Monday, March 2, 2026
Monday, March 2, 2026

ಪಿಎಸ್ಐ ಹುದ್ದೆ ನೇಮಕಾತಿ ಪ್ರಕರಣ:ಆರೋಪಿಗಳ ಮನೆಗೆ ದಾಳಿ

Date:

545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷೆ ಹಾಗೂ ಆಯ್ಕೆ ಪಟ್ಟಿಯಲ್ಲಿ ನಡೆದ ಅಕ್ರಮ ಪ್ರಕರಣದಲ್ಲಿ ಸಿಲುಕಿರುವ ಆರೋಪಿಗಳ ಮನೆ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮನೆಯನ್ನು ಸಂಪೂರ್ಣವಾಗಿ ಹುಡುಕಲಾಗಿದೆ. ಆರೋಪಿ ಡಿವೈಎಸ್ಪಿ ಶಾಂತಕುಮಾರ್ ಅವರ ಆಡುಗೋಡಿಯ ಪೊಲೀಸ್ ಕ್ವಾರ್ಟರ್ಸ್​ನಲ್ಲಿರುವ ನಿವಾಸದ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಒಟ್ಟು 2 ವಾಹನಗಳಲ್ಲಿ ಶಾಂತಕುಮಾರ್ ಸಿನಿವಾಸಕ್ಕೆ ಆಗಮಿಸಿದ ಸಿಐಡಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪರಿಶೀಲನೆ ನಡೆಸುತ್ತಿದ್ದಾರೆ .

545 ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿಯಲ್ಲಿ ನಡೆದ ಅಕ್ರಮ ಪ್ರಕರಣ ಸಂಬಂಧ ಕಲಬುರಗಿ ಜಿಲ್ಲಾ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಒಡೆತನದ ಶಾಲೆ ಜ್ಞಾನಜ್ಯೋತಿ ಶಾಲೆಯ ಹೆಡ್​ಮಾಸ್ಟರ್ ಕಾಶಿನಾಥ್ ಅವರನ್ನು ಸಿಐಡಿ ಮತ್ತೆ ವಶಕ್ಕೆ ಪಡೆದಿದೆ.

ಅಕ್ರಮದಲ್ಲಿ ಸಿಲುಕಿ ಬಂಧಿತರಾಗಿರುವ ಕಲಬುರಗಿ ಜಿಲ್ಲಾ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಒಡೆತನದ ಶಾಲೆ ಇದಾಗಿದೆ.

ಇನ್ನೊಂದೆಡೆ ತಾಜ್ ಸುಲ್ತಾನ್​ಪುರ ರಸ್ತೆಯಲ್ಲಿರುವ ಕಾಶಿನಾಥ್ ನಿವಾಸದ ಮೇಲೂ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಜ್ಞಾನ ಜ್ಯೋತಿ ಶಾಲೆಯಲ್ಲಿ ನಡೆದ ಅಕ್ರಮ ಸಂಬಂಧ ಕಾಶಿನಾಥ್ ಅವರನ್ನು ಮೇ 11 ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಜ್ಞಾನ ಜ್ಯೋತಿ ಶಾಲೆ ಅಲ್ಲದೆ , ಬೇರೆ ಪರೀಕ್ಷೆ ಕೇಂದ್ರದಲ್ಲಿನ ಅಕ್ರಮದಲ್ಲಿ ಕೂಡ ಭಾಗಿಯಾಗಿರುವ ಆರೋಪ ಇವರ ಮೇಲಿದೆ.

ಈ ಹಿನ್ನೆಲೆ ಸಿಐಡಿ ಅಧಿಕಾರಿಗಳು ಕಾಶಿನಾಥ್ ಅವರನ್ನು ಇಂದು ಮತ್ತೆ ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ. ಅಲ್ಲದೆ , ಕಾಶಿನಾಥ್ ಅವರನ್ನು 7 ದಿನಗಳ ವಿಚಾರಣೆಗಾಗಿ ಸಿಐಡಿ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shikshana Ratna Awards ಶಿಕ್ಷಣ ಸಂಯೋಜಕ ಬಿ.ನಾಗರಾಜ್ ಗೆ “ಶಿಕ್ಷಣ ರತ್ನ” ಪ್ರಶಸ್ತಿ.

Shikshana Ratna Awards ತೀರ್ಥಹಳ್ಳಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕಳೆದ ನಾಲ್ಕು...

Shimoga News ಯುವಜನತೆ ಹಾದ ತಪ್ಪಿದಷ್ಟೂ ಕಂಪನಿಗಳಿಗೆ ಲಾಭ- ಎ.ಹೆಚ್.ಸಾಗರ್.

Shimoga News ನೈಜ ಪ್ರಪಂಚವನ್ನು ಕಾಣದೆ ಮೊಬೈಲ್ ಮೂಲಕವೇ ಜಗತ್ತನ್ನು ಅರ್ಥ...