ಶಿವಮೊಗ್ಗ ನಗರದಲ್ಲಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವ ಹಾಗೂ ಟ್ರಾಫಿಕ್ ಜಾಮ್ ಸಮಸ್ಯೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿ, ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸುತ್ತಿದ್ದ 4 ನಗರ ಸಾರಿಗೆ ಬಸ್‌ಗಳ ಸಂಚಾರ ಮಾರ್ಗವನ್ನು ಬದಲಾಯಿಸಿ ಶಿವಮೊಗ್ಗ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಟಿ. ಸೀನಪ್ಪ ಶೆಟ್ಟಿ ವೃತ್ತದಿಂದ (ಗೋಪಾಲ ವೃತ್ತ) ಜೆ.ಪಿ.ಎನ್. ರಸ್ತೆ ಮಾರ್ಗವಾಗಿ ಕುವೆಂಪು ರಸ್ತೆ, ಜುವೆಲ್ ರಾಕ್ ಹೋಟೆಲ್ ರಸ್ತೆ ಹಾಗೂ ಜೈಲ್ ಸರ್ಕಲ್ ಮೂಲಕ ಲಕ್ಷ್ಮಿ ಟಾಕೀಸ್ ವರೆಗೆ ಭಾರಿ ವಾಹನಗಳು ಸಂಚರಿಸುತ್ತಿದ್ದುದರಿಂದ, ಈ ರಸ್ತೆಗಳಲ್ಲಿ ತೀವ್ರ ಸ್ವರೂಪದ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಸಾರ್ವಜನಿಕರ ಹಾಗೂ ವಾಹನ ಸವಾರರ ಸುಗಮ ಸಂಚಾರಕ್ಕಾಗಿ ಈ ಮಾರ್ಗದಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸುವಂತೆ ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಪೊಲೀಸ್ ಅಧೀಕ್ಷಕರು ಮತ್ತು ಪ್ರಾದೇಶಿಕ ಸಾರಿಗೆ అಧಿಕಾರಿಗಳ ವರದಿ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.
ಬದಲಾವಣೆಯಾದ ಬಸ್ ಮಾರ್ಗಗಳ ವಿವರ:
ಕೇಂದ್ರ ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿಗಳು 1989ರ ನಿಯಮ 221 (ಎ) (5) ರನ್ವಯ ಒಟ್ಟು 4 ನಗರ ಸಾರಿಗೆ ಬಸ್‌ಗಳ ಮಾರ್ಗಗಳನ್ನು ಈ ಕೆಳಗಿನಂತೆ ಬದಲಾಯಿಸಲಾಗಿದೆ:
ವಾಹನ ಸಂಖ್ಯೆ: KA-19-F-2246 ಹಿಂದಿನ ಮಾರ್ಗ: ಟಿ. ಸೀನಪ್ಪ ಶೆಟ್ಟಿ ವೃತ್ತ (ಗೋಪಾಲ ವೃತ್ತ) – ಮೆಗ್ಗಾನ್ ಆಸ್ಪತ್ರೆ ಗೇಟ್ – ಜುವೆಲ್ ರಾಕ್ ಹೋಟೆಲ್ – ಕುವೆಂಪು ರಸ್ತೆ – ಪಿ ಅಂಡ್ ಟಿ ಕ್ವಾಟ್ರಸ್ ಮೂಲಕ ವಿನೋಬಾ ನಗರ.
ಬದಲಾದ ಹೊಸ ಮಾರ್ಗ: ಟಿ. ಸೀನಪ್ಪ ಶೆಟ್ಟಿ ವೃತ್ತ (ಗೋಪಾಲ ವೃತ್ತ) – ಬಾಲ ರಾಜ್ ಅರಸ್ ರಸ್ತೆ – ಮಹಾವೀರ್ ಸರ್ಕಲ್ – ಸವಳಂಗ ರಸ್ತೆ ಮಾರ್ಗವಾಗಿ.
ವಾಹನ ಸಂಖ್ಯೆ: KA-18-F-4235 ಹಿಂದಿನ ಮಾರ್ಗ: ಟಿ. ಸೀನಪ್ಪ ಶೆಟ್ಟಿ ವೃತ್ತ – ಜುವೆಲ್ ರಾಕ್ ಹೋಟೆಲ್ – ಕುವೆಂಪು ರಸ್ತೆ – ಜೈಲ್ ಸರ್ಕಲ್ – ಲಕ್ಷ್ಮಿ ಟಾಕೀಸ್ ಸರ್ಕಲ್.
ಬದಲಾದ ಹೊಸ ಮಾರ್ಗ: ಟಿ. ಸೀನಪ್ಪ ಶೆಟ್ಟಿ ವೃತ್ತ – ಬಾಲ ರಾಜ್ ಅರಸ್ ರಸ್ತೆ – ಮಹಾವೀರ್ ಸರ್ಕಲ್ – ಸವಳಂಗ ರಸ್ತೆ ಮಾರ್ಗವಾಗಿ.
ವಾಹನ ಸಂಖ್ಯೆ: KA-18-F-4235 ಹಿಂದಿನ ಮಾರ್ಗ: ಟಿ. ಸೀನಪ್ಪ ಶೆಟ್ಟಿ ವೃತ್ತ – ಮೆಗ್ಗಾನ್ ಆಸ್ಪತ್ರೆ ಗೇಟ್ – ಜುವೆಲ್ ರಾಕ್ ಹೋಟೆಲ್ – ಕುವೆಂಪು ರಸ್ತೆ – ಪಿ ಅಂಡ್ ಟಿ ಕ್ವಾಟ್ರಸ್ ಮೂಲಕ ವಿನೋಬಾ ನಗರ.
ಬದಲಾದ ಹೊಸ ಮಾರ್ಗ: ಟಿ. ಸೀನಪ್ಪ ಶೆಟ್ಟಿ ವೃತ್ತ – ಬಾಲ ರಾಜ್ ಅರಸ್ ರಸ್ತೆ – ಮಹಾವೀರ್ ಸರ್ಕಲ್ – ಸವಳಂಗ ರಸ್ತೆ ಮಾರ್ಗವಾಗಿ.
ವಾಹನ ಸಂಖ್ಯೆ: KA-20-F-2199 ಹಿಂದಿನ ಮಾರ್ಗ: ಟಿ. ಸೀನಪ್ಪ ಶೆಟ್ಟಿ ವೃತ್ತ – ಜುವೆಲ್ ರಾಕ್ ಹೋಟೆಲ್ – ಕುವೆಂಪು ರಸ್ತೆ – ಜೈಲ್ ಸರ್ಕಲ್ – ಲಕ್ಷ್ಮಿ ಟಾಕೀಸ್ ಸರ್ಕಲ್.
ಬದಲಾದ ಹೊಸ ಮಾರ್ಗ: ಟಿ. ಸೀನಪ್ಪ ಶೆಟ್ಟಿ ವೃತ್ತ – ಬಾಲ ರಾಜ್ ಅರಸ್ ರಸ್ತೆ – ಮಹಾವೀರ್ ಸರ್ಕಲ್ – ಸವಳಂಗ ರಸ್ತೆ ಮಾರ್ಗವಾಗಿ.
ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ನಗರದ ಸುಗಮ ವಾಹನ ಸಂಚಾರಕ್ಕಾಗಿ ಈ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹೊರಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ನಗರ ಸಾರಿಗೆ ಬಸ್ ಗಳ ಸಂಚಾರಕ್ಕೆ ಮಾರ್ಗ ಬದಲಾವಣೆ
Date:
