Tuesday, October 13, 2026
Tuesday, October 13, 2026

ಕವಿ ಮತ್ತು ಗಾಯಕರಲ್ಲದೇ ಹಾಡುಗಳನ್ನ ಆಸ್ವಾದಿಸುವ ಕಲಾರಸಿಕರೂ ಮುಖ್ಯ- ಕಾ.ವೆ.ಶ್ರೀನಿವಾಸಮೂರ್ತಿ

Date:

ಸುಗಮ ಸಂಗೀತ ಕ್ಷೇತ್ರದಲ್ಲಿ ಕವಿ, ಗಾಯಕ ಮತ್ತು ಕಲಾರಸಿಕರು ಪ್ರಮುಖ ಪಾತ್ರ ವಹಿಸುತ್ತಾರೆ. ಕವಿ ರಚಿಸುವ ಉತ್ತಮ ಗೀತೆಗಳಿಗೆ ಗಾಯಕರು ರಾಗ ಸಂಯೋಜನೆಯ ಮೂಲಕ ಜೀವ ತುಂಬಿದರೆ, ಕಲಾರಸಿಕರು ಅವುಗಳನ್ನು ಆಸ್ವಾದಿಸಿ ಯಶಸ್ವಿಗೊಳಿಸುತ್ತಾರೆ ಎಂದು ಪ್ರಖ್ಯಾತ ಕವಿ ಡಾ. ಕಾವ್ಯಂ ಶ್ರೀನಿವಾಸಮೂರ್ತಿ ಹೇಳಿದರು.

ಶಾಂತಿ ಸಾಗರ ಕಲಾ ಸಂಘ (ರಿ), ಹಾಗೂ ಎಸ್‌.ಎಸ್. ಕರೋಕೆ ಗ್ರೂಪ್ ಇವರ ಸಹಯೋಗದಲ್ಲಿ ಮಧುರ ಸಭಾಂಗಣದಲ್ಲಿ ಆಯೋಜಿಸಿದ್ದ ‘ಕಾ.ವೆಂ. ಶ್ರೀ ಕಾವ್ಯ ಸೌರಭ’ ಎಂಬ ಡಾ. ಕಾ.ವೆಂ. ಶ್ರೀನಿವಾಸಮೂರ್ತಿ ವಿರಚಿತ ಭಾವಗೀತೆ, ಕನ್ನಡಪರ ಗೀತೆ ಮತ್ತು ಜನಪರ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ನಾಡಿನಾದ್ಯಂತ ಅನೇಕ ಗಾಯಕರು ವಿವಿಧ ಕವಿಗಳ ಗೀತೆಗಳಿಗೆ ರಾಗ ಸಂಯೋಜಿಸಿ ಹಾಡುವ ಮೂಲಕ ಜನಮನ ರಂಜಿಸುತ್ತಿರುವುದು ಸಂತಸದ ಸಂಗತಿ. ಕವಿ ಮತ್ತು ಗಾಯಕರು ಮಾತ್ರವಲ್ಲದೆ, ಹಾಡುಗಳನ್ನು ಆಸ್ವಾದಿಸುವ ಕಲಾರಸಿಕರೂ ಸಂಗೀತ ಕ್ಷೇತ್ರಕ್ಕೆ ಅತ್ಯಗತ್ಯ. ಈ ನಿಟ್ಟಿನಲ್ಲಿ ಆಯೋಜಿಸಿರುವ ಕಾರ್ಯಕ್ರಮ ವೈಯಕ್ತಿಕವಾಗಿ ತಮಗೆ ಸಂಪೂರ್ಣ ತೃಪ್ತಿ ನೀಡಿದೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ l ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷರಾದ ಜಿ. ವಿಜಯ್ ಕುಮಾರ್ ಮಾತನಾಡಿ, ಶಿವಮೊಗ್ಗ ಸಾಂಸ್ಕೃತಿಕ ಕೇಂದ್ರವಾಗಿದ್ದು, ಇಲ್ಲಿ ಪ್ರತಿನಿತ್ಯ ಒಂದಲ್ಲೊಂದು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುವುದು ನಗರದ ಹೆಮ್ಮೆಯ ಸಂಗತಿಯಾಗಿದೆ. ಹಾಗೂ 500 ಕ್ಕೂ ಹೆಚ್ಚು ಕವಿತೆಗಳನ್ನು ರಚಿಸಿ, ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಜನರ ಅಪಾರ ಮೆಚ್ಚುಗೆ ಗಳಿಸಿದ ಕಾವ್ಯಂ ಶ್ರೀನಿವಾಸಮೂರ್ತಿ ಅವರ ಸಾಧನೆ ವಿಶೇಷವಾದದ್ದು ಎಂದ ಅವರು, ತಮ್ಮಲ್ಲಿ ಗಾಯನದ ಅಭಿರುಚಿ ಮೂಡಲು ಪ್ರೇರಣೆ ನೀಡಿದ ಅನೇಕ ಕವಿಗಳನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.

ಕಾರ್ಯಕ್ರಮದ ಆಯೋಜಕರಾದ ಎಸ್.ಎಸ್. ಕರೋಕೆ ಗ್ರೂಪ್ ನ ಮಥುರಾ ನಾಗರಾಜ ಮಾತನಾಡಿ, ಶಿವಮೊಗ್ಗದ ಜನತೆಯ ಕೋರಿಕೆಯ ಮೇರೆಗೆ ಈ ಕರೋಕೆ ಕಾರ್ಯಕ್ರಮವನ್ನು ಆಯೋಜಿಸಿರುವುದು ಸಂತಸ ತಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಎಂ.ಎನ್. ಸುಂದರ್ ರಾಜ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್, ಸುಗಮ ಸಂಗೀತ ಪರಿಷತ್ತಿನ ಶೋಭಾ ಸತೀಶ್ ಹಾಗೂ ಗಾಯಕ ಹೆಚ್. ಎರ್ರಿಸ್ವಾಮಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಕಲಾವಿದರು ಕಾ.ವೆಂ. ಅವರ ಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಕಾರ್ಯಕ್ರಮ ನಿರ್ವಹಣೆಯನ್ನು ಕರ್ನಾಟಕ ಸುಗಮ ಸಂಗೀತ ಪರಿಷತ್ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷೆ ಶಾಂತಾ ಎಸ್. ಶೆಟ್ಟಿ ಅಚ್ಚುಕಟ್ಟಾಗಿ ನಿರೂಪಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Mysuru Dasara ಮೈಸೂರು ದಸರಾ ವಿದ್ಯುತ್ ದೀಪಾಲಂಕಾರಕ್ಕೆ ಸಚಿವ ಜಾರ್ಜ್ ಚಾಲನೆ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ವಿದ್ಯುತ್‌ ದೀಪಾಲಂಕಾರಕ್ಕೆ...

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...