ಕನ್ನಡ ಸಾಹಿತ್ಯ ಕ್ಷೇತ್ರವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಿವಮೊಗ್ಗದ ಕರ್ನಾಟಕ ಸಂಘವು ಪ್ರತಿವರ್ಷ ನೀಡುವ ಪ್ರತಿಷ್ಠಿತ ವಾರ್ಷಿಕ ಪುಸ್ತಕ ಬಹುಮಾನ ಕಾರ್ಯಕ್ರಮವು ಇದೇ ನವೆಂಬರ್ 14ರಂದು ನಡೆಯಲಿದೆ.
ಕಥೆ, ಕವನ, ಕಾದಂಬರಿ, ಅನುವಾದ, ಅಂಕಣ, ವಿಮರ್ಶೆ ಸೇರಿದಂತೆ ಸುಮಾರು 12 ಸಾಹಿತ್ಯ ಪ್ರಕಾರಗಳಲ್ಲಿ ಪ್ರಕಟವಾದ ಪುಸ್ತಕಗಳಿಗೆ 2025ನೇ ಸಾಲಿನ ಪುಸ್ತಕ ಬಹುಮಾನಗಳನ್ನು ಪ್ರದಾನ ಮಾಡಲಾಗುತ್ತದೆ.
ನವೆಂಬರ್ 14ರಂದು ಸಂಜೆ ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಖ್ಯಾತ ಸಂಶೋಧಕರು ಹಾಗೂ ವಿಮರ್ಶಕರಾದ ಡಾ. ಅಜಕ್ಕಳ ಗಿರೀಶ್ ಭಟ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಇದಕ್ಕೂ ಮುನ್ನ ಮಧ್ಯಾಹ್ನ 3 ಗಂಟೆಗೆ ಪ್ರಶಸ್ತಿ ವಿಜೇತ ಲೇಖಕರೊಂದಿಗೆ ಅವರ ಕೃತಿಗಳ ಕುರಿತು ಆತ್ಮೀಯ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕನ್ನಡ ಸಾಹಿತ್ಯ ಹಾಗೂ ಸಾಹಿತಿಗಳನ್ನು ಗೌರವಿಸುವ ಈ ಕಾರ್ಯಕ್ರಮಕ್ಕೆ ಕರ್ನಾಟಕ ಸಂಘದ ಸದಸ್ಯರು ಹಾಗೂ ಶಿವಮೊಗ್ಗದ ಸಾಹಿತ್ಯಾಸಕ್ತರಿಗೆ ಸಂಘದ ಕಾರ್ಯದರ್ಶಿ ವಿನಯ್ ಅವರು ಆಹ್ವಾನ ನೀಡಿದ್ದಾರೆ.
