ಜೆಸಿಐ ಶಿವಮೊಗ್ಗ ರಾಯಲ್ಸ್ ಘಟಕದ ವತಿಯಿಂದ ಸಾರ್ವಜನಿಕರಲ್ಲಿ ಸಂಚಾರ ನಿಯಮಗಳು ಹಾಗೂ ರಸ್ತೆ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಸ್ವಾಗತ ಫಲಕವನ್ನು ಅಳವಡಿಸಲಾಯಿತು. ಫಲಕದಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದು, ಕಾರಿನಲ್ಲಿ ಸೀಟ್ಬೆಲ್ಟ್ ಕಡ್ಡಾಯವಾಗಿ ಬಳಸುವುದು, ಸಂಚಾರ ಸಂಕೇತಗಳನ್ನು ಪಾಲಿಸುವುದು, ವಾಹನ ಚಲಾಯಿಸುವಾಗ ಮೊಬೈಲ್ಫೋನ್ ಬಳಸದಿರುವುದು, ವೇಗದ ಮಿತಿಯನ್ನು ಕಾಪಾಡುವುದು ಹಾಗೂ ಪಾದಚಾರಿಗಳಿಗೆ ಆದ್ಯತೆ ನೀಡುವ ಕುರಿತು ಮಹತ್ವದ ಸುರಕ್ಷತಾ ಸಂದೇಶಗಳನ್ನು ನೀಡಲಾಗಿದೆ.
ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಜೆಸಿಐ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷರು ಆದ ಭರತ್ ಎನ್ ಆಚಾರ್ಯ ಸರ್ ಅವರು ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ರಸ್ತೆ ಸುರಕ್ಷತೆ ಹಾಗೂ ಜವಾಬ್ದಾರಿಯುತ ವಾಹನ ಚಾಲನೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜೆಸಿಐ ಶಿವಮೊಗ್ಗ ರಾಯಲ್ಸ್ನ ಕಾರ್ಯವನ್ನು ಶ್ಲಾಘಿಸಿದರು. ಸಾರ್ವಜನಿಕರ ಸುರಕ್ಷತೆಗಾಗಿ ಇಂತಹ ಜಾಗೃತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ವಲಯದ ಅಧ್ಯಕ್ಷರಾದ ಜೆ ಎಫ್ ಎಸ್ ಮಧುಸೂದನ್ ನಾವಡ, ಟೂರ್ ಕೋಆರ್ಡಿನೇಟರ್ ಆದಂತಹ ಜೆ ಸಿ ಅಭಿಜಿತ್ ಹಿರಿಯ, ವಲಯ ಉಪಾಧ್ಯಕ್ಷರಾದ ಜೆ ಎಫ್ ಎಸ್ ಆದರ್ಶ ಸರಾಫ್, ಘಟಕದ ಸಂಸ್ಥಾಪಕ ಅಧ್ಯಕ್ಷರಾದ ಜೆ ಎಫ್ ಎಸ್ ಸುದರ್ಶನ್ ತಾಯಿಮನೆ, ಅಧ್ಯಕ್ಷರಾದ ಜೆ ಎಫ್ ಡಿ ಗಾನವಿ, ಕಾರ್ಯದರ್ಶಿಗಳಾದ ಜೆಸಿ ತೇಜಸ್ವಿನಿ, ಜೆ ಎಫ್ ಡಿ ಸ್ಮಿತಾ ಮೋಹನ್, ಜೇಸಿ ಶ್ವೇತಾ, ಜೇಸಿ ಚೈತ್ರ, ಜೆ ಎಫ್ ಡಿ ಮೋಹನ್ ಕಲ್ಪತರು, ಜೇಸಿ ನಿರ್ಮಲ, ಜೆ ಸಿ ನೇತ್ರಾವತಿ, ಜೇಸಿ ಹೇಮಲತಾ, ಜೇಸಿ ಪೂರ್ಣಿಮಾ, ಜೇಸಿ ಬಸವರಾಜ್ ಮತ್ತು ಜೆಸಿಐ ಶಿವಮೊಗ್ಗ ರಾಯಲ್ಸ್ ಘಟಕದ ಸದಸ್ಯರು ಮತ್ತು ವಲಯ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
