KLive Special Article ಜನಪದ ಎಂದು ಮರೆಯಲಾಗದಲ್ಲ. ಅದಕ್ಕೆ ಪ್ರಾಚೀನ ಕಾಲದಷ್ಟು ಇತಿಹಾಸವಿದೆ. ಜನರ ಜೀವನವನ್ನ ಸಂಬಂಧಿಸಿದ ಜನಪದ.ಮನುಷ್ಯ ಭೂಮಿಯ ಮೇಲೆ ಉಗಮವಾಗಿ ವಿಕಾಸದ ಹಾದಿಯಲ್ಲಿ ಪ್ರಜ್ಞಾವಂತ ಆದಂತೆ ತನ್ನ ಬದುಕಿನ ಬಗೆಗೆ ಆಲೋಚನಪರನಾಗಿ ರೂಢಿಸಿಕೊಂಡ ಅಂಶಗಳೆಲ್ಲವೂ ಜನಪದ ಸಂಸ್ಕೃತಿ ಎಂದೆನಿಸಿಕೊಳ್ಳುತ್ತದೆ. ಅಂದರೆ ಪ್ರಾಚೀನಕಾಲದ ಸಂಪ್ರದಾಯಬದ್ಧ ಸಂಸ್ಕೃತಿಯ ಅಮೂಲ್ಯ ಅಂಶಗಳನ್ನು ಅರ್ಥಪೂರ್ಣವಾಗಿ ಗರ್ಭಧಾರಣೆ ಕೊಂಡಿರುವಂತಹ ಸಾವಂತ, ಅನಕ್ಷರಸ್ಥ,ಕೆಳಸರ ಜನಪದ. ಈ ರೀತಿಯಲ್ಲಿ ಕಂಡು ಬರುವ ಮನುಕುಲದ ಮೊದಲ ಇತಿಹಾಸವೇ ಜನಪದ ಸಾಹಿತ್ಯ.
ಜನಪದ ಸಾಹಿತ್ಯ ನಮ್ಮ ಉಸಿರಿನ ಸಾಹಿತ್ಯ. ಅದನ್ನು ನಾವು ದೇಸಿ ಸಾಹಿತ್ಯ ಎಂದುಕೂಡ ಕರೆಯುತ್ತೇವೆ. ಜನಪದ ಸಾಹಿತ್ಯಕ್ಕೆ ಯಾವುದು ವಸ್ತು ಇಲ್ಲ. ನಮ್ಮ ಬದುಕೇ ಅದಕ್ಕೆ ವಸ್ತು. ನಮ್ಮ ಬದುಕಿನ ವಿಧಾನವೇ ವಸ್ತು. ಈ ಹಿನ್ನೆಲೆಯಾಗಿ ಬದುಕಿನ ಮೌಲ್ಯ ಆಚರಣೆಗಳ ಕುರಿತು ಸುಂದರ ಸುಂದರವಾದ ಹಾಡುಗಳನ್ನು ಹಾಡಿ ನಮ್ಮ ಜೀವನದ ಮೌಲ್ಯಗಳನ ನಮ್ಮ ಜನಪದರು ಹಾಡಿರುವುದು. ನಮ್ಮ ಕರ್ನಾಟಕದ ಅಂದಿನ ಬಿಜಾಪುರ ಇಂದಿನ ವಿಜಯಪುರ ಅಂತೂ ಜನಪದ ಸಾಹಿತ್ಯದ ಕಣಜವಾಗಿದೆ. ನಮ್ಮ ಪರಿಸರದಲ್ಲಿ ರೂಪಗೊಂಡಿರುವಂತಹ, ನಮ್ಮ ನಾಡಿನ ತಾಯಿಗಳು ರಚನೆ ಮಾಡಿರುವಂತಹ ತ್ರಿಪದಿಗಳು, ಹಾಡುಗಳು, ಲಾವಣಿಗಳು, ಕಥೆಗಳು, ಕಟ್ಟಿರುವಂತಹ ಗಾದೆಗಳು, ಜನಪದ ಸಾಹಿತ್ಯವನ್ನು ಹೇಳುತ್ತಾ ಹೋದರೆ ಮನಸ್ಸಿಗೆ ರೋಮಾಂಚನ ಅನ್ನಿಸುತ್ತದೆ. ನಾವು ಯಾವುದನ್ನ ಜನಪದ ಮೌಲ್ಯ ಎಂದು ಕರೆಯಬೇಕು ಎಂದರೆ ಯಾವ ಭಾವನೆ ಯಾವ ಆದರ್ಶಗಳು ಒಟ್ಟು ಜನಜೀವನವನ್ನು ಹಿಡಿದು ನಡೆಸುತ್ತದೆಯೋ. ಯಾವುದನ್ನ ಪಡೆಯಲು ಯಾವುದನ್ನು ಆಗಲು ಒಂದು ಕಾಲದ ಜನಗಳು ಹಂಬಲಿಸುತ್ತಿದೆಯೋ. ಯಾವ ಭಾವನೆ ಅಥವಾ ಆದರ್ಶಗಳ ಉಳಿದ ಭಾವನೆಗಳ ಹೆಚ್ಚಿನ ಪ್ರಾಮುಖ್ಯತೆಯನ್ನು ಉಂಟು ಮಾಡುತ್ತದೆಯೋ. ಅವುಗಳನ್ನು ಮೌಲ್ಯಗಳು ಎನ್ನುತ್ತಾರೆ. ಬದುಕಿನ ಆದರ್ಶವಾಗಿರುವ ನಡೆ-ನುಡಿ ಸಂಸ್ಕೃತಿ ಜೀವನದ ವಿಧಾನ ಇಡೀ ಜನಪದ ಸಾಹಿತ್ಯದ ಒಳಗೊಂಡಿರುತ್ತದೆ. ಜನಪದ ಸಾಹಿತ್ಯದ ಒಳಗಡೆ ಕೆಲವು ಮೌಲ್ಯಗಳು ಅರಳಿಹುದು ಎಂದರೆ, ಭಕ್ತಿಯನ್ನ ಶಕ್ತಿ ಯಾಗಿಸಿಕೊಂಡಿರುವ ಮೌಲ್ಯ, ಪ್ರೀತಿ-ವಿಶ್ವಾಸದಿಂದಿರುವ ಮೌಲ್ಯ ಆಗಿರಬಹುದು, ದಯಾ-ಧರ್ಮದ ಮೂಲಕ ಕಟ್ಟಿಕೊಳ್ಳುವ ಮೌಲ್ಯವಾಗಿರಬಹುದು, ಶಾಂತಿ – ಸಹನೆ – ಸಮಾರಸ್ಯದಿಂದ ಬದುಕುವ ಮೌಲ್ಯಗಳಾಗಿರಬಹುದು, ಜೊತೆಗೆ ಸಹಕಾರ ಕಾಯಕ ದಾಸೋಹ ನೆಲೆಯನ್ನು ಒಳಗೊಂಡ ಬದುಕನ್ನು ಬೆಳೆಸಿಕೊಳ್ಳ ಬೇಕೆಂಬ ಚಿಂತನೆ. ಇದನ್ನೆಲ್ಲ ಜನಪದ ಸಾಹಿತ್ಯದ ಮೌಲೀಕರಣ ಎಂದು ನಾವು ನೋಡಬಹುದು.
ನಮ್ಮ ಜೀವನ ಜನಪದ ಜೀವನದ ಜೀವ. ಜನಪದವೇ ಜೀವನ ಜೀವನವೇ ಜನಪದ. ಜನಪದ ಹಾಡುಗಳು ತ್ರಿಪದಿಗಳು ಹಾಡಿದರೆ ಮೈ ತುಮಕುತ್ತದೆ ಮನಸ್ಸು ಮೃದುವಾಗುತ್ತದೆ.
ಉದಾಹರಣೆಗೆ ಒಂದು ಹಾಡು ಬದುಕಿನ ಮೌಲ್ಯವನ್ನು ಹೇಳುತ್ತದೆ.
“ಮುಗಿದಾವ ನಿಮ್ಮ ದೌಡ್(ಸಮಯ), ಉಳಿದಾವ ನಮ್ಮ ಹಾಡ.”
ಬದುಕಿನ ಮೌಲ್ಯಗಳು ಹೇಳುವ ಇನ್ನು ಸಾಕಷ್ಟು ಹಾಡುಗಳು ಉಳಿದಿವೆ, ಗಾದೆಗಳಲ್ಲಿ ಮೌಲ್ಯ, ಒಡಪುಗಳಲ್ಲಿ ಮೌಲ್ಯ, ಕಥೆಗಳಲ್ಲಿ ಮೌಲ್ಯ, ಆಟಗಳಲ್ಲಿ ಮೌಲ್ಯ, ಇದು ಎಲ್ಲವನ್ನು ಬಿಡಿಸುತ್ತಾ ಹೋದರೆ ಜೀವನದ ಇಡೀ ಮೌಲಿಕರಣದ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬಹುದು. ಹಿಂಗೆ ಒಟ್ಟಾಗಿ ನಮ್ಮ ಬದುಕು ಎಂದರೆ ಜನಪದದ ಮೌಲ್ಯಕರಣದ ಬದುಕುವಾಗಬೇಕು. ಜನಪದ ಮೌಲ್ಯದಿಂದ ತುಂಬಿರುವಂತಹ ಬದುಕಾಗಬೇಕು. ಆ ಬದುಕಿಗೆ ಬೆಲೆ ಬರಬೇಕು. ಆ ಕಾರಣಕ್ಕಾಗಿ ಅಂತ ಬದುಕನ್ನ ಬದುಕಬೇಕು. ಅಂತ ನಮ್ಮ ಜನಪದ ಹಾಡುಗಳು ಮಾರ್ಗದರ್ಶನ ಮಾಡುತ್ತಾ ಬಂದಿದೆ. ಹಾಡುಗಳಲ್ಲಿ ರಸ ಇದೆ, ಆ ಹಾಡುಗಳಲ್ಲಿ ನಾದ ಇದೆ. ಧ್ವನಿದೆ, ಒಂದು ರೀತಿ ಶಬ್ದಲ್ಲಾಲಿತ ಇದೆ. ಇದು ಎಲ್ಲಾದಕ್ಕೆ ಮನಸ್ಸು ನಂಬುತ್ತದೆ. ನಮಗೆ ಜೀವನದ ಮೌಲ್ಯಗಳ ಅರಿವು ಮಾಡಿಸುತ್ತದೆ.
KLive Special Article ಉದಾಹರಣೆ: 1)ಹುಟ್ಟಿದ್ದ ಮನೆಯನ್ನು ಬಿಟ್ಟು ಹೋದೆ,
ಕೊಟ್ಟಿರುವ ಮನೆಗೆ ನೀ ಹೋದೆ,
ಇದ್ದ ಮನೆಯೊಳಗ ಹೋಗಿ ಗಟ್ಟಿಯಾಗಿ ಹಿಡಿಯವ್ವ ದಾರಿ.
2)ಸಿಟ್ಟಿನ ಮುಖದವಳಾಗಿ ನೀ ಬಾಳ ಬೇಡಮ್ಮ,
ಅತಿ ಕಷ್ಟ ಬಂದರೆ ನೀನು ಸದಾ ನಲಿವು ತೋರಮ್ಮ,
ಕೊಟ್ಟಿರುವ ಊರೊಳಗೆಲ್ಲ ಹೆಸರಾಗು ತಾಯಮ್ಮ.
ಬರಹ : ಗೌಸ್ ಪೀರ್, ದ್ವಿತೀಯ ವರ್ಷದ ಬಿಎ ವಿದ್ಯಾರ್ಥಿ, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ