Wednesday, October 14, 2026
Wednesday, October 14, 2026

ನೇತ್ರದಾನದ ಮಹತ್ವದ ಕುರಿತು ಪ್ರಬಂಧ ಸ್ಪರ್ಧೆ: ಫ್ರೆಂಡ್ಸ್ ಸೆಂಟರ್‌ನಿಂದ ಆಹ್ವಾನ

Date:

ಫ್ರೆಂಡ್ಸ್ ಸೆಂಟರ್ ನೇತ್ರ ಮತ್ತು ರಕ್ತ ಭಂಡಾರ (ರಿ.) ಸಂಸ್ಥೆಯು 60 ವರ್ಷಗಳ ಸೇವಾ ಸಂಭ್ರಮದ ಅಂಗವಾಗಿ ಸಾರ್ವಜನಿಕರಿಗಾಗಿ ‘ನೇತ್ರದಾನದ ಮಹತ್ವ ಮತ್ತು ಅರಿವು’ ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ.

ಕಳೆದ ಆರು ದಶಕಗಳಿಂದ ವಿವಿಧ ಸೇವಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಯು ನೇತ್ರದಾನದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಹಮ್ಮಿಕೊಂಡಿದೆ.

ಪ್ರಬಂಧವು ಎ4 ಅಳತೆಯ ಎರಡು ಪುಟಗಳ ಮಿತಿಯೊಳಗಿರಬೇಕು. ಸ್ಪರ್ಧೆಯಲ್ಲಿ ಅತ್ಯುತ್ತಮವಾಗಿ ಆಯ್ಕೆಯಾಗುವ ಮೂರು ಪ್ರಬಂಧಗಳಿಗೆ ನಗದು ಬಹುಮಾನ ನೀಡಲಾಗುವುದು.

ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಪ್ರಬಂಧವನ್ನು ಅಕ್ಟೋಬರ್ 30, 2026ರೊಳಗೆ ಅಂಚೆ ಮೂಲಕ ಕಳುಹಿಸಬೇಕು.

ಪ್ರಬಂಧಗಳನ್ನು ಅಧ್ಯಕ್ಷರು, ಫ್ರೆಂಡ್ಸ್ ಸೆಂಟರ್ ನೇತ್ರ ಮತ್ತು ರಕ್ತ ಭಂಡಾರ, 100 ಅಡಿ ರಸ್ತೆ, ಗೋಪಾಲಗೌಡ ಬಡಾವಣೆ, ಶಿವಮೊಗ್ಗ ಈ ವಿಳಾಸಕ್ಕೆ ಕಳುಹಿಸಿಕೊಡಬೇಕು.

ಹೆಚ್ಚಿನ ಮಾಹಿತಿಗಾಗಿ 8217429502 ಅಥವಾ 9448463175 ಸಂಪರ್ಕಿಸಬಹುದು ಎಂದು ಸಂಸ್ಥೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಾನೂರ್ ಹಾಗೂ ಆಡಳಿತಾಧಿಕಾರಿ ನಾಗರಾಜ್ ವಿ. ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Mysuru Dasara ದಸರಾ ಪುಸ್ತಕ ಮೇಳ: ಪುಸ್ತಕಗಳ ವೀಕ್ಷಿಸಿದ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ

Mysuru Dasara ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ರ ಉದ್ಘಾಟನೆಮಾಡಿದ...

Mysuru Dasara ಮೈಸೂರು ದಸರಾ ವಿದ್ಯುತ್ ದೀಪಾಲಂಕಾರಕ್ಕೆ ಸಚಿವ ಜಾರ್ಜ್ ಚಾಲನೆ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ವಿದ್ಯುತ್‌ ದೀಪಾಲಂಕಾರಕ್ಕೆ...