Friday, September 11, 2026
Friday, September 11, 2026

Madhu Bangarappa ಸಾಮಾಜಿಕ ಸಾಮರಸ್ಯ, ವೈಜ್ಞಾನಿಕ ಮನೋಭಾವ, ಸಂವಿಧಾನ ಜಾಗೃತಿನಾಯಕತ್ವ ಬೆಳೆಸುವುದೇ ಭಾರತ್ ಜೋಡೋ ಉದ್ದೇಶ : ಮಧು ಬಂಗಾರಪ್ಪ

Date:

Madhu Bangarappa ನಮ್ಮ ದೇಶದ 80ನೇ ಸ್ವಾತಂತ್ರ್ಯೋತ್ಸವವನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿವಮೊಗ್ಗ ಜಿಲ್ಲಾ ಸಂಸ್ಥೆ ವತಿಯಿಂದ ವಿಜೃಂಭಣೆಯಿಂದ ಆಚರಿಸಲಾಯಿತು.

ಜಿಲ್ಲಾ ಸಂಸ್ಥೆಯ ಮುಖ್ಯ ಆಯುಕ್ತರಾದ ಶಕುಂತಲಾ ಚಂದ್ರಶೇಖರ್ ಅವರು ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಅವರು, ತ್ಯಾಗ ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯವನ್ನು ಸ್ವೇಚ್ಛಾಚಾರ ಎಂದು ತಿಳಿದು ಬಳಸಬಾರದು. ಇದು ನಮ್ಮ ದೇಶ ಎಲ್ಲರೂ ಶಾಂತಿ ಸೌಹಾರ್ದಯುತವಾಗಿ ಬದುಕಲು ಬಳಸಬೇಕು. ಸ್ಕೌಟ್ ಮತ್ತು ಗೈಡ್ಸ್ ನ ಪ್ರಮುಖ ಧ್ಯೇಯವು ದೇಶ ಪ್ರೇಮ, ಶಾಂತಿ, ಸೌಹಾರ್ದ ಬದುಕು. ಇದನ್ನೂ ನಮ್ಮ ಸಂಸ್ಥೆಯ ಎಲ್ಲರೂ ಶ್ರದ್ದಾಪೂರ್ವಕವಾಗಿ ಪಾಲಿಸಬೇಕು. ಇದನ್ನು ಜೀವನ ಕ್ರಮವಾಗಿ ಅಳವಡಿಸಿಕೊಂಡಲ್ಲಿ ದೇಶ ಉತ್ತಮ ಪ್ರಗತಿ ಸಾಧಿಸಬಹುದು ಎಂದು ತಿಳಿಸಿದರು.

ಸ್ಥಳೀಯ ಸಂಘಟನಾ ಕಾರ್ಯದರ್ಶಿಯಾದ ರಾಜೇಶ್ ಅವಲಕ್ಕಿ ಯವರು ಪರಿಚಯಿಸುತ್ತಾ, ಇಂದು ಜಿಲ್ಲಾಡಳಿತ ನಡೆಸಿಕೊಡುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯ ರೇಂಜರ್ಸ್ ಮತ್ತು ರೋವರ್ಸ್ ಘಟಕ ಪಥಸಂಚಲನದಲ್ಲಿ ಭಾಗವಹಿಸಲಿದೆ. ಇದು ನಮ್ಮ ಹೆಮ್ಮೆಯ ವಿಷಯ ಎಂದರು.

Madhu Bangarappa ಮಲೆನಾಡು ಓಪನ್ ಗ್ರೂಪ್ಸ್ ಅಲ್ಲದೆ, ಕಸ್ತೂರಿ ಬಾ ಪ್ರೌಢಶಾಲೆ, ಮೇರಿ ಇನ್ ಮ್ಯಾಕ್ಯುಲೇಟ್ ಹಿರಿಯ ಪ್ರಾಥಮಿಕ ಶಾಲೆ, ಆದಿಚುಂಚನಗಿರಿ ಕನ್ನಡ ಮಾಧ್ಯಮ ಶಾಲೆ, ಎ.ಟಿ.ಎನ್.ಸಿ.ಸಿ. ಪ್ರಥಮ ದರ್ಜೆ ಕಾಲೇಜು, ಕಮಲ ನೆಹರು ಸ್ಮಾರಕ ಪ್ರಥಮ ದರ್ಜೆ ಕಾಲೇಜು, ಸಹ್ಯಾದ್ರಿ ಸೈನ್ಸ್ ಕಾಲೇಜು ಮತ್ತು ಸಹ್ಯಾದ್ರಿ ವಾಣಿಜ್ಯ ಕಾಲೇಜುಗಳ ತುಕಡಿಗಳು ಕಮಲ ನೆಹರು ಕಾಲೇಜಿನ ಸಹನ ನೇತೃತ್ವದಲ್ಲಿ ಅಚ್ಚ ಸಂಚಲನದಲ್ಲಿ ಭಾಗವಹಿಸಿದವು.

ಇಷ್ಟು ಬದ್ದವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಸ್ಥೆಯ ಚಂದ್ರಶೇಖರಯ್ಯ, ರೋಟರಿ ಜಿ.ವಿಜಯ್ ಕುಮಾರ್, ಲಕ್ಷ್ಮೀ ಹಾಗೂ ಇನ್ನಿತರ ಪದಾಧಿಕಾರಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S. N. Channabasappa ಶಿವಮೊಗ್ಗದ ವಿವಿಧ ಬಡಾವಣೆಗಳಲ್ಲಿ ಶಾಸಕ ” ಚೆನ್ನಿ” ಅವರಿಂದ ಕಾಮಗಾರಿಗಳಿಗೆ ಭೂಮಿ ಪೂಜೆ

S. N. Channabasappa ಶಿವಮೊಗ್ಗ ನಗರದ ಪ್ರತಿಯೊಂದು ವಾರ್ಡ್ ಹಾಗೂ ಬಡಾವಣೆಗಳಲ್ಲಿ...

Chamber of commerce Shivamogga “ಬೆಂಗಳೂರಿನಾಚೆ ಕೈಗಾರಿಕಾ ಅಭಿವೃದ್ಧಿ” ಗಾಗಿ ಶಿವಮೊಗ್ಗ ನಗರವನ್ನ ಸೇರ್ಪಡಿಸಿ- ಎಸ್.ರುದ್ರೇಗೌಡ

Chamber of commerce Shivamogga ಬೆಂಗಳೂರಿನಾಚೆಗಿನ ಕೈಗಾರಿಕೆಗಳ ಅಭಿವೃದ್ಧಿಗಾಗಿ ಶಿವಮೊಗ್ಗ ನಗರ...