Saturday, March 7, 2026
Saturday, March 7, 2026

ಹುತಾತ್ಮ ಬಿಪಿನ್ ರಾವತ್ ಅವರಿಗೆ ಶ್ರದ್ಧಾಂಜಲಿ

Date:

ಸಿಟಿಜನ್ ಫಾರ್ ಡೆಮಾಕ್ರಸಿ ಸಂಸ್ಥೆಯು ಬೆಂಗಳೂರು ಪುರಭವನದ ಮುಂಭಾಗದಲ್ಲಿ ಸಂಜೆಯ ವೇಳೆಯಲ್ಲಿ ಜನರಲ್ ಬಿಪಿನ್ ರಾವತ್ ಶ್ರದ್ಧಾಂಜಲಿ ಸಭೆಯನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಭಾಗವಹಿಸಿದ್ದರು.

ದೇಶದ ರಕ್ಷಣಾ ಪಡೆಗಳ ಮೊದಲ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅರ್ಧಕ್ಕೆ ಬಿಟ್ಟು ಹೋಗಿರುವ ಸೇನಾ ಸುಧಾರಣಾ ಕಾರ್ಯಗಳನ್ನು ಪೂರ್ಣಗೊಳಿಸಬೇಕು. ಇದೇ ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎಂದು ರಾಮ್ ಮಾಧವ್ ತಿಳಿಸಿದರು.

ಸೇನೆಗೆ ಅಗತ್ಯವಾದ ಶಸ್ತ್ರಾಸ್ತ್ರ ಮತ್ತು ಉಪಕರಣಗಳಿಗೆ ಬೇರೆ ದೇಶಗಳನ್ನು ಅವಲಂಬಿಸದೆ ದೇಶದಲ್ಲಿ ದೊರಕುವಂತಾಗಬೇಕೆಂದು ರಾವತ್ ಕನಸು ಕಂಡಿದ್ದರು. ಅನಿಟ್ಟಿನಲ್ಲಿ ಯಶಸ್ಸು ಸಾಧಿಸಿದ್ದರು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ತಿಳಿಸಿದರು.

“ಮೊದಲ ಸಿಡಿಎಸ್ ರಾವತ್ ಮತ್ತು ಇತರ ಯೋಧರ ಸಾವಿನಿಂದ ಇಡೀ ದೇಶ ದುಃಖದಲ್ಲಿದೆ. ಈ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಸಂಗ್ರಹಿಸುತ್ತಿರುವುದು ದುರಾದೃಷ್ಟಕರ. ದೇಶದ ವಿದ್ಯಾರ್ಥಿ ಸಮೂಹಕ್ಕೆ ಮಿಲಿಟರಿ ತರಬೇತಿಯನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಸರಕಾರಗಳು ಮುಂದಾಗಬೇಕು ಎಂದರು.

ಈ ಸಭೆಯಲ್ಲಿ ವಿಮರ್ಶಕ ಹರೀಶ್, ಜೈವಿಕ ಪ್ರವಾಸೋದ್ಯಮ ಮಂಡಳಿ ಅಧ್ಯಕ್ಷ ಮದನಗೋಪಾಲ್, ನಟಿ ತಾರ, ಹಿರಿಯ ನಟ ಸೇತುರಾಮ್ ಸೇರಿದಂತೆ ಹಲವಾರು ಗಣ್ಯರು ಸಭೆಯಲ್ಲಿ ಭಾಗವಹಿಸಿ ಮುಂಬತ್ತಿ ಹಚ್ಚಿ ಅಗಲಿದ ಯೋಧರಿಗೆ ಗೌರವ ನಮನ ಸಲ್ಲಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Karnataka Sanga ಮಾರ್ಚ್ 09 ಕರ್ನಾಟಕ ಸಂಘದಲ್ಲಿ ಸಾಹಿತಿ ರಂಜನಿ ರಾಘವನ್ ತಿಂಗಳ ಅತಿಥಿ

Karnataka Sanga ದಿನಾಂಕ 09ನೇ ಮಾರ್ಚ್ 2026ರ ಸೋಮವಾರ, ಸಂಜೆ 5:30ಕ್ಕೆ...

CM Siddharamaiah ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ

CM Siddharamaiah ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ...

Klive Special Article ನಿಮ್ಮೂರು ನಮ್ಮ ಮಾಹಿತಿ ಸ್ಥಳ: ಸುಣ್ಣದಹಳ್ಳಿ ಲೇ: ದಿಲೀಪ್ ನಾಡಿಗ್

Klive Special Article ಸುವರ್ಣ ಹಳ್ಳಿ ಕಾಲಕ್ರಮೇಣ ಸುಣ್ಣದ ಹಳ್ಳಿಯಾಯಿತು. ಇಲ್ಲಿದ್ದಾನೆ...

Department of Tourism ಪ್ರವಾಸೋದ್ಯಮ ಇಲಾಖೆಯಿಂದ ಮೊಬೈಲ್ ಕ್ಯಾಂಟೀನ್ ಯೋಜನೆಯಡಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನ

Department of Tourism ಪ್ರವಾಸೋದ್ಯಮ ಇಲಾಖೆಯ ವತಿಯಿಂದ 2025-26ನೇ ಸಾಲಿನಲ್ಲಿ ರಾಜ್ಯದ...