Friday, October 2, 2026
Friday, October 2, 2026

ಸರ್ವ ಧರ್ಮ ಸಮನ್ವಯ ಗಣಪನಿಗೆ ವಿಶೇಷ ಪೂಜೆ

Date:

ಶಿವಮೊಗ್ಗ ನಗರದ ಸ್ಟೈಲ್ ಡ್ಯಾನ್ಸ್ ಕ್ರೀವ್ ಸಂಸ್ಥೆಯ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಸಹ ಸರ್ವ ಧರ್ಮ ಸಮನ್ವಯ ಗಣಪನನ್ನು ಪ್ರತಿಷ್ಠಾಪಿಸಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂಬ ಬೇಧ-ಭಾವ ಇಲ್ಲದೇ ಎಲ್ಲಾ ಧಮ೯ದ ಮಕ್ಕಳು ಸೇರಿಕೊಂಡು ನೃತ್ಯ ತರಗತಿಯಲ್ಲಿ 21 ದಿನಗಳ ಕಾಲ ಯಶಸ್ವಿಯಾಗಿ ಪ್ರತಿಷ್ಟಾಪಿಸಿ ಭಕ್ತಿಯಿಂದ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಶಶಿಕುಮಾರ್, ಡ್ಯಾನ್ಸ್ ಕಲಿಯಲು ಎಲ್ಲಾ ವಗ೯ದ ಮಕ್ಕಳು ಬರುವರು ಹಾಗಾಗಿ ಎಲ್ಲೂ ಕೂಡ ಯಾರ ಭಾವನೆಗಳಿಗೂ ಧಕ್ಕೆ ಬರದ೦ತೆ ಬರುವ ವಿದ್ಯಾರ್ಥಿಗಳಿಗೆ ಪ್ರತಿಯೊಂದು ಧಮ೯ದ ಹಬ್ಬಗಳನ್ನು ಸರ್ವ ಧರ್ಮ ಸಮನ್ವಯ ಎ೦ಬ ವಿಷಯವಾಗಿ ಅಳವಡಿಸಿ ವಿಶೇಷ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಮಕ್ಕಳಿಗೆ ಭಾರತೀಯ ಸ೦ಸ್ಕೃತಿ ಸಂದೇಶ ನೀಡಲಾಗುತ್ತಿದೆ ಎಂದರು.

ಪ್ರಪಂಚದಲ್ಲಿನ ಪ್ರತಿಯೊಂದು ಧರ್ಮವೂ ತನ್ನದೇ ಆದ ವಿಶಿಷ್ಟ ಮೌಲ್ಯಗಳನ್ನು ಮತ್ತು ಕೊಡುಗೆಗಳನ್ನು ನೀಡುತ್ತಾ ಇದೆ. ಒಂದು ಧರ್ಮಕ್ಕಿಂತ ಇನ್ನೊಂದು ಧರ್ಮ ಶ್ರೇಷ್ಠವಲ್ಲ ಎಲ್ಲಾ ಧಮ೯ದ ವಿಷಯ ಒ೦ದೇ ಬಾಷೆ ವಿಧಾನ ಬೇರೆಯಷ್ಟೆ . ನಾವು ನಮ್ಮ ಧರ್ಮವನ್ನು ಹೊರತುಪಡಿಸಿ ಇನ್ನೊಂದು ಧರ್ಮದವರು ನಂಬುವ ನಂಬಿಕೆಗಳನ್ನು ಗೌರವಿಸಬೇಕು ಹಾಗೆ ನಮ್ಮ ಧಮ೯ವನ್ನು ಪ್ರೀತಿಸಬೇಕು ಇತರೆ ಧರ್ಮವನ್ನು ಗೌರವಿಸಬೇಕು ಎ೦ಬ ತತ್ವ ಸಿದ್ದಾ೦ತವನ್ನು ನೃತ್ಯದ ಮೂಲಕ ಇ೦ದಿನ ಮಕ್ಕಳಿಕೆ ಮತ್ತು ಸಮಾಜಕ್ಕೆ ಸಾರುತ್ತಿರುವ ಏಕೈಕ ನೃತ್ಯ ಸ೦ಸ್ಥೆ ಶಿವಮೊಗ್ಗದ ಪ್ರತಿಷ್ಟಿತ ನೃತ್ಯ ಸ೦ಸ್ಥೆ ಸ್ಟೈಲ್ ಡಾನ್ಸ್ ಕ್ರಿವ್ ಸ೦ಸ್ಥೆ .

ಗಾ೦ಧಿಜಯ೦ತಿಯ ವಿಶೇಷ ದಿನದ೦ದು ರಾಷ್ಟ್ರಧ್ವಜ ಮತ್ತು ನಾಡಧ್ವಜ ಹಿಡಿದು ಸೀನಪ್ಪಶೆಟ್ಟಿ ವೃತ್ತದ ಮೂಲಕ ಮೆರವಣಿಗೆ ಸಾಗಿ , ಹೊಳೆ ಬಸ್ಟಾಪ್ ಮ೦ಟಪದ ಬಳಿ ಗಣಪನ ವಿಸರ್ಜನಾ ಮೆರವಣಿಗೆ ಸಾಗಲಿದೆ ಎ೦ದು ತಿಳಿಸಿದರು .

ಸ್ಟೈಲ್ ಡ್ಯಾನ್ಸ್ ಕ್ರೀವ್ ಸಂಸ್ಥೆಯ ಕಾರ್ಯಕ್ರಮದಲ್ಲಿ ನೃತ್ಯ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

JCI Shivamogga ಕುಟುಂಬ ಮಿಲನದಿಂದ ಬಾಂಧವ್ಯ ವೃದ್ಧಿ, ಪ್ರತಿಭೆ ಅನಾವರಣ: ವಿಜಯಲಕ್ಷ್ಮಿ ಕಡಂಬ

JCI Shivamogga ಜೆಸಿಐ ಶಿವಮೊಗ್ಗ ವಿವೇಕ್ ಸಂಸ್ಥೆಯ ವತಿಯಿಂದ ಸ್ನೇಹ ಮಿಲನ...

B.Y. Raghavendra ಮಾನವ ದೀರ್ಘಕಾಲ ಸಮತೋಲನದಿಂದ ಬದುಲು ಆಯುರ್ವೇದ ಸಹಕಾರಿ : ಬಿ.ವೈ.ರಾಘವೇಂದ್ರ

B.Y. Raghavendra ಆಯುರ್ವೇದ ಭಾರತದ ಅತ್ಯಂತ ಪ್ರಾಚೀನ ಮತ್ತು ಸಾಂಪ್ರದಾಯಿಕ ವೈದ್ಯಕೀಯ...

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...