Friday, September 11, 2026
Friday, September 11, 2026

ಸಿಟಿ ಸಹಕಾರ ಬ್ಯಾಂಕಿನ ವ್ಯವಹಾರ ₹ 525 ಕೋಟಿಗೂ ಮೀರಿದೆ. ಈ ವರ್ಷವೂ ಬ್ಯಾಕಿಗೆ ” ಎ” ಶ್ರೇಣಿ ಸಿಕ್ಕಿದೆ : ಅಧ್ಯಕ್ಷ ಕೆ.ರಂಗನಾಥ್

Date:

ಶಿವಮೊಗ್ಗ ನಗರದ ಪ್ರತಿಷ್ಠಿತ ಸಿಟಿ ಕೋಆಪರೇಟಿವ್ ಬ್ಯಾಂಕಿನ 114 ನೇ ವಾರ್ಷಿಕ ಸರ್ವ ಸದಸ್ಯರ ಸಭೆಯು ಬಾಲರಾಜ್ ಅರಸ್ ರಸ್ತೆಯ ಬಂಜಾರ ಕನ್ವೆನ್ಸನ್ ಹಾಲ್ ನಲ್ಲಿ ಯಶಸ್ವಿಯಾಗಿ ನೆರವೇರಿತು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಬ್ಯಾಂಕಿನ ಅಧ್ಯಕ್ಷರಾದ ಶ್ರೀಯುತ ಕೆ. ರಂಗನಾಥ್ ರವರು ಸರ್ವ ಸದಸ್ಯರನ್ನು ಸ್ವಾಗತಿಸಿ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಬ್ಯಾಂಕಿನ ಪ್ರಗತಿಯ ನೋಟವನ್ನು ವಿವರಿಸುತ್ತಾ ಮಾರ್ಚ್ 2026ರ ಅಂತ್ಯಕ್ಕೆ ಬ್ಯಾಂಕಿನ ಒಟ್ಟು ಸದಸ್ಯರ ಸಂಖ್ಯೆ 9996 ಜನ ಇದ್ದು. ರೂ. 418.63 ಲಕ್ಷ ಷೇರು ಬಂಡವಾಳ, ರೂ. 114 ಕೋಟಿ 39 ಲಕ್ಷ ಠೇವಣಿ ಸಂಗ್ರಹಣೆಯಾಗಿದ್ದು, 75 ಕೋಟಿ 96 ಲಕ್ಷ ವಿವಿಧ ಸಾಲಗಳನ್ನು ನೀಡಲಾಗಿರುತ್ತದೆ ಬ್ಯಾಂಕಿನ ಒಟ್ಟು ವ್ಯವಹಾರ 525 ಕೋಟಿಗೂ ಮೀರಿ ನಡೆಯುತ್ತಿದೆ ಎಂದು ಮಾಹಿತಿಯನ್ನು ನೀಡಿದರು. ಬ್ಯಾಂಕಿನ ನಿವ್ವಳ ಎನ್.ಪಿ.ಎ. ಪ್ರಮಾಣ 0.43% ಇದ್ದು, ಪ್ರತಿವರ್ಷದಂತೆ ಈ ವರ್ಷವೂ ಬ್ಯಾಂಕು “ಎ” ಶ್ರೇಣಿಯಲ್ಲಿದೆ ಎಂದು ತಿಳಿಸಿದರು. ಈ ಸಾಲಿನಲ್ಲಿ ಷೇರು ಲಾಭಾಂಶ ಶೇ 10% ನೀಡಲು ಸಭೆಯು ಅನುಮೋದನೆ ನೀಡಿದೆ ಎಂದು ಬ್ಯಾಂಕಿನ ಸಾಧನೆಯನ್ನು ಸಭೆಯಲ್ಲಿ ತಿಳಿಸಿದರು.

ಪ್ರತಿಭಾ ಪುರಸ್ಕಾರ: ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಪದವಿ, ಸ್ನಾತಕೋತ್ತರ ಪದವಿಗಳಲ್ಲಿ ಉತ್ತಮ ಅಂಕ ಅತ್ಯುತ್ತಮ 90% ಶ್ರೇಣಿಯಲ್ಲಿ ತೇರ್ಗಡೆಯಾದ ಸದಸ್ಯರ ಒಟ್ಟು 70 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಬ್ಯಾಂಕಿನಲ್ಲಿ ಸಾಲ ಪಡೆದು ಉತ್ತಮವಾಗಿ ಕಂತು ಪಾವತಿಸುತ್ತಿರುವ ಸದಸ್ಯ ಸಾಲಗಾರರಿಗೂ ಪ್ರತಿ ವರ್ಷದಂತೆ ಈ ವರ್ಷವೂ ಸನ್ಮಾನಿಸಲಾಯಿತು.

ಸನ್ಮಾನ: ಕರ್ನಾಟಕ ಸರ್ಕಾರದಿಂದ “ಸಹಕಾರ ರತ್ನ” ಬಿರುದು ಪಡೆದ ಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷರು, ಸಿಟಿ ಬ್ಯಾಂಕಿನ ನಿರ್ದೇಶಕರಾದ ಶ್ರೀಯುತ ಎಸ್.ಕೆ. ಮರಿಯಪ್ಪನವರಿಗೆ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾಗಿ ಆಯ್ಕೆಯಾಗಿರುವ ಶ್ರೀಯುತ ಎಸ್.ಪಿ. ಶೇಷಾದ್ರಿಯವರಿಗೂ ಸದಸ್ಯರು ಮತ್ತು ಆಡಳಿತ ಮಂಡಳಿ ಪರವಾಗಿ ಸನ್ಮಾನಿಸಲಾಯಿತು.

ಬ್ಯಾಂಕಿನ ಹಿರಿಯ ನಿರ್ದೇಶಕರಾದ ಜಿ ಚಂದ್ರಶೇಖರ್ ನಿರೂಪಿಸಿದರು ಕಾರ್ಯಕ್ರಮದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಸಿ.ಹೊನ್ನಪ್ಪ, ಖಜಾಂಚಿ ಘನಶಾಮ್ ನಿರ್ದೇಶಕರುಗಳಾದ ಉಮಾಶಂಕರ್ ಉಪಾಧ್ಯ, ಜಿ ರಾಜು, ರೇಖಾ ಚಂದ್ರಶೇಖರ್, ಎಂ ರಾಕೇಶ್ ಎಸ್ ಎನ್ ಮಹೇಶ್, ಜಿ ಎಚ್ ಪ್ರೇಮಾ, ಎಸ್ ಡಿ ಪ್ರಸನ್ನ ಕುಮಾರ್, ಬಿ ಲೋಕೇಶ್, ಬಿ ಮಹದೇವ ಲಾಲ್, ಬ್ಯಾಂಕಿನ ಸಿಇಓ ಮನೋಜ್ ಕುಮಾರ್ ,ಸಿಬ್ಬಂದಿಗಳು , ಪಿಗ್ಮಿ ಸಂಗ್ರಾಹಕರು ಉಪಸ್ಥಿತರಿದ್ದರು ಹಾಗೂ ಅತಿ ಹೆಚ್ಚು ಸದಸ್ಯರುಗಳು ಸಭೆಯಲ್ಲಿ ಪಾಲ್ಗೊಂಡು ಬ್ಯಾಂಕಿನ ಮುಂದಿನ ಕಾರ್ಯವೈಕರಿಗೆ ಉತ್ತಮ ಸಲಹೆಗಳನ್ನು ನೀಡಿದರು.
03

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S. N. Channabasappa ಶಿವಮೊಗ್ಗದ ವಿವಿಧ ಬಡಾವಣೆಗಳಲ್ಲಿ ಶಾಸಕ ” ಚೆನ್ನಿ” ಅವರಿಂದ ಕಾಮಗಾರಿಗಳಿಗೆ ಭೂಮಿ ಪೂಜೆ

S. N. Channabasappa ಶಿವಮೊಗ್ಗ ನಗರದ ಪ್ರತಿಯೊಂದು ವಾರ್ಡ್ ಹಾಗೂ ಬಡಾವಣೆಗಳಲ್ಲಿ...

Chamber of commerce Shivamogga “ಬೆಂಗಳೂರಿನಾಚೆ ಕೈಗಾರಿಕಾ ಅಭಿವೃದ್ಧಿ” ಗಾಗಿ ಶಿವಮೊಗ್ಗ ನಗರವನ್ನ ಸೇರ್ಪಡಿಸಿ- ಎಸ್.ರುದ್ರೇಗೌಡ

Chamber of commerce Shivamogga ಬೆಂಗಳೂರಿನಾಚೆಗಿನ ಕೈಗಾರಿಕೆಗಳ ಅಭಿವೃದ್ಧಿಗಾಗಿ ಶಿವಮೊಗ್ಗ ನಗರ...