ಶಿವಮೊಗ್ಗ ನಗರದ ಮಂಥನ ಸಂಸ್ಥೆ ವತಿಯಿಂದ ಇದೇ 29ರ ಶನಿವಾರ ಸಂಜೆ 5:30ಕ್ಕೆ ಪತ್ರಕರ್ತ ಎಂ. ಶ್ರೀನಿವಾಸನ್ ಬರೆದಿರುವ ‘ರಸಾಯಣ’ ಕೃತಿ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಪುಸ್ತಕವನ್ನು ಬಹುಶ್ರುತ ವಿದ್ವಾಂಸರಾದ ಪಾದೇಕಲ್ಲು ವಿಷ್ಣುಭಟ್ಟ ಇವರು ಬಿಡುಗಡೆ ಮಾಡಲಿದ್ದು ನಂತರ ಅವರು ‘ಪೂರಕ ರಾಮಾಯಣ’ ಕುರಿತು ಉಪನ್ಯಾಸ ನೀಡಲಿದ್ದಾರೆ.
ಖ್ಯಾತ ಚಿಂತಕ ಹಾಗೂ ವಾಗ್ಮಿ ಮತ್ತೂರು ಟಿ.ಎನ್. ಸ್ವಾಮಿ ಅವರು ‘ರಸಾಯಣ’ ಕೃತಿಯ ಬಗ್ಗೆ ಮಾತನಾಡಲಿದ್ದು, ಲೇಖಕ ಎಂ. ಶ್ರೀನಿವಾಸನ್ ಉಪಸ್ಥಿತರಿರುವರು.
ನಗರದ ಮಥುರಾ ಹೋಟೆಲ್ ಸಭಾಂಗಣದಲ್ಲಿ ಕಾರ್ಯಕ್ರಮ ಏರ್ಪಾಡಾಗಿದ್ದು, ಆಸಕ್ತರಿಗೆಲ್ಲಾ ಸ್ವಾಗತವಿದೆ.
