Saturday, August 29, 2026
Saturday, August 29, 2026

Klive Special Article ಕರೆದರೆ ಬರಬಾರದೆ?ಶ್ರೀರಾಯರ ಆರಾಧನಾ ವಿಶೇಷ ಲೇಖನ.ಕರ್ತೃ: ಎನ್.ಜಯಭೀಮ ಜೊಯ್ಸ್, ಶಿವಮೊಗ್ಗ.

Date:

Klive Special Article “ಕರೆದರೆ ಬರಬಾರದೇ ಗುರು ರಾಘವೇಂದ್ರ/
ವರ ಮಂತ್ರಾಲಯ ಪುರ ಮಂದಿರ ತವ
ಚರಣ ಸೇವಕರು ಕರವ ಮುಗಿದು.”//
ಇದು ರಾಯರ ಮೇಲೆ “ಕಮಲೇಶ ವಿಠಲ” ಅಂಕಿತ
ದಿಂದ ಅಲಂಕೃತರಾದ ಹರಿದಾಸರಾದ ಸುರಪುರದ
ಆನಂದ ದಾಸರು ತುಂಗಭದ್ರೆಯ ಪ್ರವಾಹದಿಂದ
ಪಾರಾಗಿ ಬಂದು ಮಂತ್ರಾಲಯದಲ್ಲಿ ಶ್ರೀರಾಯರ
ಬೃಂದಾವನ ದರ್ಶನ ಮಾಡಿದಾಗ ರಚಿಸಿದ ಕೃತಿ.
ಸುರಪುರದ ಆನಂದ ದಾಸರು ಪಂಚಮುಖಿ ಪ್ರಾಣ
ದೇವರ ದರ್ಶನ ಮಾಡಿಕೊಂಡು ಶ್ರೀರಾಯರ ದರ್ಶನಕ್ಕೆ ಮಂತ್ರಾಲಯಕ್ಕೆ ಬರುವಾಗ ದಾರಿಯಲ್ಲಿ ತುಂಗಭದ್ರೆ ತುಂಬಿಹರಿಯುತ್ತಿದ್ದಾಳೆ.ಬೆಳದಿಂಗಳಬೆಳಕುಹರಡಿದೆ.
ಆನಂದದಾಸರು ನದಿಯ ದಡದಲ್ಲಿದ್ದ ಅಂಬಿಗನನ್ನು
ಒತ್ತಾಯಿಸಿ ಹರಿಗೋಲಿನಿಂದ ತುಂಗಭದ್ರೆಯನ್ನು ದಾಟಿಸಲುಒಪ್ಪಿಸಿಹರಿಗೋಲಿನಲ್ಲಿ ಕುಳಿತೇಬಿಟ್ಟರು.
ಹರಿಗೋಲುನದಿಯಮಧ್ಯದಲ್ಲಿಬಂದಿದೆ.ಪ್ರವಾಹಹೆಚ್ಚಾಗಿ ಕ್ಷಣಕ್ಷಣಕ್ಕೂ ನೀರಿನ ಸೆಳವು ಹೆಚ್ಚಿ ಹರಿಗೋಲು ಅಂಬಿಗನಹಿಡಿತತಪ್ಪಿತೇಲುತ್ತಾಹೋಗಿಬಂಡೆಗೆತಾಗಿ
ನಿಲ್ಲುತ್ತದೆ.ಅಂಬಿಗನಿಗೆ ಈಜು ಬರುತ್ತಿದ್ದುದರಿಂದ
ಅವನು ತನ್ನ ಜೀವವನ್ನು ರಕ್ಷಿಸಿಕೊಳ್ಳುತ್ತಾನೆ.ದಾಸರಿಗೆ ಈಜು ಬಾರದ್ದರಿಂದ ಇನ್ನೇನು ನಾನು ತುಂಗಭದ್ರೆಯ
ಪಾಲಾಗುತ್ತೇನೆ,ಮಂತ್ರಾಲಯಪ್ರಭುಗಳೇ ತಮ್ಮನ್ನು
ಕಾಪಾಡಬೇಕುಎಂದುಭಕ್ತಿಯಿಂದರಾಯರನ್ನುಸ್ಮರಿಸಿ
ಶ್ರೀರಾಘವೇಂದ್ರಸ್ತೋತ್ರವನ್ನುಹೇಳಿಕೊಳ್ಳುತ್ತಾ”ಶ್ರೀರಾಘವೇಂದ್ರಾಯನಮಃ”ಎಂದುಜಪವನ್ನೂಮಾಡತೊಡಗಿದರು.ಇಬ್ಬರು ಕಾವಿಧಾರಿಗಳು ನದಿಯ ಪ್ರವಾಹದಲ್ಲಿ
ಈಜಿಕೊಂಡು ಬಂದು ಇವರನ್ನು ಕರೆದುಕೊಂಡುನದಿಯ ದಡವನ್ನುಸೇರಿಸುತ್ತಾರೆ.ದಾಸರಿಗೆಒಬ್ಬರುತನ್ನಹೆಸರು
ರಾಘಪ್ಪಎಂತಲೂ,ಮತ್ತೊಬ್ಬರುವಾದಪ್ಪಎಂತಲೂಹೇಳಿಅದೃಶ್ಯರಾಗುತ್ತಾರೆ.ಮಂತ್ರಾಲಯತಲುಪಿದದಾಸರು
ಗುರುರಾಯರಬೃಂದಾವನದ ಎದುರುನಿಂತುಕೊಂಡು ಆನಂದಭಾಷ್ಪಸುರಿಸುತ್ತಾ”ಕರೆದರೆಬರಬಾರದೇ”ಎಂದುಶ್ರೀರಾಯರಮೇಲೆಆನಂದಪರವಶರಾಗಿಹಾಡುತ್ತಾರೆ.ಆಗಅಲ್ಲಿಗೆದಾಸರಗುರುಗಳಾದಇಭರಾಮಪುರದಶ್ರೀಅಪ್ಪಾವರುಶ್ರೀರಾಯರದರ್ಶನಕ್ಕೆಬರುತ್ತಾರೆ.ಜ್ಞಾನಿಗಳಾದ ಅಪ್ಪಾವರು ದಾಸರನ್ನು ಪ್ರವಾಹದಿಂದ
ಪಾರುಮಾಡಿದವರು ರಾಯರುಮತ್ತು ವಾದೀಂದ್ರರು ಎಂದು ಹೇಳುತ್ತಾರೆ.
ಹೀಗೆರಾಯರುತಮ್ಮನ್ನುನಂಬಿದಭಕ್ತರನ್ನುಹೇಗೆಸಂಕಷ್ಟ
ಗಳಿಂದಕಾಪಾಡುವರು ಎಂಬುದು ತಿಳಿಯುತ್ತದೆ.
“ರಾಯರು,ಗುರುರಾಯರು,ಗುರುರಾಜರು”ಈ ಹೆಸರನ್ನು ಕೇಳಿದರೇನಮ್ಮನರನಾಡಿಗಳೆಲ್ಲಭಕ್ತಿಯಿಂದಕಂಪಿಸುತ್ತವೆ.ಆಹೆಸರನ್ನುನೆನೆದರೆ,ಮನಸ್ಸಿನಲ್ಲಿಒಂದುರೀತಿಯಧೈರ್ಯಮೂಡುತ್ತದೆ.
ಲೋಕದಲ್ಲಿಕೆಲವರುಕೇವಲತಮಗಾಗಿಬದುಕುತ್ತಾರೆ.
.ಇನ್ನು ಕೆಲವರುತಮ್ಮಸಾಧನೆಮರೆತುಕೇವಲ ಸಮಾಜ
ಕ್ಕಾಗಿಬದುಕುತ್ತಾರೆ.ಆದರೆವಿಶಿಷ್ಟವ್ಯಕ್ತಿಗಳುಕೆಲವರುತಮ್ಮ ಸಾಧನೆಯ ಜೊತೆಗೆ ಸಮಾಜಕ್ಕೆ ಒಳಿತನ್ನುಮಾಡುವ ಗುರಿಹೊಂದಿರುತ್ತಾರೆ.ಅಂತಹ ಸಾಧಕರಲ್ಲಿ
ಶ್ರೀರಾಘವೇಂದ್ರಗುರುಸಾರ್ವಭೌಮರು ಅತ್ಯುನ್ನತ
ಶ್ರೇಣಿಯಲ್ಲಿಕಂಡುಬರುತ್ತಾರೆ.ಶ್ರೀರಾಯರುತಾವುಸಾಧನೆಯನ್ನುಮಾಡುವುದಲ್ಲದೇಆಸಾಧನೆಯ ಫಲವನ್ನು ಜಾತಿಭೇದವಿಲ್ಲದೆಎಲ್ಲಾಭಕ್ತಜನರಿಗೆಹಂಚುತ್ತಾತಾವು
ಒಬ್ಬ ನಿಸ್ವಾರ್ಥ ಯೋಗಿಗಳಾಗಿದ್ದಾರೆ.
Klive Special Article ಸನ್ಯಾಸತ್ವವನ್ನು ಸ್ವೀಕರಿಸಿದವರು ಯಾವರೀತಿ ಬದುಕ
ಬೇಕುಯಾವರೀತಿಯಾಗಿಸಮಾಜಮುಖಿಯಾಗಿರಬೇಕೆಂಬುದನ್ನುತಮ್ಮನಡೆನುಡಿಯಲ್ಲಿತೋರಿಸಿಕೊಟ್ಟಮಹಾನು
ಭಾವರು ರಾಯರು.
ಶ್ರೀರಾಯರು ತಮ್ಮ ಭಕ್ತರು ಕಷ್ಟಕಾರ್ಪಣ್ಯಗಳನ್ನು ಪರಿ
ಹರಿಸುವಂತೆ ಕೋರಿ ಶರಣು ಹೋದವರಿಗೆ ಸಂಕಷ್ಟ
ಗಳನ್ನು ಪರಿಹರಿಸಿ ಅನುಗ್ರಹಿಸಿದ್ದಾರೆ.
ಚತುರ್ಮುಖ ಬ್ರಹ್ಮದೇವರಿಂದ ಶಾಪ ಹೊಂದಿ ಭೂಮಿ
ಯಲ್ಲಿಅವತರಿಸಿದಶಂಖುಕರ್ಣರುತಮ್ಮಮೊದಲನೆಯಅವತಾರವಾದ ಪ್ರಹ್ಲಾದಾವತಾರದಲ್ಲಿ,ಪ್ರಹ್ಲಾದರಾಜರು ಬಾಲ್ಯದಲ್ಲಿತನ್ನ ಸ್ನೇಹಿತರಿಗೆ ಭಗವಂತನ ಆರಾಧನೆ ಎಂದರೆ ಕೇವಲ ಪ್ರತಿಮೆಯ ಪೂಜೆಯೊಂದೇ
ಅಲ್ಲ,ಎಲ್ಲಾ ಸಜ್ಜನರ ಒಳಗೆ ಭಗವಂತನನ್ನು
ಕಂಡುಕೊಂಡುಅ ವರಲ್ಲಿಪ್ರೀತಿತೋರಿಸಿ,ಅವರಕಷ್ಟಗಳಿಗೆ ಸ್ಪಂದಿಸಿಸಹಾಯ ಮಾಡುವುದೇನಿಜವಾದ ಭಗವಂತನ ಪೂಜೆ ಎಂದು ತಿಳಿಸುತ್ತಾರೆ.
ಅದರಂತೆ ರಾಯರು ಎಲ್ಲಾ ಭಕ್ತರಲ್ಲೂ ಭಗವಂತನನ್ನು ಕಂಡುಅವರಕಷ್ಟಗಳನ್ನುಪರಿಹರಿಸುತ್ತಾತಮ್ಮಸಾಧನೆಯನ್ನುಪೂರ್ಣಗೊಳಿಸಿಕೊಳ್ಳುತ್ತಿದ್ದಾರೆ.ಎರಡನೆಯಅವತಾರವಾದಬಾಲ್ಹೀಕರಾಜರಾಗಿಕುರುವಂಶದಲ್ಲಿ ಹುಟ್ಟಿ ಭೀಮ
ಸೇನ ದೇವರಿಂದ ಅವರ ಅವತಾರಸಮಾಪ್ತಿಯಾಗುತ್ತದೆ.
ಮೂರನೆಯ ಅವತಾರದಲ್ಲಿವ್ಯಾಸರಾಯರಾಗಿಅವತರಿಸಿ
ವಿಜಯೀಂದ್ರತೀರ್ಥರುಮತ್ತುವಾದಿರಾಜರಂತಹಜ್ಞಾನಿ
ಗಳನ್ನುಲೋಕಕ್ಕೆಕೊಟ್ಟಂತಹಮಹಾತ್ಮರು.ಪುರಂದರ
ದಾಸರುಮತ್ತುಕನಕದಾಸರಂತಹಹರಿದಾಸರತ್ನಗಳಿಗೆ
ಅಂಕಿತವನ್ನುಪ್ರದಾನಮಾಡಿರುವಮಹಾನುಭಾವರು.
ಇನ್ನು ನಾಲ್ಕನೆಯ ಅವತಾರವೇ ಎಲ್ಲರೂ ಭಕ್ತಿಯಿಂದ
ಆರಾಧಿಸುತ್ತಿರುವಶ್ರೀರಾಘವೇಂದ್ರಗುರುಸೌರ್ವ
ಭೌಮರು.
ಈ ಕಲಿಯುಗದಲ್ಲಿ ಶ್ರೀರಾಯರು ತಾವುಸಂಪಾದಿಸಿದ್ದ ಪುಣ್ಯವನ್ನು ಭಕ್ತಕೋಟಿಗೆ ಧಾರೆಯೆರೆಯುತ್ತಿರುವ ಕರುಣಾಮಯಿಗಳು.ರಾಯರುಹುಟ್ಟಿದ್ದುತಮಿಳುನಾಡಿನಭುವನಗಿರಿಯಲ್ಲಿ,ಸಶರೀರರಾಗಿ ಬೃಂದಾವನ ಪ್ರವೇಶ ಮಾಡಿದ್ದುಆಂಧ್ರಪ್ರದೇಶದಮಂತ್ರಾಲಯದಲ್ಲಿ.ದೇಶ
ವಿದೇಶಗಳಲ್ಲಿಅಪಾರಸಂಖ್ಯೆಯಲ್ಲಿಭಕ್ತರನ್ನುಹೊಂದಿರು
ವವರು ರಾಯರು.
ಶ್ರೀರಾಘವೇಂದ್ರತೀರ್ಥರುಅವರವೇದಾಂತಸಾಮ್ರಾಜ್ಯದ
ಪೀಠವನ್ನಲಂಕರಿಸಿದ50ವರ್ಷಗಳ(ಕ್ರಿಶ1621ರಿಂದಕ್ರಿಶ1671)ಅವಧಿಯಲ್ಲಿಬಹಳಷ್ಟುಗ್ರಂಥಗಳನ್ನುರಚಿಸಿದ್ದಾರೆಂದುತಿಳಿದುಬರುತ್ತದೆ
ಶ್ರೀರಾಯರುಅಲಂಕಾರಶಾಸ್ತ್ರ,ಕಾವ್ಯ,ಕವಿತಾ,ನಾಟಕಕಲೆ,,ನ್ಯಾಯ,ವ್ಯಾಕರಣ,ಪೂರ್ವಮೀಮಾಂಸಾ,ವೇದ,ಸ್ಮ್ರುತಿ ಇವುಗಳಲ್ಲಿಪಾರಂಗತರಾಗಿದ್ದರಲ್ಲದೆಸಂಗೀತಶಾಸ್ತ್ರದಲ್ಲೂ
ಪಾರಂಗತರಾಗದ್ದರೆಂದು ಅವರ ಆಪ್ತ ಶಿಷ್ಯರಾಗಿದ್ದ ಅಪ್ಪಣ್ಣಾಚಾರ್ಯರಿಂದ ತಿಳಿದುಬರುತ್ತದೆ.
“ಇಂದು ಎನಗೆ ಗೋವಿಂದ ನಿನ್ನಯ ಪಾದಾರವಿಂದವ
ತೋರೋಮುಕುಂದಇಂದಿರೆರಮಣ”ಎಂಬ ಕೃತಿಯು ರಾಯರಿಗೆ ಕವಿತಾ ರಚನೆಯ ಸಾಮರ್ಥ್ಯ ಮತ್ತು ಸಂಗೀತ ಶಾಸ್ತ್ರದಲ್ಲಿಯ ನಿಪುಣತೆಗೆ ಸಾಕ್ಷಿಯಾಗಿದೆ.
ಶ್ರೀರಾಯರು ಕ್ರಿ.ಶ.1671ರ ವಿರೋಧಿಕೃತ್ ನಾಮ ಸಂವತ್ಸರದ ಶ್ರಾವಣ ಮಾಸದ ಕೃಷ್ಣ ಪಕ್ಷದ ಬಿದಿಗೆಯಂದು ಮಂತ್ರಾಲಯ ಕ್ಷೇತ್ರದಲ್ಲಿ ಸಶರೀರರಾಗಿ ಬೃಂದಾವನ ಪ್ರವೇಶ ಮಾಡಿದರು.ತಮ್ಮ ಆಶ್ರಮ ಶಿಷ್ಯರಾದ ಶ್ರೀಯೋಗೀಂದ್ರತೀರ್ಥರಿಗೆ ತಮ್ಮ ಸನ್ನಿಧಾನ ಯುಕ್ತವಾದ ಪಾದುಕೆಗಳನ್ನು ಶ್ರೀಯೋಗೀಂದ್ರತೀರ್ಥರಿಗೆ
ದಯಪಾಲಿಸಿದರು.ರಾಯರು ಧರಿಸಿದ್ದ ಮೂಲ ಪಾದುಕೆಗಳನ್ನು ಇಂದಿಗೂ ಮಠದಲ್ಲಿ ಸ್ವಾಮಿಗಳು ಸಂಸ್ಥಾನ ಪೂಜೆ ಮಾಡುವಾಗ ನೋಡ ಬಹುದಾಗಿದೆ.
ಶ್ರೀರಾಘವೇಂದ್ರ ಗುರುಸಾರ್ವಭೌಮರು ಬೃಂದಾವನ ಪ್ರವೇಶ ಮಾಡಿದ ಮೇಲೆ ಅನೇಕ ಪವಾಡ ಸದೃಶವಾದ ಮಹಿಮೆಗಳು ನಡೆದಿವೆ ಮತ್ತು ಇಂದಿಗೂ ನಡೆಯುತ್ತಿವೆ.
ಮನುಕುಲದ ಉದ್ಧಾರಕ್ಕೆಂದೇ ಧರೆಯಲ್ಲಿ ಅವತರಿಸಿದ
ಯೋಗೀಶ್ವರರು ಶ್ರೀರಾಯರು.
ಶ್ರೀರಾಯರ ಆರಾಧನೆಯನ್ನು ಶ್ರಾವಣ ಮಾಸದ ಕೃಷ್ಣ ಪಕ್ಷದ ಪ್ರತಿಪದದಿಂದ ತದಿಗೆಯವರೆಗೂ ಮೂರು ದಿನಗಳೂ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.


ಎನ್.ಜಯಭೀಮ್ ಜೊಯ್ಸ್.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಶಿವಮೊಗ್ಗದಿಂದ ಆಂಧ್ರದ ಮಚಿಲಿಪಟ್ಣಂ ಗೆ ವಿಶೇಷ ರೈಲು – ಸಂಸದ ಬಿ.ವೈ‌ರಾಘವೇಂದ್ರ

B.Y. Raghavendra ಶಿವಮೊಗ್ಗ ಜನತೆಗೆ ಮತ್ತೊಂದು ವಿಶೇಷ ಸಿಹಿಸುದ್ದಿ ದೊರೆತಿದ್ದು, ಆಂಧ್ರ...

B.Y. Raghavendra ಕಸ್ತೂರಿ ರಂಗನ್ ವರದಿ ಕರಡು ಜಾರಿ ಬಗ್ಗೆ ಪಕ್ಷದ ಸಭೆಯಲ್ಲಿ ಸುದೀರ್ಘ ಚರ್ಚೆ- ಬಿ.ವೈ.ರಾಘವೇಂದ್ರ

B.Y. Raghavendra ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ...