Wednesday, November 11, 2026
Wednesday, November 11, 2026

ಇ.ಎಸ್.ಐ. ವಿಮಾದಾರ ಕಾರ್ಮಿಕರ ಒಪಿಡಿ ಸಮಸ್ಯೆ ತಕ್ಷಣ ಪರಿಹರಿಸಿ: ಕಾರ್ಮಿಕ ಸಚಿವ ಸಂತೋಷ್ ಲಾಡ್‌ಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಆಗ್ರಹ

Date:

ಶಿವಮೊಗ್ಗ ಜಿಲ್ಲೆಯ ಇ.ಎಸ್.ಐ. (ESI) ವಿಮಾದಾರ ಕಾರ್ಮಿಕರು ಕಳೆದ ನಾಲ್ಕು ತಿಂಗಳುಗಳಿಂದ ಎದುರಿಸುತ್ತಿರುವ ಒಪಿಡಿ (OPD) ಚಿಕಿತ್ಸಾ ಸಮಸ್ಯೆಯನ್ನು ಸರ್ಕಾರ ಕಾಲಹರಣ ಮಾಡದೆ ಕೂಡಲೇ ಬಗೆಹರಿಸಬೇಕು,” ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್. ಎನ್. ಚನ್ನಬಸಪ್ಪ (ಚೆನ್ನಿ) ಅವರು ಒತ್ತಾಯಿಸಿದ್ದಾರೆ.

ಈ ಸಂಬಂಧ ರಾಜ್ಯದ ಕಾರ್ಮಿಕ ಸಚಿವರಾದ ಶ್ರೀ ಸಂತೋಷ್ ಎಸ್. ಲಾಡ್ ಅವರಿಗೆ ಭೇಟಿ ಮಾಡಿದ ಶಾಸಕರು, ಕಾರ್ಮಿಕರ ಗೋಳನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ. “ಶಿವಮೊಗ್ಗ ಜಿಲ್ಲಾ ಇ.ಎಸ್.ಐ. ವಿಮಾದಾರರ ಹಾಗೂ ಇತರೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘವು ನೀಡಿರುವ ದೂರಿನಂತೆ, ಇ.ಎಸ್.ಐ ಜೊತೆ ಒಪ್ಪಂದ ಮಾಡಿಕೊಂಡಿರುವ ಖಾಸಗಿ ಆಸ್ಪತ್ರೆಗಳು ಹಣದ ಆಸೆಗೆ ರೋಗಿಗಳಿಗೆ ಅಗತ್ಯವಿಲ್ಲದಿದ್ದರೂ ಅನಗತ್ಯವಾಗಿ ಎಕ್ಸ್‌-ರೇ, ಸ್ಕ್ಯಾನಿಂಗ್, ರಕ್ತ ಪರೀಕ್ಷೆಯಂತಹ ತಪಾಸಣೆಗಳನ್ನು ನಡೆಸಿ ದುಬಾರಿ ಹಣ ವಸೂಲಿ ಮಾಡುತ್ತಿವೆ ಎಂಬ ಕಾರಣ ನೀಡಿ, ಕಳೆದ ನಾಲ್ಕು ತಿಂಗಳುಗಳಿಂದ ಒಪಿಡಿ ಸೌಲಭ್ಯವನ್ನೇ ಸ್ಥಗಿತಗೊಳಿಸಲಾಗಿದೆ. ಆಸ್ಪತ್ರೆಗಳ ಅಕ್ರಮಗಳಿಗೆ ಬಡ ಕಾರ್ಮಿಕರನ್ನು ಶಿಕ್ಷಿಸುವುದು ಎಷ್ಟು ಸರಿ?” ಎಂದು ಶಾಸಕರು ಪ್ರಶ್ನಿಸಿದ್ದಾರೆ.

“ಇ.ಎಸ್.ಐ. ಯೋಜನೆಯು ಕಾರ್ಮಿಕರು ಮತ್ತು ಮಾಲೀಕರು ನೀಡುವ ಶ್ರಮದ ವಂತಿಗೆಯಿಂದಲೇ ನಡೆಯುತ್ತಿರುವ ವೈದ್ಯಕೀಯ ಸೇವಾ ವ್ಯವಸ್ಥೆಯಾಗಿದೆ. ತಪ್ಪು ಮಾಡಿದ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದನ್ನು ಬಿಟ್ಟು, ಒಟ್ಟಾರೆಯಾಗಿ ಒಪಿಡಿ ಸೌಲಭ್ಯ ನಿಲ್ಲಿಸಿರುವುದರಿಂದ ನೂರಾರು ಕಾರ್ಮಿಕರು ನಿತ್ಯ ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಆದ್ದರಿಂದ, ಕಾರ್ಮಿಕ ಇಲಾಖೆಯು ತಕ್ಷಣವೇ ಮಧ್ಯಪ್ರವೇಶಿಸಿ, ಕಾರ್ಮಿಕರ ಸಂಕಷ್ಟವನ್ನು ಬಗೆಹರಿಸಿ ಗುಣಮಟ್ಟದ ಚಿಕಿತ್ಸೆ ಮುಂದುವರಿಯುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು,” ಎಂದು ಶಾಸಕ ಶ್ರೀ ಎಸ್. ಎನ್. ಚನ್ನಬಸಪ್ಪ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗೃಹಲಕ್ಷ್ಮಿಯ ಬಲ, ಸ್ವಾವಲಂಬನೆಯ ಫಲ- ಡಿ.ಕೆ.ಶಿವಕುಮಾರ್

ಚಕ್ಕುಲಿ, ನಿಪ್ಪಟ್ಟು ಸೇರಿದಂತೆ 20ಕ್ಕೂ ಹೆಚ್ಚು ಬಗೆಯ ತಿನಿಸುಗಳನ್ನು ತಯಾರಿಸಿ ಮಾರಾಟ...

B. Y. Raghavendra ಬೆಳೆ ವಿಮಾ ಕಂಪನಿಗಳು ರೈತರಿಗೆ ಘೋಷಿಸಿದ ವಿಮಾ ಪರಿಹಾರ ಮೊತ್ತ ನೀಡಿ- ಬಿ.ವೈ.ರಾಘವೇಂದ್ರ

B. Y. Raghavendra ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಮುಂಗಾರು...

Kannada Rajyotsava ಕನ್ನಡ ಭಾಷೆಯನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ: ಹೆಚ್.ಸಿ. ಸುರೇಶ್

Kannada Rajyotsava ಅನ್ಯ ಭಾಷೆಗಳ ಪ್ರಭಾವದಿಂದ ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿರುವ...