದ್ಧರಾಮಯ್ಯ

CM Siddharamaiah ದಾವಣಗೆರೆ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ನಡೆಯುತ್ತಿರುವ ಉಪಚುನಾವಣೆಗಳ ಸಂದರ್ಭದಲ್ಲಿ...