Tuesday, May 26, 2026
Tuesday, May 26, 2026

ವಿಜಯ್ ಹಜಾರೆ ಟ್ರೋಫಿ: 2ನೇ ಪಂದ್ಯ,ಕರ್ನಾಟಕಕ್ಕೆ ಸೋಲು

Date:

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಎರಡನೇ ಪಂದ್ಯ ತಮಿಳುನಾಡು ಮತ್ತು ಕರ್ನಾಟಕ ತಂಡಗಳ ನಡುವೆ ಪಂದ್ಯ ನಡೆಯಿತು.ಕರ್ನಾಟಕದ ವಿರುದ್ಧ ತಮಿಳುನಾಡು ಭರ್ಜರಿ ಜಯ ಸಾಧಿಸಿತು.

ತಿರುವನಂತಪುರದ ಮಂಗಳಾಪುರ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಕರ್ನಾಟಕ ತಂಡವು, ತಮಿಳುನಾಡು ತಂಡದ ಬೌಲರ್ ಗಳಾದ ಕಿಶೋರ್ ಮತ್ತು ಮಣಿ ಮಾರನ್ ಇವರ ಅಮೋಘ ಬೌಲಿಂಗ್ ನಿಂದ ಕೇವಲ 36.3 ಓವರ್ ಗಳಲ್ಲಿ 122 ರನ್ ಗಳಿಸಿಕೊಂಡಿದತು.

ಮಧ್ಯಮ ವೇಗಿ ಸಂದೀಪ್ ಪರಿಯರ್, ಮೊದಲ ಓವರ್ ನಲ್ಲಿ ಕರ್ನಾಟಕಕ್ಕೆ ದೊಡ್ಡ ಹೊಡೆತ ಕೊಟ್ಟರು. ಪುದುಚೇರಿ ಎದುರಿನ ಪಂದ್ಯದಲ್ಲಿ ಅಮೋಘವಾಗಿ ಆಡಿದ್ದ ಸಮರ್ಥ್ ಇಲ್ಲಿ ಖಾತೆಯನ್ನೇ ತೆರೆಯಲಿಲ್ಲ.

ಕೆ.ವಿ.ಸಿದ್ದಾರ್ಥ್ 6 ರನ್ ಗಳಿಸಿದರು. ಆದರೆ ರೋಹನ್ ಕದಂ 69 ಎಸೆತಗಳಲ್ಲಿ 37 ರನ್ ಗಳಿಸಿಕೊಂಡರು ಮತ್ತು ನಾಯಕ ಮನೀಷ್ ಪಾಂಡೆ 54 ಎಸೆತಗಳಲ್ಲಿ 40 ರನ್ ಗಳಿಸಿ ಇನ್ನಿಂಗ್ಸ್ ಗೆ ಬಲ ತುಂಬಲು ಪ್ರಯತ್ನಿಸಿದರು.ಶ್ರೀನಿವಾಸ್ ಶರತ್ ಕೂಡ ವಿಫಲರಾದರು. ಕೆಳ ಕ್ರಮಾಂಕದ ವಿಕೆಟ್ ಗಳನ್ನು ಸಿದ್ದಾರ್ಥ್ ಮತ್ತು ಸಾಯಿ ಕಿಶೋರ್ ಹಂಚಿಕೊಂಡು ಕರ್ನಾಟಕದ ಇನ್ನಿಂಗ್ಸ್ ಗೆ ಬೇಗನೆ ತೆರೆ ಎಳೆದರು.

ಈ ಒತ್ತಡದ ಸನ್ನಿವೇಶವನ್ನು ಸಮರ್ಥವಾಗಿ ಬಳಸಿಕೊಂಡ ವಾಷಿಂಗ್ಟನ್ ಸುಂದರ್ ಅವರು ಕದಂ ವಿಕೆಟ್ ಗಳಿಸಿ ಜೊತೆಯಾಟವನ್ನು ಮುರಿದರು. ನಂತರದ ಆಟದಲ್ಲಿ ಸಿದ್ದಾರ್ಥ್ ತಮ್ಮ ಸ್ಪಿನ್ ಮೋಡಿ ಮೆರೆದರು.

ಸಿದ್ದಾರ್ಥ್ ಎಸೆತದ ತಿರುವು ಗುರುತಿಸುವಲ್ಲಿ ವಿಫಲರಾದ ಮನೀಶ್ ಪಾಂಡೆ ಕ್ಲೀನ್ ಬೌಲ್ಡ್ ಆದರು. ಕರುಣ್ ನಾಯರ್ ಅವರೇ ಸಿದ್ದಾರ್ಥ್ ಗೆ ಪೆವಿಲಿಯನ್ ದಾರಿ ತೋರಿಸಿದರು.

123 ರನ್ ಗಳ ಗೆಲುವಿನ ಗುರಿಯಿಟ್ಟು ಬೆನ್ನತ್ತಿ ಆಡಿದ ತಮಿಳುನಾಡು ತಂಡ ಕೇವಲ 28 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿ ರೋಚಕ ಜಯ ಸಾಧಿಸಿತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಬದುಕಿನ ಪುಟದಲ್ಲೊಂದು ಘಟನೆ

ಪ್ರಸಾದ್ ಶ್ರೀವತ್ಸ ,ದಾವಣಗೆರೆ. Klive Special Article ಮನುಷ್ಯನೆಂದ ಮೇಲೆ ಹಲವಾರು ಸರಿ-ತಪ್ಪು...

Rotary Shivamogga ವೈವಿಧ್ಯಮಯ ಕಲಾಪ್ರಕಾರಗಳ ಕಲಿಕೆಯಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ವೃದ್ಧಿ- ಡಿ.ಕಿಶೋರ್ ಕುಮಾರ್

Rotary Shivamogga ಬಾಲ್ಯದಿಂದಲೇ ಕಲೆ, ಸಾಹಿತ್ಯ, ನೃತ್ಯದ ಬಗ್ಗೆ ಮಕ್ಕಳಲ್ಲಿ ಆಸಕ್ತಿ...

Dinesh Gundu Rao ಎಬೊಲಾ ಸೋಂಕು ಬಾರದಂತೆ ಆರೋಗ್ಯ ಇಲಾಖೆ ಅಗತ್ಯ ಕ್ರಮ.- ದಿನೇಶ್ ಗುಂಡೂರಾವ್

Dinesh Gundu Rao ಎಬೋಲಾ ಸೋಂಕು ಬಾರದಂತೆ ತಡೆಯಲು ಆರೋಗ್ಯ ಇಲಾಖೆಯಿಂದ...