Thursday, February 5, 2026
Thursday, February 5, 2026

ಸಂತಸದ ಸುದ್ದಿ ಭಾರತದಲ್ಲಿ ಬಡತನ ಗಣನೀಯ ಇಳಿಕೆ

Date:

2011 ಮತ್ತು 2019 ರ ನಡುವೆ ಭಾರತದ ತೀವ್ರ ಬಡತನವು ಗಮನಾರ್ಹ ಕುಸಿತ ಕಂಡಿದ್ದು ಶೇಕಡಾ 12.3ರಷ್ಟು ಕಡಿಮೆಯಾಗಿದೆ ಎಂದು ವಿಶ್ವ ಬ್ಯಾಂಕ್ ನೀತಿ ಸಂಶೋಧನೆಯ ಕಾರ್ಯಾಗಾರ ತಿಳಿಸಿದೆ.

ಭಾರತದಲ್ಲಿ ಬಡಜನರ ಸಂಖ್ಯೆಯು 2011 ರಲ್ಲಿ 22.5% ಇದ್ದು ಈ ಪ್ರಮಾಣ 2019 ರಲ್ಲಿ 10.2% ಕ್ಕೆ ಇಳಿದಿದೆ. ಜೊತೆಗೆ ಬಡತನ ಇಳಿಕೆಯಾದ ಪ್ರದೇಶದಲ್ಲಿ ಭಾರತದ ಗ್ರಾಮೀಣ ಭಾಗವೇ ಮುಂದಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ. ಉಚಿತ ಆಹಾರಧಾನ್ಯ ಯೋಜನೆಯು 2020 ರಲ್ಲಿ ಭಾರತದಲ್ಲಿನ ತೀವ್ರ ಬಡತನವನ್ನು ಶೇಕಡಾ 0.86 ಕ್ಕೆ ಮಿತಿಗೊಳಿಸಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ ಬಿಡುಗಡೆ ಮಾಡಿದ ವರದಿಯಲ್ಲೂ ಉಲ್ಲೇಖಿಸಲಾಗಿದೆ.

ಅರ್ಥಶಾಸ್ತ್ರಜ್ಞರಾದ ಸುತೀರ್ಥ ಸಿನ್ಹಾ ರಾಯ್ ಮತ್ತು ರಾಯ್ ವಾನ್ ಡೆರ್ ವೈಡ್ ಜಂಟಿಯಾಗಿ ಕೈಗೊಂಡ ಅಧ್ಯಯನ ವರದಿಯಲ್ಲಿ ಈ ಅಂಶವು ಬಹಿರಂಗ ಪಡಿಸಿದೆ.

2011 ಮತ್ತು 2019 ರ ನಡುವೆ ಬಡತನವು ಅಲ್ಪಾವಧಿಗೆ ಸ್ವಲ್ಪಮಟ್ಟಿಗೆ ಹೆಚ್ಚಿದ ಕನಿಷ್ಠ ಎರಡು ನಿದರ್ಶನಗಳಿವೆ ಎಂದು ಸಂಶೋಧನೆ ಹೇಳುತ್ತದೆ. ಕೇಂದ್ರ ಸರ್ಕಾರದ ನೋಟು ಅಮಾನ್ಯೀಕರಣದ ಅವಧಿಯಲ್ಲಿ ಮತ್ತು ಸಾಂಕ್ರಾಮಿಕ ರೋಗಕ್ಕೆ ಒಂದು ವರ್ಷದ ಮೊದಲು ಆರ್ಥಿಕತೆಯನ್ನು ಹಾಳುಗೆಡವಿದ ಆರ್ಥಿಕ ಮಂದಗತಿಯನ್ನು ಗಮನಿಸಲಾಗಿದೆ ಎಂದು ವಿಶ್ವಸಂಸ್ಥೆಯ ವರದಿ ಸೂಚಿಸಿದೆ.

2011 ರಲ್ಲಿ ಬಡತನದ ಪ್ರಮಾಣವು ಶೇಕಡಾ 26.3 ರಷ್ಟಿದ್ದು, 2019 ರಲ್ಲಿ ಶೇಕಡಾ 11.9 ಕ್ಕೆ ಇಳಿದಿದ್ದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಬಡತತನವು ಇಳಿಮುಖವಾಗಿದೆ. ಇದೇ ಅವಧಿಯಲ್ಲಿ ನಗರ ಪ್ರದೇಶಗಳ ಬಡತನವು 14.2 ರಿಂದ 6.3 ಪ್ರತಿಶತಕ್ಕೆ ಇಳಿದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಶೋಧನಾ ವರದಿ ಮಹತ್ವ ಪಡೆದಿದೆ.
ಭಾರತದ ಬಡತನದ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಯಾವುದೇ ಅಧಿಕೃತ ಸಂಶೋಧನೆ ಅಥವಾ ವರದಿಗಳು ಇಲ್ಲದ ಕಾರಣ ವಿಶ್ವ ಬ್ಯಾಂಕ್‌ನ ಈ ಸಂಶೋಧನಾ ವರದಿಯು ಮಹತ್ವದ್ದಾಗಿದೆ. ಭಾರತದ ಕೊನೆಯ ಖರ್ಚು ವೆಚ್ಚ ಸಮೀಕ್ಷೆಯನ್ನು 2011 ರಲ್ಲಿ ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಸ್ಥೆ (NSSO) ಬಿಡುಗಡೆ ಮಾಡಿತ್ತು. ಈ ಸಮೀಕ್ಷೆಯು ದೇಶವು ಬಡತನ ಮತ್ತು ಅಸಮಾನತೆಯ ಅಧಿಕೃತ ಅಂದಾಜುಗಳನ್ನು ಬಿಡುಗಡೆ ಮಾಡಿತ್ತು.

ವಿಶ್ವಬ್ಯಾಂಕ್‌ನ ಸಂಶೋಧನಾ ಪ್ರಬಂಧದ ಪ್ರಕಾರ ಭಾರತದಲ್ಲಿನ ನಗರ ಬಡತನವು 2016 ರಲ್ಲಿ ನೋಟು ಅಮಾನ್ಯೀಕರಣದೊಂದಿಗೆ ಶೇಕಡಾ 2 ರಷ್ಟು ಏರಿಕೆಯಾಗಿತ್ತು. 2019 ರಲ್ಲಿ ಗ್ರಾಮೀಣ ಬಡತನವು 10 ಮೂಲಾಂಶಗಳ ಏರಿಕೆಯಾಗಿತ್ತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ವೈಯಕ್ತಿಕ ವಿಮಾ ಮೊತ್ತ ನೀಡಲು ಗ್ರಾಹಕ ಆಯೋಗ ಆದೇಶ.

Shimoga News ವೈಯಕ್ತಿಕ ಅಪಘಾತ ವಿಮಾ ಮೊತ್ತ ನೀಡದೇ ಸೇವಾನ್ಯೂನ್ಯತೆ ಎಸಗಿದ...

Char Dham ಚಾರ್ ಧಾಮ್ ಯಾತ್ರೆ.ಆಸಕ್ತರಿಗೆ ಮಾಹಿತಿ.

Char Dham ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ, ಯೂತ್ ಹಾಸ್ಟೆಲ್...

M.S.Santosh ಗಾಂಧೀಜಿಯವರ ಸತ್ಯ,ಅಹಿಂಸೆ ಶಾಂತಿ ತತ್ವಗಳು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪೂರಕ- ನ್ಯಾ.ಎಂ‌.ಎಸ್.ಸಂತೋಷ್.

M.S.Santosh ಮಹಾತ್ಮಾ ಗಾಂಧೀಜಿಯವರು ಸಾರಿದ ಸತ್ಯ, ಅಹಿಂಸೆ, ಶಾಂತಿಯ ತತ್ವಗಳು ಸ್ವಸ್ಥ...