Thursday, November 12, 2026
Thursday, November 12, 2026

ಶ್ರೀ ಜ್ಞಾನೇಶ್ವರಿ ಗೋಶಾಲೆಯಲ್ಲಿ ವಿಜೃಂಭಣೆಯಿಂದ ಗೋಮಾತಾ ಪೂಜೆ

Date:

ದೈವಜ್ಞ ಬ್ರಾಹ್ಮಣ ಗುರುಪೀಠದ ಶ್ರೀ ಜ್ಞಾನೇಶ್ವರಿ ಗೋಶಾಲೆ, ಹುಣಸಗೋಡು, ಶಿವಮೊಗ್ಗದಲ್ಲಿ ಬಲಿಪಾಡ್ಯಮಿ ಪ್ರಯುಕ್ತ ಗೋಮಾತಾ ಪೂಜಾ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಗೋಶಾಲೆಯಲ್ಲಿರುವ 190 ಗೋವುಗಳ ಸಮ್ಮುಖದಲ್ಲಿ ವೈದಿಕರ ಮಂತ್ರಘೋಷಗಳೊಂದಿಗೆ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ನೂರಾರು ಗೋಪ್ರೇಮಿಗಳು ಹಾಗೂ ಭಕ್ತರು ತಮ್ಮ ಕುಟುಂಬ ಸಮೇತರಾಗಿ ಪಾಲ್ಗೊಂಡು ಪವಿತ್ರ ಗೋಮಾತೆಯ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಗೋಶಾಲೆಯ ಅಧ್ಯಕ್ಷ ಚಂದ್ರಹಾಸ ಪಿ. ರಾಯ್ಕರ್ ಅವರು, ಸನಾತನ ಧರ್ಮ ಮತ್ತು ಸಂಸ್ಕೃತಿಯಲ್ಲಿ ಗೋಮಾತೆಗೆ ವಿಶೇಷ ಸ್ಥಾನವಿದೆ. ಗೋಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಗೋಮಾತೆಯ ಸೇವೆ ಮಾಡುವ ಮೂಲಕ ನಮ್ಮ ಸನಾತನ ಪರಂಪರೆಯನ್ನು ಉಳಿಸಿ ಬೆಳೆಸಬೇಕು ಎಂದು ಮನವಿ ಮಾಡಿದರು.

ವೈದಿಕರ ಉಪಸ್ಥಿತಿಯಲ್ಲಿ ನಡೆದ ಗೋಮಾತಾ ಪೂಜೆಯನ್ನು ಗೋಶಾಲೆಯ ಅಧ್ಯಕ್ಷ ಚಂದ್ರಹಾಸ ಪಿ. ರಾಯ್ಕರ್ ಹಾಗೂ ಉಪಾಧ್ಯಕ್ಷ ಜನಾರ್ದನ ಎಂ. ಶೇಟ್ ದಂಪತಿಗಳು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಗೋಶಾಲೆಯ ಕಾರ್ಯದರ್ಶಿ ಪ್ರಶಾಂತ್ ಕುಮಾರ್ ರಾಯ್ಕರ್, ಖಜಾಂಚಿ ಗಣೇಶ ರೇವಣಕರ್, ಕೃಷ್ಣಮೂರ್ತಿ ಕೆ.ವಿ., ಶೇಷಾದ್ರಿ ಕೆ., ಶ್ರೀಕಾಂತ್ ಪಿ. ಶೇಟ್, ವಿಜಯ್ ರಾಯ್ಕರ್, ಗುರು ಶೇಟ್, ಶ್ರೀಪಾದ ರೇವಣಕರ್, ಸುಧಾಕರ್ ವಿ. ಸೇರಿದಂತೆ ಅನೇಕ ಗೋಪ್ರೇಮಿಗಳು, ಭಕ್ತರು ಹಾಗೂ ಬಾಂಧವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ನೂತನ ಟ್ರಸ್ಟಿಗಳಾದ ವಿನಾಯಕ ಪಿ. ರಾಯ್ಕರ್, ಪುಷ್ಪಕ ಜಿ. ರೇವಣಕರ್ ಹಾಗೂ ದಾನಿಗಳಾದ ಎಂ. ಪಾಂಡುರಂಗರಾವ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಭಕ್ತಿಭಾವ, ಧಾರ್ಮಿಕ ಶ್ರದ್ಧೆ ಹಾಗೂ ಸಂಭ್ರಮದಿಂದ ನಡೆದ ಕಾರ್ಯಕ್ರಮವು ಗೋಸಂರಕ್ಷಣೆ ಮತ್ತು ಸನಾತನ ಸಂಸ್ಕೃತಿಯ ಮಹತ್ವವನ್ನು ಸಾರಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗೃಹಲಕ್ಷ್ಮಿಯ ಬಲ, ಸ್ವಾವಲಂಬನೆಯ ಫಲ- ಡಿ.ಕೆ.ಶಿವಕುಮಾರ್

ಚಕ್ಕುಲಿ, ನಿಪ್ಪಟ್ಟು ಸೇರಿದಂತೆ 20ಕ್ಕೂ ಹೆಚ್ಚು ಬಗೆಯ ತಿನಿಸುಗಳನ್ನು ತಯಾರಿಸಿ ಮಾರಾಟ...

B. Y. Raghavendra ಬೆಳೆ ವಿಮಾ ಕಂಪನಿಗಳು ರೈತರಿಗೆ ಘೋಷಿಸಿದ ವಿಮಾ ಪರಿಹಾರ ಮೊತ್ತ ನೀಡಿ- ಬಿ.ವೈ.ರಾಘವೇಂದ್ರ

B. Y. Raghavendra ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಮುಂಗಾರು...

Kannada Rajyotsava ಕನ್ನಡ ಭಾಷೆಯನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ: ಹೆಚ್.ಸಿ. ಸುರೇಶ್

Kannada Rajyotsava ಅನ್ಯ ಭಾಷೆಗಳ ಪ್ರಭಾವದಿಂದ ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿರುವ...