Friday, September 11, 2026
Friday, September 11, 2026

ಶಿವಮೊಗ್ಗ ವಿಮಾನ ನಿಲ್ದಾಣ: ಸಮಗ್ರ ನಿರ್ವಹಣೆ ರಾಜ್ಯ ಸರ್ಕಾರದಿಂದ ಬೇರೆಯವರಿಗೆ ಹಸ್ತಾಂತರ ಮಾಡುವ ಯಾವುದೇ ಪ್ರಸ್ತಾಪವಿಲ್ಲ- ನಂಜಯ್ಯನ ಮಠ್

Date:

: ಶಿವಮೊಗ್ಗ ವಿಮಾನ ನಿಲ್ದಾಣವನ್ನು ಏರ್ಪೋಟ್‌ಅಥಾರಿಟಿಗಾಗಲೀ, ಯಾವುದೇ ಸಂಸ್ಥೆ / ವ್ಯಕ್ತಿಗಾಗಲೀ ಅಥವಾ ನಿಗಧಿಪಡಿಸಿದ ಕಾಲಾವಧಿಗೆ ಸಮಗ್ರ ನಿರ್ವಹಣೆಗಾಗಿ ವಹಿಸಿಕೊಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ನಂಜಯ್ಯನ ಮಠ್‌ಅವರು ಹೇಳಿದರು.
ಅವರು ಇಂದು ನಗರದ ಹೊರವಲಯದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ವಿಮಾನ ನಿಲ್ದಾಣದ ಕಾರ್ಯನಿರ್ವಹಣೆ, ಮಾರ್ಗ ವಿಸ್ತರಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕುರಿತು ಮಾಹಿತಿ ನೀಡಿ ಮಾತನಾಡುತ್ತಿದ್ದರು. ಪ್ರಸ್ತುತ ನಿಗಮವು ವಿಮಾನ ನಿಲ್ದಾಣದ ಯಶಸ್ವಿ ಮತ್ತು ವೃತ್ತಿಪರ ನಿರ್ವಹಣೆಗಾಗಿ ಮಾತ್ರ ಆಸಕ್ತಿ ಅಭಿವ್ಯಕ್ತಿಗಾಗಿ ಟೆಂಡರ್‌ಕರೆದಿದ್ದು, ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದ ಅವರು, ವಿಮಾನ ನಿಲ್ದಾಣದ ವಿವಿಧ ರೀತಿಯ ಕೆಲಸ ನಿರ್ವಹಣೆಗಾಗಿ ಸುಮಾರು 33 ಕಂಪನಿಗಳಿಗೆ ವಹಿಸಿಕೊಡಲಾಗಿದೆ. ಅವುಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಸಂಸ್ಥೆಗಳನ್ನು ಸ್ಥಳೀಯ ಅಧಿಕಾರಿಗಳ ವರದಿಯ ಆಧಾರದ ಮೇಲೆ ಮುಂದುವರೆಸಲಾಗುವುದು. ಕಾರ್ಯನಿರ್ವಹಣೆಯಲ್ಲಿ ವ್ಯತ್ಯಯ ಕಂಡುಬಂದ ಕಂಪನಿಗಳನ್ನು ಕೈಬಿಟ್ಟು ಆಸಕ್ತ ಬೇರೆ ಕಂಪನಿಗಳಿಗೆ ಕೆಲಸದ ನಿರ್ವಹಣೆಯ ಕಾರ್ಯಭಾರವನ್ನು ವಹಿಸಿಕೊಡಲಾಗುವುದು. ಉಳಿದಂತೆ ವಿಮಾನ ನಿಲ್ದಾಣದ ಸಂಪೂರ್ಣ ಮಾಲೀಕತ್ವ ಮತ್ತು ಆಸ್ತಿಯು ರಾಜ್ಯ ಸರ್ಕಾರದ್ದೇ ಆಗಿರುತ್ತದೆ ಎಂದವರು ನುಡಿದರು.
ಮಲೆನಾಡು ಭಾಗದ ವಾಣಿಜ್ಯ ಮತ್ತು ಪ್ರಾದೇಶಿಕ ಸಂಪರ್ಕವನ್ನು ವೃದ್ಧಿಸಲು ನಿಗಮವು ಕೇಂದ್ರ ನಾಗರೀಕ ವಿಮಾನಯಾನ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಅವುಗಳಲ್ಲಿ ಪ್ರಮುಖವಾಗಿ ಶಿವಮೊಗ್ಗದಿಂದ ಮುಂಬಾಯಿ, ಅಹಮದಾಬಾದ್‌, ಕೊಲ್ಲಾಪುರ/ಪುಣೆ ಮತ್ತು ಮೈಸೂರು ಮಾರ್ಗಗಳಾಗಿವೆ. ಈ ವಿಷಯದ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಾಂಸದರೊಂದಿಗೆ ಚರ್ಚಿಸಲಾಗುವುದು. ಕೊಲ್ಲಿ ರಾಷ್ಟ್ರಗಳಲ್ಲಿನ ಯುದ್ಧದ ಕಾರ್ಮೋಡ ವಿಮಾನಯಾನ ಸಂಪರ್ಕದ ವಿಕಾಸಕ್ಕೆ ತೀವ್ರ ಹಿನ್ನೆಡೆಯಾಗಿದೆ ಎಂದ ಅವರು, ಅಕ್ಟೋಬರ್‌ಮಾಹೆಯಿಂದ ಬೆಂಗಳೂರು-ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ ವಿಮಾನಸೇವೆ ಒದಗಿಸಲು ಸ್ಟಾರ್‌ಏರ್‌ಲೈನ್ಸ್‌ಆಸಕ್ತಿ ತೋರಿದೆ. ಅಲ್ಲದೇ ಸ್ಪೈಸ್‌ಜೆಟ್‌ಮತ್ತು ಏರ್‌ಇಂಡಿಯಾ ಸಂಸ್ಥೆಯೊಂದಿಗೆ ವಿಮಾನ ಸಂಚಾರ ಆರಂಭಿಸಲು ಸಮಾಲೋಚನೆ ನಡೆಸಲಾಗುತ್ತಿದೆ. ಇದರಿಂದಾಗಿ ಉದ್ಯಮಿಗಳು, ಪ್ರವಾಸಿಗರು ಮತ್ತು ವಿದ್ಯಾರ್ಥಿಗಳಿಗೆ ರಾಜಧಾನಿಯೊಂದಿಗೆ ಸುಲಭ ಸಂಪರ್ಕ ದೊರೆಯಲಿದೆ ಎಂದವರು ನುಡಿದರು.
• ಮಲೆನಾಡು ಭಾಗದ ಕೈಗಾರಿಕಾ ಮತ್ತು ಪ್ರವಾಸೋದ್ಯಮದ ಅಭಿವೃದ್ಧಿಗೆ ಶಿವಮೊಗ್ಗ ವಿಮಾನ ನಿಲ್ದಾಣವು ಪ್ರಮುಖವಾದುದಾಗಿದೆ. ಪಾಲುದಾರಿಕೆ, ನೂತನ ಮಾರ್ಗಗಳ ವಿಸ್ತರಣೆ ಮತ್ತು ನೈಟ್‌ಲ್ಯಾಂಡಿಂಗ್‌ತಂತ್ರಜ್ಞಾನದ ಅಳವಡಿಕೆಯ ಮೂಲಕ ಅತ್ಯುನ್ನತ ದರ್ಜೆಯ ಸೇವೆ ಮತ್ತು ಸುರಕ್ಷಿತ ಪ್ರಯಾಣವನ್ನು ಒದಗಿಸಲು ನಿಗಮ ಬದ್ದವಾಗಿದೆ. ವಿಮಾನ ನಿಲ್ದಾಣದ ಮಾಲೀಕತ್ವ ಸಂಪೂರ್ಣವಾಗಿ ಸರ್ಕಾರ ಬಳಿಯೇ ಇರಲಿದೆ. – ನಂಜಯ್ಯನ ಮಠ್‌, ಅಧ್ಯಕ್ಷರು, ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ.
ಎಲ್ಲಾ ಹವಾಮಾನಗಳಲ್ಲೂ ಹಾಗೂ ರಾತ್ರಿ ವೇಳೆಯಲ್ಲಿ ವಿಮಾನಗಳ ಸುರಕ್ಷಿತ ಲ್ಯಾಂಡಿಂಗ್‌ಗಾಗಿ ತಾಂತ್ರಿಕ ಸೌಕರ್ಯಗಳನ್ನು ಒದಗಿಸುವ ಕಾರ್ಯ ಪ್ರಗತಿಯಲ್ಲಿದ್ದು, ಶೇ.85ರಷ್ಟು ಪ್ರಗತಿ ಸಾಧಿಸಲಾಗಿದೆ. ಈ ಕಾಮಗಾರಿ ಅಕ್ಟೋಬರ್‌ಎರಡನೇ ವಾರದಲ್ಲಿ ಪೂರ್ಣಗೊಂಡು ಸಾರ್ವಜನಿಕ ಸೇವೆಗೆ ಮುಕ್ತವಾಗಲಿದೆ. ಪ್ರಸ್ತುತ ಸೋಮವಾರ, ಗುರುವಾರ ಮತ್ತು ಶನಿವಾರ ಹೈದರಾಬಾದ್‌, ಶಿವಮೊಗ್ಗದಿಂದ ತಿರುಪತಿಯಿಂದ ಶಿವಮೊಗ್ಗ ಮತ್ತು ಹೈದರಾಬಾದಿಗೆ ವಿಮಾನಗಳ ಹಾರಾಟ ಮುಂದುವರೆದಿದೆ. ಮಂಗಳವಾರ, ಶುಕ್ರವಾರ ಮತ್ತು ಭಾನುವಾರಗಳಂದು ಹೈದರಾಬಾದ್‌ಶಿವಮೊಗ್ಗ, ಗೋವಾ-ಶಿವಮೊಗ್ಗ-ಹೈದರಾಬಾದ್‌ಗೆ ವಿಮಾನಯಾನ ಸೇವೆ ಎಂದಿನಂತೆ ಇರಲಿದೆ ಎಂದವರು ನುಡಿದರು.
ಈ ಸಂದರ್ಭದಲ್ಲಿ ಏರ್ಪೋಡ್‌ಹೆಡ್‌ಕ್ಯಾ.ಶಮಂತ್‌, ವಿದ್ಯಾಧರ್‌ಸಾಲಿಮಠ್‌, ರುದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Chamber of commerce Shivamogga “ಬೆಂಗಳೂರಿನಾಚೆ ಕೈಗಾರಿಕಾ ಅಭಿವೃದ್ಧಿ” ಗಾಗಿ ಶಿವಮೊಗ್ಗ ನಗರವನ್ನ ಸೇರ್ಪಡಿಸಿ- ಎಸ್.ರುದ್ರೇಗೌಡ

Chamber of commerce Shivamogga ಬೆಂಗಳೂರಿನಾಚೆಗಿನ ಕೈಗಾರಿಕೆಗಳ ಅಭಿವೃದ್ಧಿಗಾಗಿ ಶಿವಮೊಗ್ಗ ನಗರ...

Madhu Bangarappa ಸರ್ಕಾರದ ಸೇವೆಗಳನ್ನ ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ “ಪ್ರಜಾಸೇವೆ “ಜಾರಿಗೆ: ಮಧು ಬಂಗಾರಪ್ಪ

Madhu Bangarappa ಜನಸಾಮಾನ್ಯರ ದಿನನಿತ್ಯದ ಸಮಸ್ಯೆ-ಸವಾಲುಗಳಿಗೆ, ದುಃಖ ದುಮ್ಮಾನಗಳಿಗೆ ತ್ವರಿತವಾಗಿ ಸ್ಪಂದಿಸಿ,...