Monday, August 24, 2026
Monday, August 24, 2026

ಶ್ರೀಲಂಕಾ ಸಾಲಕ್ಕಾಗಿ ಐಎಂ ಎಫ್ ಗೆ ಮೊರೆ

Date:

ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾ, ನೆರವಿಗಾಗಿ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಮೊರೆ ಹೋಗಲು ಮುಂದಾಗಿದೆ.

ಈ ವಿಷಯದಲ್ಲಿ ಐಎಂಎಫ್‌ನೊಂದಿಗೆ ಮಾತುಕತೆ ನಡೆಸಲು ನೆರವಾಗುವಂತೆ ಕೋರಲು ಶ್ರೀಲಂಕಾ ಸರ್ಕಾರದ ನಿಯೋಗವೊಂದು ಅಮೆರಿಕಕ್ಕೆ ತೆರಳಿದೆ.

ದೇಶದ ಆರ್ಥಿಕತೆಯನ್ನು ಹಳಿಗೆ ತರುವ ಸಲುವಾಗಿ 400 ಕೋಟಿ ಡಾಲರ್ ನೆರವು ನೀಡುವಂತೆ ಐಎಂಎಫ್‌ಗೆ ಕೋರಲು ಶ್ರೀಲಂಕಾ ನಿರ್ಧರಿಸಿದೆ.

ಐಎಂಎಫ್‌ನ ನೆರವು ಕೇಳಬೇಕು ಎಂಬ ಸಲಹೆಗಳನ್ನು ಈ ಮೊದಲು ನಾವು ತಿರಸ್ಕರಿಸಿದ್ದೆವು. ಈಗ ವಿದೇಶಿ ವಿನಿಮಯ ಕೊರತೆಯನ್ನು ನೀಗಿಸಿ, ಆ ಮೂಲಕ ದೇಶವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಬೇಕಿದೆ.

ಹೀಗಾಗಿ, ಐಎಂಎಫ್‌ನಿಂದ 400ಕೋಟಿ ಡಾಲರ್‌ ನೆರವು ಪಡೆಯಲು ನಿರ್ಧರಿಸಿದ್ದೇವೆ’ ಎಂದು ಸಬ್ರಿ ಹೇಳಿದ್ದಾರೆ.

ನೂತನ ಹಣಕಾಸು ಸಚಿವ ಅಲಿ ಸಬ್ರಿ ನೇತೃತ್ವದ ನಿಯೋಗವು ಏ. 19ರಿಂದ 24ರ ವರೆಗೆ ಐಎಂಎಫ್‌ ಜೊತೆ ಈ ಸಂಬಂಧ ಮಾತುಕತೆ ನಡೆಸಲಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ದ್ವೀಪರಾಷ್ಟ್ರವು 700 ಕೋಟಿ ಸಾಲ ಮರುಪಾವತಿ ಮಾಡಬೇಕಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ...

ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ನೇಮಕಾತಿ ಪ್ರಕಟಣೆ

ಅಂಗನವಾಡಿ ಕಂ ಕ್ರಷ್ ಕೇಂದ್ರಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ...