Friday, September 25, 2026
Friday, September 25, 2026

ದೋಷಗಳನ್ನು ಸಕಾರಣ ಖಂಡಿಸುವುದು ಸಜ್ಜನಿಕೆಯ ಲಕ್ಷಣ- ಡಾ.ಹೆಚ್.ಬಿ.ಮಂಜುನಾಥ್,ದಾವಣಗೆರೆ

Date:

ಸಜ್ಜನಿಕೆ ಎಂದರೆ ಎಲ್ಲರಿಗೂ ತಲೆಬಾಗಬೇಕೆಂಬ ಹೇಡಿತನವಲ್ಲ, ದೋಷಗಳನ್ನು ಸಕಾರಣವಾಗಿ ಖಂಡಿಸುವುದು ಸಹಾ ಸಜ್ಜನಿಕೆಯ ಲಕ್ಷಣ ಎಂದು ಹಿರಿಯ ಪತ್ರಕರ್ತ ಡಾ. ಎಚ್. ಬಿ. ಮಂಜುನಾಥ ಅಭಿಪ್ರಾಯ ಪಟ್ಟರು.

ಅವರಿಂದು ನಗರದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಏರ್ಪಾಡಾಗಿರುವ ಮೂರು ದಿನಗಳ ‘ಆಧ್ಯಾತ್ಮಿಕ ಪರ್ವ ಉತ್ಸವ’ವನ್ನು ದೀಪ ಬೆಳಗಿ ಉದ್ಘಾಟಿಸಿ ಮಾತನಾಡುತ್ತಾ ಅಧ್ಯಾತ್ಮವೆಂದರೆ ತನ್ನ ಅಂತರಂಗವನ್ನು ತಾನು ಅರಿತುಕೊಂಡು ಅದರ ಪರಿಶುದ್ಧತೆ ಮಾಡಿಕೊಳ್ಳುವುದು, ಇದಕ್ಕೆ ಅಧಿಬೌತಿಕ, ಅಧಿದೈವಿಕ ಪ್ರಕ್ರಿಯೆಗಳು ಸೋಪಾನಗಳಿದ್ದಂತೆ, ಇದಕ್ಕಾಗಿ ಸರಳತೆ, ಸಜ್ಜನಿಕೆ ಮತ್ತು ಸಮದೃಷ್ಟಿಯನ್ನು ಮೈಗೂಡಿಸಿಕೊಳ್ಳಬೇಕು. ಸರಳತೆಯು ಜಿಪುಣತೆಯ, ಸಜ್ಜನಿಕೆಯು ಹೇಡಿತನದ, ಸಮದೃಷ್ಟಿಯು ಪ್ರಚಾರದ ರೂಪವಾಗಬಾರದು ಎಂದರು. ಶಾಲಾ ಮಕ್ಕಳಿಗೆ ಅರ್ಥವಾಗುವಂತೆ ಉದಾಹರಣೆ ನೀಡುತ್ತಾ ಕಾರು ಬೈಕುಗಳ ಬದಲಾಗಿ ಸಾರ್ವಜನಿಕ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸುವುದು ಸರಳತೆಯಾದರೆ ಸಹ ಪ್ರಯಾಣಿಕರಿಗೆ ತೊಂದರೆ ಕಿರಿಕಿರಿ ಯಾಗದಂತೆ ಪ್ರಯಾಣಿಸುವುದು ಸಜ್ಜನಿಕೆ, ಹಿರಿಯರು, ದೈಹಿಕ ತೊಂದರೆಗಳಿರುವವರು ಸಹಾ ನಮ್ಮಂತೆಯೇ ಪ್ರಯಾಣಿಕರು ಎಂದು ತಿಳಿದು ನಮ್ಮ ಸೀಟನ್ನು ಅವರಿಗೆ ಬಿಟ್ಟುಕೊಡುವುದು ಸಮದೃಷ್ಟಿ, ಸಮಭಾವ ಎಂದು ಡಾ. ಎಚ್. ಬಿ. ಮಂಜುನಾಥ ಹೇಳಿದರು.

ಪ್ರಾಸ್ತಾವಿಕ ನುಡಿಗಳನಾಡುತ್ತಾ, ರಾಷ್ಟ್ರೋತ್ಥಾನ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ಹೆಚ್ ಜಯಣ್ಣ ರವರು ಸಮರ್ಥ ನಾಯಕತ್ವದ ಗುಣಲಕ್ಷಣಗಳನ್ನು, ಅದನ್ನು ಹೊಂದಬೇಕಾದ ವಿಧಾನಗಳನ್ನು ನಿದರ್ಶನಗಳ ಮೂಲಕ ವಿವರಿಸಿದರು. ಪ್ರಾಂಶುಪಾಲ ಮಂಜುನಾಥ್, ಐಶ್ವರ್ಯ, ಬಸವರಾಜ್, ಸಂಪನ್ಮೂಲ ವ್ಯಕ್ತಿಗಳಾದ ಸಂತೋಷ್, ಸುಷ್ಮಾ, ವಿವೇಕ್, ಚಂದ್ರಶೇಖರ್, ಫಕೀರಪ್ಪ ಗೌಡ, ಜಯಪ್ಪ ಟಿ ಮುಂತಾದವರು ಉಪಸ್ಥಿತರಿದ್ದು ಸಂಸ್ಕೃತಿ, ವೈಷ್ಣವಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಸ್ವಾಗತ ಹಾಗೂ ವಂದನಾರ್ಪಣೆಯನ್ನು ಅಮೃತ ಹೆಚ್ ಎಂ ನೆರವೇರಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಮಾನವ ದೀರ್ಘಕಾಲ ಸಮತೋಲನದಿಂದ ಬದುಲು ಆಯುರ್ವೇದ ಸಹಕಾರಿ : ಬಿ.ವೈ.ರಾಘವೇಂದ್ರ

B.Y. Raghavendra ಆಯುರ್ವೇದ ಭಾರತದ ಅತ್ಯಂತ ಪ್ರಾಚೀನ ಮತ್ತು ಸಾಂಪ್ರದಾಯಿಕ ವೈದ್ಯಕೀಯ...

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...