Sunday, October 4, 2026
Sunday, October 4, 2026

ರಂಗದಸರಾ-2026ರ ಪ್ರಯುಕ್ತ ಜಿಲ್ಲಾ ಮಟ್ಟದ ಏಕಪಾತ್ರಾಭಿನಯ ಸ್ಪರ್ಧೆ ಕಾರ್ಯಕ್ರಮ

Date:

ಶಿವಮೊಗ್ಗ ಮಹಾನಗರ ಪಾಲಿಕೆಯು ದಸರಾ-2026ರ ಪ್ರಯುಕ್ತ ರಂಗ ದಸರಾ-2026ರ ಅಡಿಯಲ್ಲಿ 15 ವರ್ಷದೊಳಗಿನ ಮಕ್ಕಳಿಗೆ ಡ್ರಾಮಾ ಜ್ಯೂನಿಯರ್ಸ್ ಹಾಗೂ 15 ವರ್ಷದ ಮೇಲ್ಪಟ್ಟವರಿಗೆ ಡ್ರಾಮಾ ಸೀನಿಯರ್ಸ್ ಎಂಬ ಜಿಲ್ಲಾ ಮಟ್ಟದ ‘ಏಕಪಾತ್ರಾಭಿನಯ ಸ್ಪರ್ಧೆ’ ಯನ್ನು ಆಯೋಜಿಸುತ್ತಿದೆ.
ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಾರ್ವಜನಿಕರು ವಿವಾದಾದತ್ಮಕ ವಿಚಾರ ಅಥವಾ ಸಮಾಜದ ಶಾಂತಿಗೆ ಭಂಗ ತರುವ ವಿಚಾರಗಳನ್ನು ಹೊರತುಪಡಿಸಿ, ಯಾವುದೇ ಪ್ರಕಾರದ ವಿಷಯಕ್ಕೆ ಸಂಬಂಧಿಸಿದಂತೆ ಅಭಿನಯವನ್ನು 3 ರಿಂದ 4 ನಿಮಿಷ ಅವಧಿಯಲ್ಲಿ ಅಭಿನಯಿಸಬೇಕು. ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ ಅ.11 ರಂದು ಮಧ್ಯಾಹ್ನ 2 ಕ್ಕೆ ಪ್ರದರ್ಶನ ಆಯೋಜಿಸಲಾಗಿದೆ.
ಸ್ಪರ್ಧೆಯಲ್ಲಿ ವಿಜೇತರಾದ ಡ್ರಾಮಾ ಜ್ಯೂನಿಯರ್ಸ್ ಗೆ ಪ್ರಥಮ-4,000/-, ದ್ವಿತೀಯ-3,000/- ಹಾಗೂ ತೃತೀಯ-2,000/- ಮತ್ತು ಡ್ರಾಮಾ ಸೀನಿಯರ್ಸ್ ಗೆ ಪ್ರಥಮ-5,000/-, ದ್ವಿತೀಯ-4,000/- ಹಾಗೂ ತೃತೀಯ-3,000/-ರೂ. ಗಳ ನಗದು ಬಹುಮಾನವನ್ನು ರಂಗ ದಸರಾ ಸಮಿತಿಯಿಂದ ಅ.19 ರಂದು 11.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ನೀಡಲಾಗುವುದು.
ಆಸಕ್ತರು ತಮ್ಮ ಹೆಸರನ್ನು ಅ. 10 ರೊಳಗಾಗಿ ಸದಸ್ಯ ಕಾರ್ಯದರ್ಶಿಗಳು, ರಂಗ ದಸರಾ ಸಮಿತಿ, ಮಹಾನಗರ ಪಾಲಿಕೆ ಕಚೇರಿಯಲ್ಲಿ ನೋಂದಾಯಿಸಿಕೊಳ್ಳುವುದು.
ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣೆಗಾಗಿ ದೂ.ಸಂ.: 9591484269/ 8310425195/ 8296299126/9448138183 ಗಳನ್ನು ಸಂಪರ್ಕಿಸುವಂತೆ ಶಿವಮೊಗ್ಗ ದಸರಾ ಮಹೋತ್ಸವ-ರಂಗ ದಸರಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಮರೆಯಲಾಗದ ಮಹಾಶಯರು

Klive Special Article ಜೀವನದಲ್ಲಿ ವ್ಯಕ್ತಿಗಳು ಬಹಳ ನಮ್ಮ ಒಳಿತಿಗೆ...