Friday, September 11, 2026
Friday, September 11, 2026

ರಾಜ್ಯದ ಶೈಕ್ಷಣಿಕ ದ್ವಿಭಾಷಾ ನೀತಿ ಜಾರಿಗೆ. ನಿರ್ಧಾರ ಬದಲಿಸಲು ಶಿವಮೊಗ್ಗ ‘ಅಭಾಸಾಪ’ ಮನವಿ

Date:

ಭಾಷೆಯ ಮೂಲಕ ಮಕ್ಕಳ ಮನಸ್ಸು ಅರಳಬೇಕಾದರೆ ಅರಳುವಿಕೆಗೆ ಪಕ್ಕಾಗಿ ತಾಯಿಭಾಷೆ ಅವಶ್ಯಕ. ಜಗತ್ತಿನ
ಅರಿವು ಮೂಡುವುದು ಮಾತೃಭಾಷೆಯ ಮೂಲಕ. ಶಿಕ್ಷಣದಲ್ಲಿ
ಆದ್ಯತೆ ಮಾತೃಭಾಷೆಗೇ ಇರಬೇಕು. ಆಗ ಮಾತ್ರ ಮಕ್ಕಳ ಮನಸ್ಸು ವಿಕಸನ ಹೊಂದಲು ಸಾಧ್ಯ.
ಪ್ರಸ್ತುತ ಕರ್ನಾಟಕ ಸರ್ಕಾರವು ಜಾರಿಗೆ ತರಲು ಪ್ರಸ್ತಾಪಿಸಿರುವ ದ್ವಿಭಾಷಾ ನೀತಿಯಲ್ಲಿ
ನಮಗೆ ಕನ್ನಡಕ್ಕೆ ನೀಡಿರುವ ಮಹತ್ವ ಮತ್ತು ಆದ್ಯತೆ ಗೋಚರಿಸುತ್ತಿಲ್ಲ.
ತಜ್ಞರ ಅನಿಸಿಕೆ ಪ್ರಕಾರ ಇಂಗ್ಲೀಷ್ ಮತ್ತು ಕನ್ನಡ ಭಾಷೆಗಳು ಮಾತ್ರ ಶಿಕ್ಷಣದ ಮಾಧ್ಯಮವಾಗಿದೆ. ಏಕಕಾಲಕ್ಕೆ ಎರಡೂ ಬೋಧಿಸುವ ಹೊಣೆ ಶಿಕ್ಷಕರ ಮೇಲಿದೆ. ಪ್ರಾಥಮಿಕ ಶಿಕ್ಷಣದಲ್ಲಿ ಒದಗಿಸಿರುವ ಪಠ್ಯಕ್ರಮದಲ್ಲಿ ಇಂಗ್ಲೀಷ್ ಮತ್ತು ಕನ್ನಡ ಪಾಠಗಳಿವೆ. ಇಂಗ್ಲೀಷ್ ನಲ್ಲಿರುವ ಪಾಠಗಳು ಕನ್ನಡದಲ್ಲಿ ಪೂರ್ಣ ಅನುವಾದವಾಗಿಲ್ಲ.
ಇಂತಹ ಸಂದರ್ಭದಲ್ಲಿ ಪಠ್ಯಪೂರೈಕೆಯಲ್ಲಿ ಕೊರತೆಯಿದೆ. ಅತ್ಯಂತ ಖೇದಕರ ಸಂಗತಿಯೆಂದರೆ ಪ್ರಶ್ನೆಪತ್ರಿಕೆ ಎರಡೂ ಭಾಷೆಯಲ್ಲಿದ್ದು ಮಕ್ಕಳು ಉತ್ತರಿಸುವಾಗ ಒಂದು ಭಾಷೆ ಆರಿಸಿಕೊಳ್ಳಬೇಕು.
ಕನ್ನಡದಲ್ಲಿ ಸರಿಯಾದ ಉತ್ತರ ಬರೆದರೆ ಬಿ ಗ್ರೇಡ್ ಲಭ್ಯ.ಆದರೆ ಇಂಗ್ಲೀಷ್ನಲ್ಲಿ ಇತ್ರ ಬರೆದರೆ ಎ ಗ್ರೇಡ್ ಸಿಗುತ್ತದೆ. ಕನ್ನಡದ ಮಕ್ಕಳಿಗೆ ಎ ಗ್ರೇಡ್ ನಿರಾಕರಣೆ ಮಾಡಲಾಗಿದೆ. ಇದೆಂತಹ ನ್ಯಾಯ? ಎಂದು ಶಿಕ್ಷಣ ತಜ್ಞ ವಲಯದಲ್ಲಿ ದೊಡ್ಡ ಜಿಜ್ಞಾಸೆ ಉಂಟಾಗಿದೆ.
ಎ ಗ್ರೇಡ್ ಆಸೆಗೆ ಮಕ್ಕಳು ಇಂಗ್ಲೀಷ್ ಭಾಷೆಯ ಬಗ್ಗೆ ಆಕರ್ಷಣೆ ಹೊಂದುತ್ತಾರೆ. ಕನ್ನಡದ ಬಗ್ಗೆ ತಾತ್ಸಾರ ತಾಳುತ್ತಾರೆ. ಹೀಗೆ ಪೋಷಿಸ ಬೇಕಾದ ಆಡಳಿತ ನೀತಿಯಿಂದ ಕನ್ನಡ ಮೂಲೆಗುಂಪಾಗಬಹುದು.
ಸಾರ್ವಜನಿಕ ಚರ್ಚೆಯಾದರೆ ದ್ವಿಭಾಷಾ ನೀತಿಗೆ ಸ್ಪಷ್ಟತೆ ಸಿಗುತ್ತದೆ
ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಶಿವಮೊಗ್ಗ ಜಿಲ್ಲಾ ಶಾಖೆಯ ಅಧ್ಯಕ್ಷ ಡಾ.ಸುಧೀಂದ್ರ ಹೇಳಿದರು.
ದ್ವಿಭಾಷಾ ನೀತಯ ಬಗ್ಗೆ ರಾಜ್ಯ ಸರ್ಕಾರಕ್ಕೆ ನಿರ್ಧಾರ ಬದಲಿಸಲು ರಾಷ್ಟ್ರಪತಿಗಳಿಗೆ ಮನವಿ ಪತ್ರ ಕಳಿಸಲು ಶಿವಮೊಗ್ಗ ಜಿಲ್ಲಾಧಿಕಾರಿಗಳ ಸಮ್ಮುಖ ತಮ್ಮ ಅಭಿಪ್ರಾಯಗಳನ್ನ ಹಂಚಿಕೊಂಡರು.

ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಮನವಿ ಪತ್ರದ ಪ್ರಮುಖ ಅಂಶ ಓದಿ ಗೌರವಾನ್ವಿತ ರಾಷ್ಟ್ರಪತಿಗಳಿಗೆ ತಮ್ಮ ಕಛೇರಿಮೂಲಕ ಕಳಿಸಲಾಗುವುದು ಎಂದು ಸೂಚಿಸಿದರು.

ಪರಿಷತ್ತಿನ ವಿಭಾಗ ಪ್ರಮುಖ ಹರ್ಷ ಹೊಸಳ್ಳಿ, ಕಾರ್ಯದರ್ಶಿ ಸುರೇಶ್ ಭಟ್, ಖಜಾಂಚಿ ಕೆ.ಜಿ.ಮಂಜುನಾಥ ಶರ್ಮ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯ ನ್ಯಾಯವಾದಿ ಕೆ.ಸಿ.ಬಸವರಾಜ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S. N. Channabasappa ಶಿವಮೊಗ್ಗದ ವಿವಿಧ ಬಡಾವಣೆಗಳಲ್ಲಿ ಶಾಸಕ ” ಚೆನ್ನಿ” ಅವರಿಂದ ಕಾಮಗಾರಿಗಳಿಗೆ ಭೂಮಿ ಪೂಜೆ

S. N. Channabasappa ಶಿವಮೊಗ್ಗ ನಗರದ ಪ್ರತಿಯೊಂದು ವಾರ್ಡ್ ಹಾಗೂ ಬಡಾವಣೆಗಳಲ್ಲಿ...

Chamber of commerce Shivamogga “ಬೆಂಗಳೂರಿನಾಚೆ ಕೈಗಾರಿಕಾ ಅಭಿವೃದ್ಧಿ” ಗಾಗಿ ಶಿವಮೊಗ್ಗ ನಗರವನ್ನ ಸೇರ್ಪಡಿಸಿ- ಎಸ್.ರುದ್ರೇಗೌಡ

Chamber of commerce Shivamogga ಬೆಂಗಳೂರಿನಾಚೆಗಿನ ಕೈಗಾರಿಕೆಗಳ ಅಭಿವೃದ್ಧಿಗಾಗಿ ಶಿವಮೊಗ್ಗ ನಗರ...