Sunday, October 4, 2026
Sunday, October 4, 2026

ಖಾರಿಫ್ ಬರ ಪರಿಸ್ಥಿತಿ ಅಧ್ಯಯನ: ರಾಜ್ಯಕ್ಕೆ ಕೇಂದ್ರದ ಅಧಿಕಾರಿಗಳ ತಂಡ ಭೇಟಿ

Date:

ರಾಜ್ಯದಲ್ಲಿ ಉಂಟಾಗಿರುವ ಖಾರಿಫ್ ಬರದ ಪರಿಸ್ಥಿತಿಯನ್ನು ಪ್ರತ್ಯಕ್ಷವಾಗಿ ಪರಿಶೀಲಿಸಲು ಮತ್ತು ಅಧ್ಯಯನ ನಡೆಸಲು ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳ ಉನ್ನತ ಮಟ್ಟದ ಅಧಿಕಾರಿಗಳ ತಂಡವು (ಐಎಂಸಿಟಿ) ಅಕ್ಟೋಬರ್ 3 ರಿಂದ ಅಕ್ಟೋಬರ್ 6 ರವರೆಗೆ ನಾಲ್ಕು ದಿನಗಳ ಕಾಲ ಕರ್ನಾಟಕಕ್ಕೆ ಭೇಟಿ ನೀಡಲಿದೆ.

​ಅಧಿಕಾರಿಗಳ ಈ ತಂಡವನ್ನು ಒಟ್ಟು ಮೂರು ವಿಭಾಗಗಳಾಗಿ, ತಂಡ 1, ತಂಡ 2 ಮತ್ತು ತಂಡ 3 ಎಂದು ವಿಂಗಡಿಸಲಾಗಿದ್ದು, ಈ ತಂಡಗಳು ಬರ ಪೀಡಿತ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಪರಿಸ್ಥಿತಿಯನ್ನು ಅವಲೋಕಿಸಲಿವೆ.

​ತಂಡ 1 (ಟೀಮ್ 1):

ಜಂಟಿ ಕಾರ್ಯದರ್ಶಿ ಶ್ರೀ ಅಜೀತ್ ಕುಮಾರ್ ಸಾಹು ಅವರ ನೇತೃತ್ವದ ಈ ತಂಡದಲ್ಲಿ ಉಪ ನಿರ್ದೇಶಕ ಶ್ರೀ ಚೇತ್ ರಾಮ್ ಮೀನಾ (ತಂಡದ ಸಂಯೋಜಕರು), ವಿಶೇಷ ಅಧಿಕಾರಿ (ಐ ಎಸ್ ಡಿ ) ಕರ್ನಲ್ ಅಮರೀಂದರ್ ಸಿಂಗ್ ಮತ್ತು ನಿರ್ದೇಶಕ ಡಾ. ಜೆ. ಹರ್ಷ ಸದಸ್ಯರಾಗಿದ್ದಾರೆ. ಈ ತಂಡವು ತುಮಕೂರು, ಚಿತ್ರದುರ್ಗ, ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಪ್ರವಾಸ ನಡೆಸಿ ಪರಿಶೀಲನೆ ನಡೆಸಲಿದೆ.

ತಂಡ 2 (ಟೀಮ್ 2):

ಸಹಾಯಕ ಆಯುಕ್ತರಾದ ಡಾ. ಸುದಮ್ ಬಾಗ್ ಅವರ ನೇತೃತ್ವದ ತಂಡದಲ್ಲಿ ಸಹಾಯಕ ಸಲಹೆಗಾರರಾದ ಶ್ರೀ ಆಶಿಶ್ ಪಾಂಡೆ, ಅಧೀನ ಕಾರ್ಯದರ್ಶಿ ಶ್ರೀ ಪ್ರದೀಪ್ ಕುಮಾರ್ ಮತ್ತು ಉಪ ನಿರ್ದೇಶಕ ಶ್ರೀ ಕರಣ್ ಚೌಧರಿ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ತಂಡವು ಹಾಸನ, ಮೈಸೂರು, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಲಿದೆ.

​ತಂಡ 3 (ಟೀಮ್ 3):

ನಿರ್ದೇಶಕ ಡಾ. ಮನ್ ಸಿಂಗ್ ಅವರ ನೇತೃತ್ವದ ಮೂರನೇ ತಂಡದಲ್ಲಿ ಅಧೀನ ಕಾರ್ಯದರ್ಶಿ ಶ್ರೀ ಪಾರ್ಥ ಪಾಲ್ ಹಾಗೂ ಅಧೀನ ಕಾರ್ಯದರ್ಶಿ ಶ್ರೀ ರಾಕೇಶ್ ಕುಮಾರ್ ಸದಸ್ಯರಾಗಿದ್ದಾರೆ. ಈ ತಂಡವು ಯಾದಗಿರಿ, ರಾಯಚೂರು, ಬಾಗಲಕೋಟೆ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಖಾರಿಫ್ ಬರದ ತೀವ್ರತೆ ಮತ್ತು ಹಾನಿಯ ಕುರಿತು ಪರಿಶೀಲಿಸಲಿದೆ.

​ಈ ಭೇಟಿಯ ನಂತರ ಕೇಂದ್ರ ತಂಡವು ರಾಜ್ಯದ ಬೆಳೆ ಹಾನಿ ಮತ್ತು ರೈತರ ಸಂಕಷ್ಟದ ಕುರಿತು ಕೇಂದ್ರ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಮರೆಯಲಾಗದ ಮಹಾಶಯರು

Klive Special Article ಜೀವನದಲ್ಲಿ ವ್ಯಕ್ತಿಗಳು ಬಹಳ ನಮ್ಮ ಒಳಿತಿಗೆ...