Monday, August 17, 2026
Monday, August 17, 2026

ಶ್ರಮಜೀವಿಗಳಾದ ದೇವಾಂಗ ಸಮುದಾಯವು ರಾಜಕೀಯ ಭಿನ್ನಾಭಿಪ್ರಾಯ ಬಿಟ್ಟು ಒಗ್ಗಟ್ಟಾಗಿರಬೇಕು- ಟಿ.ರಾಜೇಶ್

Date:

ಶ್ರಮ ಜೀವಿಗಳಾದ ದೇವಾಂಗ ಸಮುದಾಯ ಶೈಕ್ಷ ಣಿಕ, ಸಂಘಟನಾತ್ಮಕವಾಗಿ ಮತ್ತಷ್ಟು ಸದೃಢರಾಗಬೇಕಿದೆ. ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಗ್ಗಟ್ಟಾಗಿರಬೇಕು ಎಂದು ದೇವಾಂಗ ಸಮಾಜದ ಜಿಲ್ಲಾಧ್ಯಕ್ಷ ಟಿ. ರಾಜೇಶ್ ಕರೆನೀಡಿದರು.

ಪಟ್ಟಣದ ಶ್ರೀರಂಗ ಕನ್ವೆನ್ಷನ್ ಹಾಲ್ ದೇವಾಂಗ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆಯ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆ ಸಮುದಾಯದ ಸಂಘಟನೆಯು ರಾಜ್ಯದಲ್ಲಿಯೇ ವಿಶೇಷ ಮೆಚ್ಚುಗೆ ಪಡೆದಿದೆ. ಹಿರಿಯರ ಮಾರ್ಗದರ್ಶನದಡಿ ಸಮಾಜ ಸಂಘಟಿಸುವ ಕೆಲಸ ಮಾಡಬೇಕಿದೆ. ತಾಲೂಕಿನಲ್ಲಿ 183 ದೇವಾಂಗ ಮತ್ತು 356 ನೇಕಾರ ಕುಟುಂಬಗಳಿದ್ದು, ದೇವರ ದಾಸಿಮಯ್ಯ ಜಯಂತಿಯನ್ನು ಅದ್ಧೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸುವಂತೆ ತಿಳಿಸಿದರು.

ಸಭೆಯ ನೂತನ ಅಧ್ಯಕ್ಷರಾಗಿ ಇ.ಎಚ್. ಶಶಿಧರ ಉರುಗನಹಳ್ಳಿ, ಉಪಾಧ್ಯಕ್ಷರಾಗಿ ನೇಮರಾಜ್ ಶಾಂತಗೇರಿ, ಕಾರ್ಯದರ್ಶಿಯಾಗಿ ಎಂ.ಸ್. ಸತೀಶ್, ಖಂಚಾಯಾಗಿ ರವಿ ಕೆ. ಸುತ್ತುಕೋಟೆ, ಸಂಘಟನಾ ಕಾರ್ಯದರ್ಶಿಗಳಾಗಿ ಕೆ.ವಿ. ಕುಮಾರ್, ಎಲ್. ವೆಂಕಟೇಶ್, ಸಹ ಕಾರ್ಯದರ್ಶಿಯಾಗಿ ಕೆ. ಸತೀಶ್, ನಿರ್ದೇಶಕರುಗಳಾಗಿ ಸುರೇಶ್ ಪಿ. ಸೊರಬ, ಎ. ರಂಗನಾಥ್, ಕೆ.ವಿ. ಪ್ರಕಾಶ್, ಹೇಮಾವತಿ, ಸಿ.ಕೆ. ರಾಜಪ್ಪ ಉರುಗನಹಳ್ಳಿ, ಎಂ.ಆರ್. ಲಿಂಗರಾಜ್, ಕೆ. ರವಿ, ಪಿ. ಸುರೇಶ್, ಗೋಪಿನಾಥ್ ಮಳಲಿಕೊಪ್ಪ ಅವರನ್ನು ಸರ್ವಾನುಮತದಿಂದ ಆಯ್ಕೆಮಾಡಿ, ಅಭಿನಂದಿಸಲಾಯಿತು.

ದೇವಾಂಗ ಸಮಾಜದ ತಾಲೂಕು ಗೌರವಾಧ್ಯಕ್ಷ ಎಸ್.ಬಿ. ನಾಗರಾಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜದ ರಾಜ್ಯ ಸಮಿತಿಯ ಟಿ.ಟಿ. ವೆಂಕಟೇಶ್, ಶಿವಯೋಗಿ, ನಿಕಟಪೂರ್ವ ಅಧ್ಯಕ್ಷ ಡಿ. ಪರಸಪ್ಪ ಸಮಾಜದ ಪದಾಧಿಕಾರಿಗಳು ಉಪಸ್ಥಿತರಿದ್ದರು, ಎಂ.ಎಚ್. ಶ್ರೇಯ ಪ್ರಾರ್ಥಿಸಿ, ಎನ್. ಬಸವಂತಪ್ಪ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Bharat Scouts and Guides ಸ್ಕೌಟ್ಸ್ ಮತ್ತು ಗೈಡ್ಸ್ ನ ಪ್ರಮುಖ ಧ್ಯೇಯವೇ ದೇಶಪ್ರೇಮ- ಶಕುಂತಳಾ ಚಂದ್ರಶೇಖರ್

Bharat Scouts and Guides ನಮ್ಮ ದೇಶದ 80ನೇ ಸ್ವಾತಂತ್ರ್ಯೋತ್ಸವವನ್ನು ಭಾರತ್...

Chamber of commerce Shivamogga ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಜಾಗತಿಕವಾಗಿ ಗಂಭೀರ ಸಮಸ್ಯೆಯಾಗಿದೆ: ಆರ್.ಮನೋಹರ್

Chamber of commerce Shivamogga ಶಿವಮೊಗ್ಗ ನಗರದ ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್...

Araga Jnanendra ಶಿವಮೊಗ್ಗದಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

Araga Jnanendra ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು...